ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಎಲ್ಲಿದ್ದಾರೆ ಈಗ? (Sunil Kumar Desai | Kshana Kshana | Nishkarsha)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಿರ್ದೇಶಕ ಹೆಸರು ಮಾಡುವುದು ಉತ್ತಮ ಚಿತ್ರದ ಮೂಲಕ. ಚಿತ್ರ ಇಲ್ಲ ಅಂದರೆ ಆತ ಮತ್ತೆ ಮೂಲೆಗುಂಪು. ಇದೇ ಸ್ಥಿತಿ ನಮ್ಮ ಕ್ಷಣ ಕ್ಷಣ ಚಿತ್ರದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರದ್ದಾಗಿದೆ. ಅರೆ, ಹೌದಲ್ಲಾ ಅವರು ಈಗ ಎಲ್ಲಿದ್ದಾರೆ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ.

'ಸಂಘರ್ಷ', 'ನಿಷ್ಕರ್ಷ'ದಂತಹ 'ತರ್ಕ' ಮತ್ತಿತರ ಚಿತ್ರಗಳ ಮೂಲಕ ಹೆಸರು ಮಾಡಿದ್ದ ಈ ಸೃಜನಶೀಲ ನಿರ್ದೇಶಕರು ಇಂದು ಬನಶಂಕರಿಯ ಮೂರನೇ ಹಂತದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಹೌದು. ಅವರ ಆ ಪುಟ್ಟ ಮನೆಯ ಮುಂದೆ ಹೋದರೆ ಐದನೇ ತರಗತಿ ಓದುವ ಮಗಳು ಪೂಜಾ ದೇಸಾಯಿ, ಮಗ ಸೋಹಮ್ ದೇಸಾಯಿ ಸ್ವಾಗತಿಸುತ್ತಾರೆ. ದೇಸಾಯಿ ತುಸು ಮಂಕಾಗಿದ್ದಾರೆ ಅನ್ನಿಸುತ್ತದೆ.

'ಕ್ಷಣ ಕ್ಷಣ'ದ ನಂತರ ದೇಸಾಯಿ ಆರ್ಥಿಕವಾಗಿ ಎದ್ದು ಕೂತಿಲ್ಲ. ಖಾಸಗಿ ವಾಹಿನಿಯೊಂದಕ್ಕೆ 'ಮನಸ್ಸಿನ ಅಂಗಳದಿ' ಎಂಬ ಸೀರಿಯಲ್‌ಗೆ 40 ದಿನಗಳ ಕಾಲ ಶೂಟಿಂಗ್ ಮಾಡಿದ ನಂತರ ಟಿವಿ ವಾಹಿನಿಯವರು ಏನೇನೋ ಕಾರಣ ಹೇಳಿ ಸೀರಿಯಲ್ ಪ್ರಸಾರ ಮಾಡದೆ ನನಗೆ ತುಂಬಾ ನಷ್ಟ ಮಾಡಿ ಬಿಟ್ರು. ಅಲ್ಲಿಂದ ನನಗೆ ಎದ್ದು ಬರಲು ತುಂಬಾ ಸಮಯ ಬೇಕಾಯಿತು' ಎಂದು ಮನಸ್ಸಿಲ್ಲದ ಮನಸ್ಸಿನಿಂದ ಹೇಳುತ್ತಾರೆ.

'ಕಳೆದ ಎರಡು ವರ್ಷಗಳಿಂದ ನಟ ಪ್ರಜ್ವಲ್ ದೇವರಾಜ್ ಜತೆ 'ಸರಿಗಮ' ಚಿತ್ರದಲ್ಲಿ ಬ್ಯುಸಿ. ಆಗಸ್ಟಿನಲ್ಲಿ ಮತ್ತೆ ಶೂಟಿಂಗ್ ಶುರು. ವರ್ಷದ ಕೊನೆಯಲ್ಲಿ 'ಸರಿಗಮ' ಥಿಯೇಟರಿಗೆ ಬರಲಿದೆ. ಈ ಚಿತ್ರವನ್ನು ಖುದ್ದು ನಾನು ಹಾಗೂ ನನ್ನ ಸ್ನೇಹಿತರು ನಿರ್ಮಾಣ ಮಾಡುತ್ತಿದ್ದೇವೆ' ಎಂದು ದೇಸಾಯಿ ತಿಳಿಸಿದರು.

'ತರ್ಕ'ದಿಂದ ಆರಂಭವಾದ ಹಿಟ್‌ಗಳ ಓಟ ನಂತರದ ದಿನಗಳಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಕೇಳಿದರೆ, 'ಖಂಡಿತ, ನಿರ್ದೇಶಕನಾಗಿ ನಾನು ಎಡವಿದ್ದೇನೆ. ಮೊದಲಿನ ಚಿತ್ರಗಳಲ್ಲಿ ನಿಗೂಢತೆಗೆ ಜಾಸ್ತಿ ಮಹತ್ವ ಕೊಡುತ್ತಿದ್ದೆ. ಆದರೆ 'ಪ್ರೇಮರಾಗ ಹಾಡು ಗೆಳತಿ' ನಂತರ ಚಿತ್ರಗಳಲ್ಲಿ ಹೆಚ್ಚಾಗಿ ಹಾಡುಗಳು ಹಾಗೂ ಗ್ಲಾಮರ್‌ಗೆ ಒತ್ತು ನೀಡಿದೆ. ಕಥೆ ಹಾಗೂ ಪಾತ್ರಗಳ ಬಗ್ಗೆ ತುಂಬಾ ಸೀರಿಯಸ್ ಆಗಿ ಯೋಚನೆ ಮಾಡಿಲ್ಲ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುನಿಲ್ ಕುಮಾರ್ ದೇಸಾಯಿ, ಕ್ಷಣ ಕ್ಷಣ, ತರ್ಕ, ನಿಷ್ಕರ್ಷ