ಗಾಯಕ, ಸಂಗೀತ ನಿರ್ದೇಶಕ ಹಾಗೂ ನಟ ಗುರುಕಿರಣ್ ಸದ್ಯ ಏನು ಮಾಡುತ್ತಿದ್ದಾರೆ ಅಂತ ಕೇಳಹೊರಟರೆ, ನಮ್ಮ ಗುರು ಸಾಕಷ್ಟು ಬ್ಯುಸಿ ಆಗಿ ಬಿಟ್ಟಿದ್ದಾರೆ. ಏನ್ ಸರ್ ತುಂಬಾ ಬ್ಯುಸಿನಾ ಅಂದರೆ, ಹೌದು, ಸ್ವಲ್ಪ ಬ್ಯುಸಿನೇ. ಮೈಲಾರಿ ಚಿತ್ರಕ್ಕೆ ಒಳ್ಳೆ ಟ್ಯೂನ್ ಹಾಕ್ತಾ ಇದೀನಿ ಅಂತಾರೆ. ಒಟ್ಟಾರೆ ಮೈಲಾರಿ ರಾಗದಲ್ಲಿ ನಿರತರಾಗಿದ್ದಾರೆ ಗುರು.
ಗುರುಕಿರಣ್ ಹೆಸರಿಗೆ ಇರುವ ಶಕ್ತಿಯೇ ಅಂತದ್ದು. ಚಿತ್ರ ಬಿಡುಗಡೆಗೆ ಮುನ್ನವೇ ಅದಕ್ಕೊಂದು ಹೆಸರು ತಂದುಕೊಡುವ ಮಾದರಿಯ ಸಂಗೀತ ನಿರ್ದೇಶಿಸುತ್ತಾರೆ. ಈಗಾಗಲೇ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಆಪ್ತರಕ್ಷಕ ಸಾಕಷ್ಟು ಹೆಸರು ತಂದುಕೊಟ್ಟಿದೆ. ಈಗ ತೆಲುಗಿನ ಆಪ್ತರಕ್ಷಕಕ್ಕೂ ಸಂಗೀತ ನೀಡುತ್ತಿದ್ದಾರೆ. ಅದ್ದೂರಿ ಹಾಗೂ ಸೌಮ್ಯ ಎರಡೂ ಮಾದರಿಯ ಹಾಡನ್ನು ಇವರು ರಚಿಸುವಲ್ಲಿ ನಿಸ್ಸೀಮರು.
ಸದ್ಯ ಇವರು ಮೈಲಾರಿ, ಆಪ್ತರಕ್ಷಕದ ತೆಲುಗು ಅವತರಣಿಕೆ ಹಾಗೂ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಚಿತ್ರದ ಸಂಗೀತ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯ ಮೈಲಾರಿಯ ನಾಲ್ಕನೇ ಹಾಡನ್ನು ತಮ್ಮ ನಿರ್ಮಾಣ ಹಂತದ ಮನೆಯ ತಳಮಹಡಿಯಲ್ಲಿರುವ ಸ್ಟುಡಿಯೋದಲ್ಲಿ ಸಿದ್ಧಪಡಿಸುತ್ತಿದ್ದಾರೆ. ಈ ಚಿತ್ರವನ್ನೂ ಗೆಲ್ಲಿಸಿಕೊಡುವ ಜವಾಬ್ದಾರಿಯಲ್ಲಿ ತಮ್ಮ ಹೆಗಲನ್ನೂ ನೀಡಿದ್ದಾರೆ. ಆಲ್ ದಿ ಬೆಸ್ಟ್ ಗುರುಕಿರಣ್.