ಶಿವರಾಜ್ ಕುಮಾರ್ ಒಬ್ಬ ಉತ್ತಮ ಡಾನ್ಸರ್ ಅನ್ನುವುದರಲ್ಲಿ ಸಂಶಯವೇ ಇಲ್ಲ. ಅದನ್ನು ಮೈಲಾರಿ ಚಿತ್ರದಲ್ಲೂ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಹೌದು. ಮೈಸೂರು ಸುತ್ತಮುತ್ತ ಇವರ ಅಭಿನಯದ ಮೈಲಾರಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಒಂದು ವಿಭಿನ್ನ ಹಾಡಿಗೆ ಶಿವಣ್ಣ ಅದ್ಬುತ ಸ್ಟೆಪ್ ಹಾಕಿದ್ದಾರೆ. ಕವಿರಾಜ್ ಬರೆದಿರುವ ಗೀತೆಗೆ ಗುರುಕಿರಣ್ ಸಂಗೀತ ನೀಡಿದ್ದು, ಈ ಹಾಡು ಖಂಡಿತ ಯಶಸ್ಸು ಕಾಣಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಯಾವ ಸ್ಟೆಪ್ಪಿಗೆ ಯಾವ ವಿಗ್ ಹಾಕಬೇಕು ಎನ್ನುವುದನ್ನು ನೃತ್ಯ ನಿರ್ದೇಶಕರು ಅಚ್ಚುಕಟ್ಟಾಗಿ ಹೇಳಿಕೊಡುತ್ತಿದ್ದರೆ, ಶಿವಣ್ಣ ವಿಧೇಯ ವಿದ್ಯಾರ್ಥಿಯಂತೆ ಕೇಳಿಸಿಕೊಳ್ಳುತ್ತಿದ್ದರು. ನಂತರ ಅವರ ಮಾರ್ಗದರ್ಶನದಂತೆ ನರ್ತಿಸುತ್ತಿದ್ದರು.
MOKSHA
ಶಿವಣ್ಣ ಇದೊಂದೇ ಹಾಡಿನಲ್ಲಿ 9 ಬಗೆಯ ವಿಭಿನ್ನ ಕಾಸ್ಟ್ಯೂಮಿನಲ್ಲಿ ಗೋಚರಿಸುತ್ತಾರೆ. ಇವರೊಂದಿಗೆ ಗಂಡಹೆಂಡತಿ ಖ್ಯಾತಿಯ ಸಂಜನಾ ಗ್ಲ್ಯಾಮರಸ್ ಡ್ರೆಸ್ಸಿನಲ್ಲಿ ಥಳುಕಿ ಬಳುಕಿ ಹೆಜ್ಜೆ ಹಾಕಿದರು. ಶಿವಣ್ಣನ ಜತೆ ನರ್ತಿಸುವುದು ಸುಲಭದ ಕೆಲಸವಲ್ಲ. ಇವರೊಂದಿಗೆ ನೃತ್ಯ ಮಾಡುವುದು ಸುಲಭವಲ್ಲ. ಸ್ಟೆಪ್ ಹಾಕುವ ವೇಗಕ್ಕೆ ಸರಿಸಮನಾಗಿ ನಟಿಯರು ಹಾಕಲು ಸಾಧ್ಯವೇ ಇಲ್ಲ ಎಂಬುದು ಬಲ್ಲವರ ಮಾತು. ಆದರೂ, ಸಂಜನಾ ಇದನ್ನು ಸವಾಲಾಗಿ ಸ್ವೀಕರಿಸಿ ಈ ಹಾಡಿನಲ್ಲಿ ಗೆದ್ದಿದ್ದಾರೆ.
ನಂತರ ಮಾತಿಗೆ ಸಿಕ್ಕಾಗ ಸಂಜನಾ ಅವರು ಹೇಳಿದ್ದಿಷ್ಟು, ಶಿವಣ್ಣನ ಪ್ರತಿಭೆ ಎದುರು ನಾನು ಮಂಕಾಗಿ ಹೋದೆ. ಇವರ ಜತೆ ಡಾನ್ಸ್ ಮಾಡಲು ತುಂಬಾನೇ ಕಷ್ಟ ಆಯಿತು. ಆದರೂ ಚಿತ್ರ ತಂಡದ ಆಶಯ ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ ಎಂದರು ಸಂಜನಾ. ಬೆಂಗಳೂರಿನಲ್ಲಿ ಚಿತ್ರದ ಇನ್ನೊಂದು ಹಾಡು ಚಿತ್ರೀಕರಣಗೊಳ್ಳಲಿದೆ. ಆರ್. ಚಂದ್ರು ಉತ್ತಮ ಸೆಟ್ ಹಾಕಿದ್ದಾರೆ. ಬಹು ನಿರೀಕ್ಷೆಯ ಈ ಚಿತ್ರ ಶಿವಣ್ಣನಿಗೂ ಒಂದು ಬ್ರೇಕ್ ನೀಡಬಹುದು ಎಂದು ಹೇಳಲಾಗುತ್ತಿದೆ.