ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾಳಿಪಟದ ಪಾವನಿ ತಮಿಳಲ್ಲಿ ಸೆಟಲ್ (Galipata | Pavani | Shikha | Bhavana | Tamil | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
'ನಮ್ಮಣ್ಣಂಗೆ ನಿಮ್ಮ ನೋಡಬೇಕಂತೆ, ಅದ್ಕೆ ಕರ್ಕೋಂಡ್ ಬಾ ಅಂದ. ನೀವು ಇಷ್ಟ ಆಗಿದ್ದೀರಂತೆ ಅವನಿಗೆ. ಹುಡುಗ ತುಂಬಾ ಚೆನ್ನಾಗಿ ಹಾಡು ಹೇಳ್ತಾನಂತೆ, ಹೇಳ್ಸು ಅಂತಿದ್ದಾನೆ, ಹೇಳಿ...'

ಅರಳು ಹುರಿದಂತೆ ಪಟ ಪಟ ಮಾತನಾಡುವ ಬಂಗಾರದಂತ ಬೆಡಗಿ ಭಾವನಾ. ಅದೇ ಯೋಗರಾಜ ಭಟ್ಟರ ಗಾಳಿಪಟ ಚಿತ್ರದಲ್ಲಿ ಪಾವನಿ ಆಗಿ ನಟಿಸಿದ್ದಳಲ್ಲ, ಅವಳೇ. ಮೇಲಿನ ಡೈಲಾಗ್ ಕೂಡಾ ಅದೇ ಚಿತ್ರದ್ದು. ಈ ಪಾವನಿಗೆ ಈಗ ಕನ್ನಡದಲ್ಲಿ ಚಿತ್ರಗಳಿಲ್ಲ.

ಹಾಗಂತ ಈಕೆ ಸುಮ್ಮನೆ ಕುಳಿತಿದ್ದಾಳೆ ಅಂತ ಅಂದುಕೊಳ್ಳಬೇಕಾಗಿಲ್ಲ. ಚಿತ್ರದಲ್ಲಿ ಎಷ್ಟು ಚಾಲಾಕಿ ಆಗಿದ್ದಳೋ ಜೀವನದಲ್ಲೂ ಅಷ್ಟೇ ಚಾಲಾಕಿ ಇವಳು. ನಡುವೆ ಸಿಕ್ಕ ಗ್ಯಾಪ್ ತುಂಬಿಸಿಕೊಳ್ಳಲು ತಮಿಳು ಚಿತ್ರರಂಗಕ್ಕೆ ಜಿಗಿದಿದ್ದಳು. ಇದೀಗ ಅವಳು ನಟಿಸಿರುವ 'ಕೊಲ ಕೊಲಯ ಮುಂದಿರಿಕ' ಯಶಸ್ವಿಯಾಗಿದೆ. ಇಲ್ಲಿಂದ ಭಾವನಾ ಆಗಿ ಹೋಗಿ ಅಲ್ಲಿ ಶಿಖಾ ಆಗಿ ಯಶ ಕಂಡ ಹಿನ್ನೆಲೆಯಲ್ಲಿ ಅಲ್ಲೇ ಸೆಟಲ್ ಆಗುವ ಯೋಚನೆ ಸಹ ಮಾಡಿದ್ದಾರಂತೆ.

'ಗಾಳಿಪಟ'ದ ನಂತರ ಸಿಕ್ಕ ಪಾತ್ರಗಳೂ ಅಷ್ಟಕ್ಕಷ್ಟೆ. ಅದಕ್ಕೆ ಅದನ್ನು ಅಭಿನಯಿಸುವ ಸಾಹಸ ಮಾಡದೇ ಸುಮ್ಮನೆ ಕುಳಿತ ಈಕೆಗೆ ಚೆನ್ನೈಯಿಂದ ಕಾಲ್ ಬಂತು. ಹೊರಟು ಹೋದಳು. 'ಕೊಲ ಕೊಲಯ..' ಎಂಬ ಕಾಮಿಡಿ ಚಿತ್ರ ಇವರಿಗೆ ಒಂದು ಭದ್ರ ನೆಲೆ ಒದಗಿಸಿತು. ಸಣ್ಣಪುಟ್ಟ ಕಳ್ಳತನ ಮಾಡುವ ಚೋರಿಯ ಪಾತ್ರದಲ್ಲಿ ಮಿಂಚಿದ್ದೇ ಇಂದು ಸಾಕಷ್ಟು ಅವಕಾಶಗಳು ಅಲ್ಲಿ ಹುಡುಕಿ ಬರುತ್ತಿವೆ.

ಒಬ್ಬ ಪ್ರತಿಭಾವಂತೆ ಎಲ್ಲಾದರೂ ಬದುಕಬಲ್ಲಳು ಎನ್ನುವುದಕ್ಕೆ ಇವಳೇ ಸಾಕ್ಷಿ. ಭಾವನಾ ಹುಟ್ಟಿದ್ದು ಶಿವಮೊಗ್ಗದಲ್ಲಿ. ಬೆಳೆದದ್ದು ಕಲಿತದ್ದು ಬೆಂಗಳೂರಿನಲ್ಲಿ. ತಂದೆ ಎಂ. ಎಸ್. ರಾಮರಾವ್ ಕೆಮಿಕಲ್ ರಫ್ತು ಮಾಡುವ ಉದ್ಯಮಿ. ಭರತನಾಟ್ಯ ವಿದ್ವತ್ ಪೂರೈಸಿದ ಭಾವನಾ ನೂರಕ್ಕೂ ಅಧಿಕ ಸ್ಟೇಜ್ ಶೋ ನೀಡಿದ್ದಳು. ಕಲ್ಯಾಣಿ ಸಿಲ್ಕ್ ಸಾರಿಯ ಜಾಹೀರಾತು, ಝೀ ವಾಹಿನಿ, ಸುವರ್ಣ ವಾಹಿನಿ ಕಾರ್ಯಕ್ರಮ ನಿರೂಪಕಿಯಾಗಿ ಕ್ಯಾಮೆರಾ ಎದುರಿಸಿದ ಅನುಭವ. 'ಗಾಳಿಪಟ'ಕ್ಕೆ ಹೊಸ ಹುಡುಗಿಯರ ಅನ್ವೇಷಣೆಯಲ್ಲಿದ್ದ ಯೋಗರಾಜ್ ಭಟ್ರಿಂದ ಬುಲಾವ್. ಮುಂದಿನದು ನಿಮಗೆ ಗೊತ್ತೇ ಇದೆ. ಮುಂದೇನಾಗುವುದು ಎನ್ನುವುದನ್ನು ಕಾಲವೇ ಹೇಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಾಳಿಪಟ, ಪಾವನಿ, ಶಿಖಾ, ಭಾವನಾ, ತಮಿಳು, ಕನ್ನಡ ಸಿನಿಮಾ ಸುದ್ದಿ