ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವೀರಪ್ಪ ನಾಯಕನ ನೆನೆನೆನೆದು ಕಣ್ಣೀರಾದ ಶ್ರುತಿ (Veerappa Nayaka | Shruthi | Vishnuvardhan | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಮ್ಮ ಅಳುಮುಂಜಿ ನಟಿ ಶ್ರುತಿ ಮೊನ್ನೆ ನಿಜಕ್ಕೂ ಕಣ್ಣೀರಾದರು. ಇವರಿಗೆ ಏಕಾಏಕಿ ವೀರಪ್ಪ ನಾಯಕದ ಚಿತ್ರದ ವಿಷ್ಣುವರ್ಧನ್ ನೆನಪಾದರು. ಚಿತ್ರದ ಸನ್ನಿವೇಶವೊಂದನ್ನು ನೆನೆದರು ಆ ಸಂದರ್ಭದಲ್ಲಿ.

ಎದುರಿಗೆ ಮಲಗಿದ್ದ ಶವದ ಕಡೆ ನೋಡಿದರು ವಿಷ್ಣುವರ್ಧನ್. ಶವಕ್ಕೆ ವಿಷ್ಣು ಹಿಡಿ ಹಿಡಿ ಮಣ್ಣು ಹಾಕುವಾಗ ಕೈ ಗಡಗಡ ನಡುಗುತ್ತಿತ್ತು. ಎದುರಿಗೆ ಮಲಗಿದ್ದ ಶವಕ್ಕೆ ಮುಕ್ಕಾಲು ಮುಚ್ಚಿದ ಕಣ್ಣಲ್ಲೇ ಅವರ ಚಡಪಡಿಕೆ ಕಂಡು ಗಾಬರಿಯಾಗಿತ್ತು! ಸರಿ, ಶಾಟ್ ಮುಗಿಯಿತು.

MOKSHA
ವಿಷ್ಣು ಕೈ ನಡುಕ ನೆತ್ತಿವರೆಗೂ ಏರಿತ್ತು. ಇಡೀ ಮೈ ಕಂಪಿಸುತ್ತಿತ್ತು. ಎದುರಿಗೆ ಮಲಗಿದ್ದ ಶವ ಏಕಾಏಕಿ ಎದ್ದುಬಂದು- ಅವರಿಗೆ ಸಾಂತ್ವನ ಹೇಳತೊಡಗಿತು. ಇದು ಶೂಟಿಂಗ್ ಅನುಭವ, ಚಿತ್ರದಲ್ಲಿ ಶವ ಎದ್ದು ಬಂದು ಮಣ್ಣು ಹಾಕಿದವನಿಗೆ ಸಾಂತ್ವನ ಹೇಳುವುದಿಲ್ಲ. ಆದರೆ ಚಿತ್ರದಲ್ಲಿ ಶವದ ಪಾತ್ರ ವಹಿಸಿದ್ದ ಶ್ರುತಿ ಅರೆತೆರೆದ ಕಣ್ಣಲ್ಲಿ ಶೂಟಿಂಗ್ ಸಂದರ್ಭ ತನ್ನ ಅನುಭವವನ್ನು ಹಂಚಿಕೊಂಡು ವಿಷ್ಣು ನೆನಪಲ್ಲಿ ಕಣ್ಣೀರಾದರು.

ನಿಜ ಹೇಳಬೇಕೆಂದರೆ, ವಿಷ್ಣು ಸಾವು ನ್ಯಾಯ ಸಮ್ಮತವಲ್ಲ. ಆ ಭಗವಂತ ನಿಯತ್ತು ಮರೆತು, ಬೇಕೆಂತಲೇ ನಮ್ಮಂಥ ನೂರಾರು ಕಲಾವಿದರನ್ನು ಅನಾಥ ಮಾಡಲು ಹೀಗೆ ಮೋಸದಾಟ ಆಡಿದ್ದಾನೆ. ಇಡೀ ಚಿತ್ರೋದ್ಯಮದಲ್ಲಿ ನನ್ನನ್ನು ಅತ್ಯಂತ ಅಕ್ಕರೆಯಿಂದ ಕಂಡ ವ್ಯಕ್ತಿಯವರು. ಅಂಥ ವ್ಯಕ್ತಿಗೆ ಇಷ್ಟು ಬೇಗ ಹಿಡಿ ಮಣ್ಣು ಹಾಕುವಂತಾಯಿತಲ್ಲ ಎಂಬ ನೋವು ಕಾಡುತ್ತಿದೆ...' ಎಂದು ಭಾವುಕರಾಗುತ್ತಾರೆ.

ವಿಷ್ಣು ಜತೆ ಇವರು ಮೋಜುಗಾರ ಸೊಗಸುಗಾರ, ಶ್ರುತಿ ಹಾಕಿದ ಹೆಜ್ಜೆ, ವೀರಪ್ಪ ನಾಯಕ, ಸೂರಪ್ಪ, ಸಿರಿವಂತ... ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಶ್ರುತಿಗೆ ಅದೇ ವಿಷ್ಣು ನೆನಪು ಎಂದೂ ಮರೆಯದ ಹಾಡು. ಆ ಸರಳತೆ, ಆ ಅಧ್ಯಾತ್ಮದ ತಳಹದಿಯ ಅವರ ಅಣಿಮುತ್ತುಗಳು, ಅವರಲ್ಲಿದ್ದ ಸಿರಿವಂತಿಗೆ, ಹೃದಯವಂತಿಕೆ ಯಾವುದನ್ನೂ ಮರೆಯಲಾಗುತ್ತಿಲ್ಲವಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೀರಪ್ಪ ನಾಯಕ, ಶ್ರುತಿ, ವಿಷ್ಣುವರ್ಧನ್, ಕನ್ನಡ ಸಿನೆಮಾ