ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಧಿಕಾ ಪಂಡಿತ್‌ಗೆ ಮಾತ್ರ ಒಲಿದ ಅಪೂರ್ವ ಅದೃಷ್ಟ (Radhika Pandith | Krishnan Love Story | Olave Jeevana Lekkachara | Moggina Manasu | Love Guru)
ಸುದ್ದಿ/ಗಾಸಿಪ್
Bookmark and Share Feedback Print
 
Radhika Pandit
MOKSHA
ಯಾರಿಗೂ ಒಲಿಯದ ಅದೃಷ್ಟವೊಂದು ನಿನ್ನೆ ಮೊನ್ನೆ ಕಣ್ಣು ಬಿಟ್ಟ ರಾಧಿಕಾ ಪಂಡಿತ್‌ಗೆ ಒಲಿದಿದೆ. ಅದೇನು ಅಂದಿರಾ? ತಮ್ಮ ಎಲ್ಲಾ ಚಿತ್ರಗಳೂ ಒಂದೇ ಚಿತ್ರ ಮಂದಿರದಲ್ಲಿ ಬಿಡುಗಡೆ ಅಗುತ್ತಿರುವುದು! ಹೌದು. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಎಷ್ಟೋ ನಿರ್ಮಾಪಕರಿಗೆ ಚಿತ್ರಮಂದಿರವೇ ಸಿಗದ ಸ್ಥಿತಿ ಇರುವಾಗ ಬೇರೆ ಬೇರೆ ನಿರ್ಮಪಕರ ಬ್ಯಾನರ್ ಅಡಿ ಮಾಡಿದ ಚಿತ್ರ ಒಂದೇ ಮಂದಿರದಲ್ಲಿ ಪ್ರದರ್ಶನಗೊಳ್ಳುವುದು ನಿಜಕ್ಕೂ ಭಾಗ್ಯವೇ ಸರಿ.

ಇದು ಕಾಕತಾಳೀಯವಾದರೂ ಸತ್ಯ. ನಟಿ ರಾಧಿಕಾ ಪಂಡಿತ್ ಅಭಿನಯದ ನಾಲ್ಕನೇ ಚಿತ್ರ ಕೃಷ್ಣನ್ ಲವ್ ಸ್ಟೋರಿ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರ ಸಾಗರ್‌ನಲ್ಲಿ ತೆರೆಕಂಡಿದೆ. ರಾಧಿಕಾ ನಟಿಸಿದ ಮೊದಲ ಚಿತ್ರ ಮೊಗ್ಗಿನ ಮನಸ್ಸು ಇಲ್ಲೇ ಲೋಕಾರ್ಪಣೆಗೊಂಡಿತ್ತು. ಜತೆಗೆ ಶತಕವನ್ನೂ ಬಾರಿಸಿತ್ತು. ನಂತರ ಬಂದ ಲವ್ ಗುರು ಚಿತ್ರ ಇದೇ ಚಿತ್ರಮಂದಿರದಲ್ಲಿ ಐವತ್ತು ದಿನ ಪೂರೈಸಿತ್ತು. ಅದು ಹೋಗ ಹೋಗುತ್ತಿದ್ದಂತೇ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ತೆರೆಕಂಡಿತು. ಈಗ ನಾಲ್ಕನೇ ಚಿತ್ರ ಕೃಷ್ಣನ್ ಲವ್ ಸ್ಟೋರಿಯ ಸರದಿ.

ಇದರಲ್ಲಿ ಇವರದ್ದು ಮಧ್ಯಮ ವರ್ಗದ ಹುಡುಗಿ ಪಾತ್ರ. ದ್ವಿತಿಯಾರ್ಧದ ನಂತರ ಮೇಕಪ್ ರಹಿತವಾಗುತ್ತಾರೆ. ಆಗ ಅಭಿನಯಕ್ಕೆ ಮತ್ತಷ್ಟು ಒತ್ತು ಬರುತ್ತದೆ. ಒಟ್ಟಾರೆ ರಾಧಿಕಾ ಪಾಲಿಗೆ ಇದೊಂದು ಅದ್ಬುತ ಚಿತ್ರವಂತೆ. ಉಳಿದಂತೆ ಇವರ ಗಾನಾ ಬಜಾನಾ ಚಿತ್ರದ ಶೂಟಿಂಗ್ ಮುಗಿದಿದೆ. ಇನ್ನೂ ಎರಡು ಚಿತ್ರಗಳು ಒಂದು ಅದ್ದೂರಿ, ಮತ್ತೊಂದು ಮಾತುಕತೆಯ ಹಂತದಲ್ಲಿರುವ ಚಿತ್ರ ಸೆಟ್ಟೇರಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಧಿಕಾ ಪಂಡಿತ್, ಕೃಷ್ಣನ್ ಲವ್ ಸ್ಟೋರಿ, ಒಲವೇ ಜೀವನ ಲೆಕ್ಕಾಚಾರ, ಮೊಗ್ಗಿನ ಮನಸು, ಲವ್ ಗುರು