ನಮ್ಮ ನಗೆ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಮತ್ತೊಮ್ಮೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೌದು. ಇವರೇ ಸಿದ್ಧಪಡಿಸಿ ಹೊರತಂದಿರುವ ಬಿ. ಬಸವರಾಜು ಹಾಗೂ ಎ. ವೆಂಕಟೇಶ್ ನಿರ್ಮಾಣದ 'ಶೌರ್ಯ' ಚಿತ್ರ ಇನ್ನೇನು ತೆರೆ ಕಾಣಲಿದೆ.
MOKSHA
ಸಾಧು ಸಂಗೀತ ನಿರ್ದೇಶನವನ್ನೂ ನಿಭಾಯಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮದಲಸಾ ಶರ್ಮ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಸದ್ಯ ಸ್ಟುಡಿಯೋ ರೌಂಡಪ್ ನಡೆಯುತ್ತಿದೆ. ತೆಲುಗಿನ ಶೌರ್ಯಂ ಚಿತ್ರದ ರಿಮೇಕ್ ಇದಾಗಿದೆ. ಆದಷ್ಟು ಬೇಗ ಬಿಡುಗಡೆ ಆಗಲಿದೆ ಎಂಬ ಸೂಚನೆಯನ್ನೂ ಸಾಧು ನೀಡಿದ್ದಾರೆ.
ದರ್ಶನ್ ಒಬ್ಬ ಲಾಜಿಕ್ ನಟ ಅನ್ನುವುದರಲ್ಲಿ ಸಂಶಯವಿಲ್ಲ. ಸದ್ಯ ಇವರ ಚಿತ್ರಗಳು ಸೋಲುತ್ತಿದ್ದರೂ, ನಿರ್ಮಾಪಕರಿಗೆ ನಷ್ಟ ಉಂಟು ಮಾಡುತ್ತಿಲ್ಲ. ವಿಪರೀತ ಹಣ ಗಳಿಸದಿದ್ದರೂ, ಲಾಸ್ ಅಂತೂ ಮಾಡುತ್ತಿಲ್ಲ. ಇದರಿಂದಲೇ ದರ್ಶನ್‌ಗೆ ಇನ್ನೂ ಬೇಡಿಕೆ ಕುಂದಿಲ್ಲ. ಸದ್ಯ ಚಿತ್ರದ ದ್ವನಿಸುರುಳಿ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ.