ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜೋಗಯ್ಯ ಅದ್ದೂರಿ ಮುಹೂರ್ತಕ್ಕೆ ಅಮೀರ್ ಖಾನ್, ಮಮ್ಮುಟ್ಟಿ! (Jogayya | Amir Khan | Shivaraj Kumar | Prem)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 100ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಗಯ್ಯನ ಚಿತ್ರೀಕರಣ ಇನ್ನೇನು ಆರಂಭವಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ಅದಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರ ಅರಮನೆ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ಸೆಟ್‌ನಲ್ಲಿ ಚಾಲನೆ ಪಡೆಯಲಿದೆ.

ಜೋಗಿ ಚಿತ್ರದ ಎರಡನೇ ಅವತರಣಿಕೆಯೆಂದೇ ಹೇಳುತ್ತಿರುವ ಜೋಗಯ್ಯ ಚಿತ್ರ ನಿರ್ಮಾಣ ಸಂದರ್ಭ ನಡೆಯುವ ಕಾರ್ಯಕ್ರಮಕ್ಕೆ ಖ್ಯಾತನಾಮರನ್ನು ಕರೆಸುವುದಾಗಿ ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಯಾರು ಬರಬಹುದು ಅಂತ ಕುತೂಹಲವೇ? ಹಾಗಾದರೆ ಕೇಳಿ ಹಿಂದಿಯ ಜನಪ್ರಿಯ ನಟ ಅಮೀರ್ ಖಾನ್, ಮಲಯಾಳಂನ ಮಮ್ಮೂಟ್ಟಿ, ತಮಿಳಿನ ಜನಪ್ರಿಯ ನಟ ವಿಜಯ್ ಆಗಮಿಸಿ ಜೋಗಯ್ಯನಿಗೆ ಶುಭ ಹಾರೈಸಲಿದ್ದಾರಂತೆ. ಇವರ ಜತೆ ಹಲವು ರಾಜಕಾರಣಿಗಳೂ ಇರುತ್ತಾರಂತೆ.

ಚಿತ್ರವನ್ನು ವ್ಯವಸ್ಥಿತವಾಗಿ ನಿರ್ಮಿಸಲು, ಜನರಿಗೆ ಒಪ್ಪಿಸಲು ಉತ್ತಮ ತಯಾರಿಯನ್ನು ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕಿ ರಕ್ಷಿತಾ ಮಾಡಿಕೊಂಡಿದ್ದಾರಂತೆ. ಕನಿಷ್ಠ 300 ಕೇಂದ್ರದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಅವರು ನಿರ್ಧರಿಸಿದ್ದಾರಂತೆ. ಚಿತ್ರ ಆರಂಭಕ್ಕೂ ಮುನ್ನವೇ ಸಾಕಷ್ಟು ಸುದ್ದಿ ಮಾಡುತ್ತಿರುವ ಈ ಜೋಗಯ್ಯ ವಿಘ್ನವಿಲ್ಲದೆ ಮುಂದೆ ಸಾಗಲಿ ಎಂದೇ ಆಶಿಸೋಣ.

ಜೋಗಯ್ಯ ಚಿತ್ರದ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೋಗಯ್ಯ, ಅಮೀರ್ ಖಾನ್, ಶಿವರಾಜ್ ಕುಮಾರ್, ಪ್ರೇಮ್