ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೊನೆಗೂ ಬಿಡುಗಡೆ ಭಾಗ್ಯ ಕಾಣಲಿರುವ ಸುದೀಪ್‌ರ ತೀರ್ಥ (Theertha | Sudeep | Kichcha | Sadhu Kokila)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಸುದೀಪ್ ಒಂದು ಭಿನ್ನ ಗೆಟಪ್ಪಿನಲ್ಲಿ ತೆರೆಗೆ ಬಂದಿದ್ದಾರೆ. ಅವರ ಈ ಚಿತ್ರ ಬರುವ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದ ಹೆಸರು ತೀರ್ಥ. ಇದನ್ನೆಲ್ಲೋ ಕೇಳಿದ ಹಾಗಿದೆ ಅಂದುಕೊಂಡಿರಾ? ಹೌದು, ಬಹು ಕಾಲದಿಂದ ಡಬ್ಬದಲ್ಲೇ ಉಳಿದು ಹೋಗಿದ್ದ ಚಿತ್ರಕ್ಕೆ ಇದೀಗ ಬಿಡುಗಡೆ ಭಾಗ್ಯ ಲಭಿಸಿದೆ.

ಕಿಚ್ಚ ಸುದೀಪ್ ಒಂದು ವಿಭಿನ್ನ ರೂಪದಲ್ಲಿ ಗೋಚರಿಸುವುದು ಚಿತ್ರದ ವಿಶೇಷ. ಇಲ್ಲಿ ನಾಯಕನ ತಾಯಿ ಮಗ ಇಷ್ಟ ಬಂದ ರೀತಿ ಬದುಕಲಿ ಅಂತ ಬಯಸುತ್ತಾಳೆ. ಆದರೆ ತಂದೆ ಇದಕ್ಕೆ ವಿರುದ್ಧ. ತಾನು ಬಯಸಿದಂತೆ ಮಗ ಇರಲಿ ಎಂದು ಆಶಿಸುತ್ತಾರೆ. ಆದರೆ ನಾಯಕನಿಗೆ ಇದು ಇಷ್ಟ ಆಗುವುದಿಲ್ಲ. ಇದೇ ಹೂರಣದಲ್ಲಿ ಮೂಡಿಬಂದ ಚಿತ್ರ ತೀರ್ಥ.

ಚಿತ್ರದಲ್ಲಿ ನಟಿಸುವ ಜತೆ ನಿರ್ದೇಶನದ ಹೊಣೆಯನ್ನೂ ಸಾಧು ಕೋಕಿಲ ಹೊತ್ತಿದ್ದಾರೆ. ಇದರಿಂದ ಸಂಗೀತ ನಿರ್ದೇಶನ ಜವಾಬ್ದಾರಿ ಗುರುಕಿರಣ್ ಹೆಗಲೇರಿದೆ. ಚಿತ್ರದಲ್ಲಿ ತಂದೆ ತಾಯಿಯರ ಮಮತೆ, ಕುಕ್ಕುಲತೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮಕ್ಕಳ ಬಗ್ಗೆ ಪಾಲಕರು ಹೊಂದಿರುವ ಕನಸನ್ನೂ ಅನಾವರಣಗೊಳಿಸಲಾಗಿದೆ. ಒಟ್ಟಾರೆ ಚಿತ್ರ ಅದ್ಬುತ ಅನ್ನಿಸುವಂತಿದೆಯಂತೆ.

ಪೋಷಕ ಪಾತ್ರದಲ್ಲಿ ಅನಂತನಾಗ್ ಹಾಗೂ ಗೀತಾ ಅಭಿನಯಿಸಿದ್ದಾರೆ. ದೊಡ್ಡಣ್ಣ, ಶೋಭರಾಜ್ ಕಾಮಿಡಿ ಪಾತ್ರದಲ್ಲಿ ಮಿಂಚಲಿದ್ದಾರೆ. ಅವಿನಾಶ್ ಸಹ ಚಿತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಒಟ್ಟಾರೆ ಪಾಲಕರನ್ನು ಇಷ್ಟ ಪಡುವ ಮಕ್ಕಳು, ಮಕ್ಕಳನ್ನು ಇಷ್ಟಪಡುವ ಪಾಲಕರು ನೋಡಲೇ ಬೇಕಾದ ಚಿತ್ರ ಇದು ಎಂದು ಚಿತ್ರತಂಡ ಹೇಳುತ್ತದೆ. ಎಲ್ಲರಿಗೂ ಆಲ್ ದಿ ಬೆಸ್ಟ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೀರ್ಥ, ಸುದೀಪ್, ಕಿಚ್ಚ, ಸಾಧು ಕೋಕಿಲಾ