ರಾಂಗ್ ಆಗಿದ್ದಾರೆ ದೊಡ್ಡಣ್ಣ

ದೊಡ್ಡಣ್ಣ ಚಾಮರಾಜಪೇಟೆಯಲ್ಲಿ ದೊಡ್ಡ ದನಿಯಲ್ಲಿ ಕೂಗುತ್ತಿದ್ದರು. ಏಕೆ ಅಂತ ಕೇಳಿದರೆ ತುಂಬಾ ರಾಂಗ್ ಆಗಿದ್ದಾರಪ್ಪ, ನೋಡಿ ಹೇಗೆ ಒದರುತ್ತಿದ್ದಾರೆ ಅಂದರು ಒಬ್ಬರು. ಕಾರಣ ಹುಡುಕಿ ಹೋದರೆ ಚಾಮರಾಜಪೇಟೆಯ ಮಧ್ಯಭಾಗದಲ್ಲಿರುವ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಕಾರ್ಯ ಇನ್ನೂ ನಿಂತ ನೀರಾಗಿದೆ ಎಂಬ ಕಾರಣಕ್ಕೆ ಅವರು ರೇಗುತ್ತಿದ್ದರು.ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಅಭಿವೃದ್ಧಿ ಕಾಣದೇ ಸಾಕಷ್ಟು ಸುದ್ದಿ ಆಗುತ್ತಿದೆ. ಆಗಾಗ ಕೆಲಸ ಆರಂಭವಾಗಿ ಮಧ್ಯೆ ನಿಂತು ಹೋಗುತ್ತದೆ. ಇತ್ತೀಚೆಗೆ ಕೊಂಚ ಪ್ರಗತಿ ಕಂಡಿದ್ದ ಈ ಕೆಲಸ ಮತ್ತೆ ನನೆಗುದಿಗೆ ಬಿದ್ದಿದೆ. ಬಿಲ್ಡಿಂಗ್ ಬೆಳವಣಿಗೆ ಯಾಕೆ ಆಗುತ್ತಿಲ್ಲ ಎನ್ನುವುದು ಪ್ರಶ್ನೆ. ಇದಕ್ಕೆ ಉತ್ತರ ಸ್ವತಃ ದೊಡ್ಡಣ್ಣನವರ ಬಳಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕೆಲಸ ತ್ವರಿತ ಗತಿಯಲ್ಲಿ ಆಗುತ್ತಿಲ್ಲ. ಹಾಗಾಗಿ ದೊಡ್ಡಣ್ಣ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಉಸ್ತುವಾರಿಗಳ ಮೇಲೆ ಕೆಂಡಾಮಂಡಲವಾಗಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಸಾಲ ಕೊಟ್ಟವರು ಇವರನ್ನು ಕಾಡಲು ಆರಂಭಿಸಿದ್ದಾರೆ. ಚಲನಚಿತ್ರ ಕಲಾವಿದರ ಸಂಘದ ಫಂಡಲ್ಲಿರೋ 10 ಲಕ್ಷ ರೂ.ವನ್ನು ಅಧ್ಯಕ್ಷ ಅಂಬರೀಶ್ ನೀಡಿದ್ದಾರೆ. ಇದರ ಅಸಲು ಇರಲಿ, ಬಡ್ಡಿಯನ್ನಾದರೂ ಕಟ್ಟು ಅಂತ ಅವರು ಕೇಳುತ್ತಿದ್ದಾರೆ. ಇತ್ತ ಕಟ್ಟಡವೂ ಆಗ್ತಿಲ್ಲ, ಅತ್ತ ಬಡ್ಡಿ ಕಟ್ಟಲೂ ಆಗ್ತಿಲ್ಲ. ಇದೆಲ್ಲಾ ಸಿಟ್ಟನ್ನು ಅವರು ಎಂಜಿನಿಯರ್ ಮೇಲೆ ತೀರಿಸಿಕೊಳ್ಳುತ್ತಿದ್ದರು.ಪಾಪ ಅದ್ಯಾವಾಗ ಕಟ್ಟಡ ಮುಗಿಯುತ್ತೋ, ಕಲಾವಿದರು ಅಲ್ಲಿ ಬಂದು ನೆಲೆ ಕಾಣುತ್ತಾರೋ, ದೇವರೇ ಬಲ್ಲ.