ಬಸ್ ನಿರ್ವಾಹಕನೊಬ್ಬ ಅದ್ಬುತ ನಟನಾದ ವಿಷಯ ನಿಮಗೆಲ್ಲಾ ಗೊತ್ತಿದೆ. ಹೌದು ಇಂದು ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರಾಗಿರುವ ರಜನಿಕಾಂತ್ ಅವರು ನಿರ್ವಾಹಕರಾಗಿ ನಂತರ ನಟರಾದವರು. ಇದೀಗ ಇವರ ಮಾರ್ಗದಲ್ಲಿ ಹೆಸರು ಮಾಡಲು ಇನ್ನೊಬ್ಬ ಬಸ್ ನಿರ್ವಾಹಕರು ಮುಂದಾಗಿದ್ದಾರೆ.
ಹೌದು, ಆದರೆ ಇವರು ಹೊರಟಿದ್ದು ನಟನೆ ಮೂಲಕವಲ್ಲ ಬದಲಾಗಿ ನಿರ್ದೇಶನದ ಮೂಲಕ. ಇವರ ಹೆಸರು ನಂದನ್ ಪ್ರಭು. 'ಪ್ರೀತಿಯ ಲೋಕ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಸತ್ವ ಪರೀಕ್ಷೆಗೆ ಮುಂದಾಗಿದ್ದಾರೆ.
ಬಿಎಂಟಿಸಿ ಬಸ್ ನಿರ್ವಾಹಕರಾಗಿದ್ದ ಇವರು ನಿರ್ದೇಶಕ ಎ.ಆರ್. ಬಾಬು ಬಳಿ ಕೆಲ ದಿನ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು. ಇದೀಗ ಪ್ರೀತಿಯ ಲೋಕದಲ್ಲಿ ಹೊಸಬರ ತಂಡದೊಂದಿಗೆ ಸತ್ವ ಪರೀಕ್ಷೆಗೆ ಒಳಗಾಗಲು ಮುಂದಾಗಿದ್ದಾರೆ.
ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. ಬಸ್ ಕೆಲಸ ಜೀವನ ನಿರ್ವಹಣೆಗೆ ಆಗುತ್ತೆ. ಚಿತ್ರ ನಿರ್ದೇಶನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲಕ್ಕೆ ಬಳಕೆ ಅಗುತ್ತದೆ ಎನ್ನುತ್ತಾರೆ ನಂದನ್. ಇವರ ಆಶಯ ಈಡೇರಲಿ ಉತ್ತಮ ಚಿತ್ರಗಳು ಇವರಿಂದ ಮೂಡಿ ಬರಲಿ ಎಂದು ಆಶಿಸೋಣ.