ಅಜಿತ್‌ರ ಬಹು ನಿರೀಕ್ಷೆಯ ಚಿತ್ರವಾದ ಗುಬ್ಬಿ ಬಗ್ಗೆ ನಿಮಗೆಲ್ಲಾ ಗೊತ್ತು. ಈ ಚಿತ್ರದ ಚಿತ್ರೀಕರಣ ಒಂದೆಡೆ ಭರದಿಂದ ಸಾಗಿದೆ. ಇದೀಗ ಇದರ ನಡುವೆಯೇ ಚಿತ್ರದ ದ್ವನಿ ಸುರುಳಿಯೂ ಅಭಿಮಾನಿಗಳಿಗೆ ಲಭ್ಯವಾಗಿದೆ.
ನಮನ ಫಿಲಂ ಲಾಂಛನದ ಅಡಿ ಅಣಜಿ ನಾಗರಾಜ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಪಟ್ರೆ ಲವ್ಸ್ ಪದ್ಮ ಚಿತ್ರದಲ್ಲಿ ಅದ್ಬುತ ಅಭಿನಯ ನೀಡಿದ್ದ ಅಜಿತ್ ಇಲ್ಲಿ ಯಾವ ರೀತಿಯ ಕಮಾಲ್ ತೋರಿಸಿದ್ದಾರೆ ಎಂಬುದನ್ನು ನೋಡಬೇಕಾಗಿದೆ.
ಅಜಿತ್ ಅವರನ್ನೇ ಮಾತಿಗೆ ಎಳೆದಾಗ, ಇದೊಂದು ಢಿಪರೆಂಟ್ ಸಿನಿಮಾ. ಹಾಡುಗಳು ಇನ್ನೂ ಢಿಪರೆಂಟ್. ನಿಜಕ್ಕೂ ಇಂಥದ್ದೊಂದು ಚಿತ್ರ ಕನ್ನಡಕ್ಕೆ ಲಭಿಸಿದ್ದು ಕನ್ನಡದ ಭಾಗ್ಯ ಎನ್ನುತ್ತಿದ್ದಾರೆ. ಜತೆಗೆ ಚಿತ್ರ ಸಮಾಜಕ್ಕೆ ಒಂದ ಉತ್ತಮ ಮೆಸೇಜ್ ಸಹ ನೀಡುತ್ತದೆಯಾದ್ದರಿಂದ ಚಿತ್ರಮಂದಿರಕ್ಕೆ ಬಂದು ಜನ ನೋಡುವ ಮೂಲಕ ಚಿತ್ರ ಗೆಲ್ಲಿಸುತ್ತಾರೆ ಎನ್ನುವ ಆಶಯದ ಮಾತನ್ನು ಅವರು ಆಡುತ್ತಾರೆ.
ಚಿತ್ರದ ನಾಯಕಿ ರೀಮಾರಿಗೆ ಇದು ಕನ್ನಡ ಚಿತ್ರರಂಗಕ್ಕೆ ಎರ್ರಂಗೇಟ್ರಮ್. ಅಭಿನಯ ಹೇಗಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರ ಪೋಸ್ಟರುಗಳಲ್ಲಿ ನೀಡಿರುವ ಫೋಸ್ ನೋಡಿದರೆ, ಭರ್ಜರಿಯಾಗಿಯೇ ಇದೆ. ಉತ್ತಮ ಹಾಡುಗಳಿರುವ ಗುಬ್ಬಿ ಚಿತ್ರದ ದ್ವನಿಸುರುಳಿ ಮಾರಾಟ ಚೆನ್ನಾಗಿದೆಯಂತೆ. ಅದೇ ರೀತಿ ಚಿತ್ರವೂ ಓಡಿದರೆ ಅಜಿತ್ ಪಟ್ರೆಯ ಸೋಲಿನ ಕಹಿನೆನಪು ಮರೆಯಬಹುದು.