ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್ ಶೌರ್ಯ ಶೀಘ್ರದಲ್ಲೇ: ಸೆಂಟಿಮೆಂಟೇ ಹೈಲೈಟು (Darshan | Shourya | Boss | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
IFM
ದರ್ಶನ್ ಪೊರ್ಕಿ ಚಿತ್ರದ ನಂತರ ತೆರೆಗೆ ಬರುವ ಸಾಹಸದಲ್ಲಿ ಎರಡು ಚಿತ್ರಗಳು ಇದ್ದವು. ಒಂದು ಬಾಸ್ ಹಾಗೂ ಇನ್ನೊಂದು ಶೌರ್ಯ.

ಬಿಡುಗಡೆಗೆ ಮುನ್ನ ಚಿತ್ರ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ಶೌರ್ಯ ಕೊಂಚ ವೇಗ ಪಡೆದುಕೊಂಡಿದೆ. ಎಲ್ಲವೂ ಸುಸೂತ್ರವಾಗಿ ಆಗಿ ಹೋದಲ್ಲಿ ಮೊದಲು ಶೌರ್ಯ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಶೌರ್ಯದ ದ್ವನಿ ಸುರುಳಿ ಮೊನ್ನೆ ಬಿಡುಗಡೆ ಆಗಿದೆ. ಎಲ್ಲರೂ ಸೇರಿ ಉತ್ತಮ ಚಿತ್ರ ಮಾಡಿದ್ದೇವೆ. ಸುಂಟರಗಾಳಿ, ಅನಾಥರು ನಂತರ ಕೊಂಚ ವಿರಾಮ ಪಡೆದು ದರ್ಶನ್ ಹಾಗೂ ಸಾಧು ಕೋಕಿಲಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದು. ಈ ಚಿತ್ರದಲ್ಲಿ ಭರಪೂರ ಆಕ್ಷನ್ ಜತೆ ಅಣ್ಣ ತಂಗಿಯ ಸೆಂಟಿಮೆಂಟ್ ಸಹ ಇದೆಯಂತೆ. ಒಂದರ್ಥದಲ್ಲಿ ಸೆಂಟಿಮೆಂಟ್ ಚಿತ್ರದ ಹೈಲೈಟ್ ಎಂಬ ಮಾತು ಕೇಳಿ ಬರುತ್ತಿದೆ.

ಶೌರ್ಯ ಮೂಲತಃ ತೆಲುಗಿನ 'ಶೌರ್ಯಂ'ನ ರಿಮೇಕ್. ಅಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದ್ದ ಅದ್ದೂರಿ ಚಿತ್ರ ಅದು. ಇದನ್ನೀಗ ಕನ್ನಡ ಮೂವರು ನಿರ್ಮಾಪಕರು ಅಂದರೆ ಬಸವರಾಜ್, ವೆಂಕಟೇಶ್, ಗಂಗಾಧರ್ ಮುಂದಾಗಿದ್ದಾರೆ. ಇವರಿಗೆ ಇನ್ನೂ ಕೆಲವರು ಸಾಥ್ ನೀಡುವ ಸಾಧ್ಯತೆ ಇದೆ.

ಚಿತ್ರದಲ್ಲಿ ದರ್ಶನ್ ತಂಗಿಯಾಗಿ ರೀಮಾ ವೋರಾ ನಟಿಸಲಿದ್ದಾರೆ. ಖಳನಾಯಕರಾಗಿ ಸಂಪತ್ ಕುಮಾರ್, ಜಾನ್ ಕೊಕೇನ್ ಅಭಿನಯಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಸಾಧು ಇದ್ದರೆ, ದ್ವಿತಿಯಾರ್ಧದಲ್ಲಿ ಬುಲೆಟ್ ಪ್ರಕಾಶ್ ಬರಲಿದ್ದಾರೆ. ಈ ಚಿತ್ರಕ್ಕೆ ಸಾಧು ಅವರೇ ಸಂಗೀತ ಸಹ ನೀಡಿದ್ದಾರೆ.

ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್, ವಿ. ಶ್ರೀಧರ್ ಮತ್ತಿತರರು ಸಾಹಿತ್ಯ ಬರೆದುಕೊಟ್ಟಿದ್ದಾರೆ. ಚಿತ್ರದಲ್ಲಿ ಆರು ಹಾಡು ಇದೆ. ರವಿವರ್ಮ, ಪಳನಿರಾಜ್ ಸಾಹಸ ಸಂಯೋಜಿಸಿದ್ದಾರೆ. ರಮೇಶ್ಬಾಬು ಛಾಯಾಗ್ರಹಣ. ಮದಲಸಾ ಶರ್ಮ ಚಿತ್ರದ ನಾಯಕಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದರ್ಶನ್, ಶೌರ್ಯ, ಬಾಸ್, ಕನ್ನಡ ಸಿನೆಮಾ