ಶೀಘ್ರದಲ್ಲೇ ಸಿನಿಮಾ ನಟರ ಭರ್ಜರಿ ಟ್ವೆಂಟಿ 20 ಕ್ರಿಕೆಟ್ಟು!
MOKSHA
ಇತ್ತೀಚೆಗೆ ತೆಲುಗು ಚಿತ್ರರಂಗ ನಾಲ್ಕು ತಂಡವಾಗಿ ಕ್ರಿಕೆಟ್ ಆಡಿದ್ದು ನಿಮಗೆಲ್ಲಾ ಗೊತ್ತು. ಹಿಂದೊಮ್ಮೆ ನಮ್ಮವರೂ ಇದೇ ರೀತಿ ಕ್ರಿಕೆಟ್ ಆಡಿದ್ದರು. ಈ ವರ್ಷ ಹಳೆ ಸ್ಪೂತಿ ಹಾಗೂ ತೆಲುಗು ಚಿತ್ರರಂಗದ ಉದಾಹರಣೆ ಜತೆಗಿಟ್ಟುಕೊಂಡು ಒಂದು ಕ್ರಿಕೆಟ್ ಪಂದ್ಯಾವಳಿ ಇದೇ ತಿಂಗಳು ಆರಂಭವಾಗಲಿದೆ.
'ಡಾ. ರಾಜ್ ಕಪ್' ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಹಿಂದೆ ಅಂದರೆ 2007ರಲ್ಲಿ ಇದು ನಡೆದಿತ್ತು. ಮತ್ತೊಮ್ಮೆ ಎದುರಾಗಿರುವ ಕ್ರಿಕೆಟ್ ಪಂದ್ಯಾವಳಿ ಗೆಲ್ಲಲು ಎಲ್ಲಾ ನಟ, ನಿರ್ಮಾಪಕ, ನಿರ್ದೇಶಕ, ತಂತ್ರಜ್ಞರ ತಂಡದ ಆಟಗಾರರು ಬಿರುಸಿನ ತರಬೇತಿ ಪಡೆಯುತ್ತಿದ್ದಾರೆ. ಕಠಿಣ ಪರಿಶ್ರಮದಲ್ಲಿ ನಿರತರಾಗಿರುವ ಬಣ್ಣದ ಬದುಕಿನ ಮಂದಿ ನಡೆಸುತ್ತಿರುವ ಸಾಹಸ ನಿಜಕ್ಕೂ ಅಚ್ಚರಿ ಮೂಡಿಸಿದೆ.
MOKSHA
ಬಣ್ಣ ಹಚ್ಚುವವರು ಕ್ರಿಕೆಟ್ ಸಹ ಆಡುತ್ತಾರಾ ಅಂಥ ಜನ ಹುಬ್ಬೇರಿಸಿ ಕೇಳುತ್ತಿದ್ದಾರೆ. 20 ಓವರುಗಳ 20-20 ಪಂದ್ಯ ಇದಾಗಿದ್ದು, ಡಾನ್ಸರ್ ಅಸೋಸಿಯೇಷನ್ ಪ್ರಾಯೋಜಕತ್ವದಲ್ಲಿ ನಡೆಯಲಿದೆ. 5 ತಂಡಗಳು ಇವೆ. ನೃತ್ಯ ನಿರ್ದೇಶಕರ ತಂಡದ ನಾಯಕ ಸುದೀಪ್, ಸಾಹಸ ನಿರ್ದೇಶಕರ ತಂಡದ ನಾಯಕ ದುನಿಯಾ ವಿಜಯ್, ನಿರ್ದೇಶಕರ ತಂಡದ ನಾಯಕ ವಿ. ರವಿಚಂದ್ರನ್, ನಿರ್ಮಾಪಕರ ತಂಡದ ನಾಯಕ ಶಿವರಾಜ್ ಕುಮಾರ್ ಆಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಇವರ ಜೊತೆಗೆ ಶಾಸಕರ ತಂಡ ಸಹ ಆಡಲಿದೆ ಎನ್ನಲಾಗುತ್ತಿದೆ. ಅದಿನ್ನೂ ಅಂತಿಮಗೊಂಡಿಲ್ಲ. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡ ತಂಡ ಇರಲಿದೆಯಂತೆ. ಇದೇ ಜುಲೈ 25ರಂದು ಒಂದು ಪಂದ್ಯ ನಡೆಯಲಿದೆ.