ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ರಿಮೇಕಿಸುವುದು ಕನ್ನಡದಲ್ಲಿ ತೀರಾ ಸಾಮಾನ್ಯ. ಇಂದಿನ ನಿರ್ದೇಶಕರು ಈ ಕಾರ್ಯವನ್ನು ಸಲೀಸಾಗಿ ಮಾಡುತ್ತಿದ್ದಾರೆ. ಹೊಸ ಕಥೆ ಹುಡುಕಿ ಚಿತ್ರ ಮಾಡಿ, ಸೋಲುವುದಕ್ಕಿಂತ ಗೊತ್ತಿರುವುದನ್ನೇ ಮಾಡಿಕೊಂಡು ಸಾಮಾನ್ಯವಾಗಿ ಓಡಿದರೂ ಸಾಕು. ಹಾಕಿದ ದುಡ್ಡು ಮರಳಿದರೆ ಅದೇ ಗ್ರೇಟ್ ಎಂಬುದು ಇವರ ವಾದ.
ಅದೇನೇ ಇರಲಿ ಬಿಡಿ. ಇದರ ಜಾಡಿನಲ್ಲೇ ನಮ್ಮ ನಂಜುಂಡನೂ ಬಂದಿದ್ದಾನೆ. ಮಲಯಾಳಂನಿಂದ ರಿಮೇಕ್ ಆದ ಚಿತ್ರ. ಶ್ರೀನಿವಾಸ್ ಪ್ರಸಾದ್ ಇದರ ರೂವಾರಿ. ವ್ಯಕ್ತಿಯೊಬ್ಬ ಚಿಕ್ಕದೊಂದು ಸಂಗತಿಯಿಂದ ಮಾನಸಿಕ ಆಘಾತಕ್ಕೆ ಒಳಗಾಗುವುದು ಹಾಗೂ ಅದರಿಂದ ಅಗಬಹುದಾದ ಅವಾಂತರವನ್ನು ಚಿತ್ರವಸ್ತುವಾಗಿ ಬಳಸಲಾಗಿದೆ. ಇದಕ್ಕೆ ಕಾಮೆಡಿ ಟಚ್ ನೀಡಿದ್ದು, ಬಹಳ ನಿರೀಕ್ಷಿತ ಚಿತ್ರವಾಗಿದೆ. ಪಯಣದ ನಂತರ ಇವರು ಒಂದೂವರೆ ವರ್ಷದ ನಂತರ ಈ ಚಿತ್ರ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ನಟರು ಚಿತ್ರ ನಟನೆಗಾಗಿ ತೆಳ್ಳಗಾಗುತ್ತಾರೆ. ಇತ್ತೀಚೆಗೆ ಶಿವರಾಜ್ ಕುಮಾರ್ ತಮ್ಮ ಚಿತ್ರವೊಂದಕ್ಕಾಗಿ 8 ಕೇ.ಜಿ. ತೂಕ ಇಳಿಸಿಕೊಂಡದ್ದು ನಿಮಗೆ ಗೊತ್ತು. ಆದರೆ ವಿಪರ್ಯಾಸ ಅಂದರೆ ಚಿತ್ರದ ನಾಯಕ ರವಿಶಂಕರ್ ಒಂದಿಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಹೆಂಡತಿಗೆ ಸುಂದರನಾಗಿ ಕಾಣದ ಗಂಡನ ಪಾತ್ರ ಇವರದ್ದು. ಪತ್ನಿ ತನ್ನ ಪತಿ ಚೆನ್ನಾಗಿಲ್ಲ ಅಂತ ಬೇರೆಯವರನ್ನು ನೋಡುವ ಪಾತ್ರ ಚಿತ್ರದ್ದಂತೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ನಟಿ ಹಂಸಿನಿಗೆ ಇದು ಮೊದಲ ಚಿತ್ರ.
ಚಿತ್ರದ ಚಿತ್ರೀಕರಣ ಮೈಸೂರು, ಮಂಡ್ಯ, ಮಡಿಕೇರಿ, ನಂಜನಗೂಡು ಸುತ್ತಮುತ್ತ ನಡೆದಿದೆ. ಚಿತ್ರೀಕರಣ ಭರದಿಂದ ಸಾಗಿದ್ದು, ಶೀಘ್ರವೇ ಚಿತ್ರ ತೆರೆಕಾಣಲಿದೆ. ಈ ಚಿತ್ರದ ಬಗ್ಗೆ ಹಂಸಿನಿ ತುಂಬಾ ನೀರೀಕ್ಷೆ ಇರಿಸಿಕೊಂಡಿದ್ದಾರೆ. ಮೊದಲ ಚಿತ್ರವೇ ಯಶ ಕಾಣುವ ಮೂಲಕ ಕನ್ನಡ ನೆನದಲ್ಲಿ ನೆಲೆಯೂರುವ ಆಶಯ ಹೊಂದಿದ್ದಾರೆ. ಹೊಸ ಹುಡುಗಿ ಆದರೂ, ಅನುಭವ ಇರುವವರ ತರ, ಮೆಚ್ಯೂರ್ಡ್ ಅಗಿ ನಟಿಸಿದ್ದಾರೆ ಎನ್ನುವುದು ಚಿತ್ರತಂಡದ ಮಾತು. ಚಿತ್ರದಲ್ಲಿ ನಾಗರಾಜ್ ಕೋಟೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂ ಪ್ರಕಾಶ್ ರಾವ್ ಸಹ ಇದ್ದಾರೆ.