ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇದೇ ತಿಂಗಳು ಅಜಯ್, ಐಂದ್ರಿತಾ ಜೋಡಿಯ ಮನಸಿನ ಮಾತು (Manasina Maathu | Aindritha Rey | Ajay)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮನಸಿನ ಮಾತು ಚಿತ್ರ ಇದೇ ತಿಂಗಳು ತೆರೆಗೆ ಬರುತ್ತಿದೆ. ಚಿತ್ರದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅತಿ ಶೀಘ್ರ ಬಿಡುಗಡೆ ಮಾಡುವ ಆತುರ ಚಿತ್ರತಂಡದ್ದು.

ಕಾರಣ ಇಷ್ಟೆ. ಅಜಯ್ ನಾಯಕರಾಗಿ ನಟಿಸಿರುವ ಚಿತ್ರದಲ್ಲಿ ಐಂದ್ರಿತಾ ರೇ ನಾಯಕಿ. ಇವರಿಬ್ಬರೂ ಸದ್ಯ ಕನ್ನಡದಲ್ಲಿ ಒಳ್ಳೆ ಚಾಲ್ತಿಯಲ್ಲಿರುವ ಕಲಾವಿದರು. ಹಿಟ್ ಚಿತ್ರವನ್ನೂ ನೀಡಿದ್ದಾರೆ. ಇದರಿಂದ ಇವರಿಬ್ಬರ ಕಾಂಬಿನೇಷನ್ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸ ನಿರ್ಮಾಣ ಹೊಣೆ ಹೊತ್ತವರದ್ದು.

MOKSHA
ಡಿ.ಕೆ. ರಾಮಕೃಷ್ಣ ನಿರ್ಮಿಸಿರುವ ಈ ಚಿತ್ರಕ್ಕೆ ಅನಂತರಾಜು ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಕುಲುಮನಾಲಿ ಹಾಗೂ ದೇಶದ ನಾನಾ ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ರಮಣೀಯ ತಾಣ ವೀಕ್ಷಣೆಯೂ ಚಿತ್ರದಲ್ಲಿ ಆಗುತ್ತದೆ ಎನ್ನಲಾಗುತ್ತಿದೆ.

ಸಿ. ರಾಜಶೇಖರ್ ಸಹ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ, ಎಂ.ಆರ್. ಸೀನು ಛಾಯಾಗ್ರಹಣ, ರಾಂನಾರಾಯಣ್ ಸಂಭಾಷಣೆ, ಅನಿಲ್ ಬಿ. ಕೃಷ್ಣ ನಿರ್ಮಾಣ ನಿರ್ವಹಣೆ ಇದೆ. ಈ ಚಿತ್ರದ ಉಳಿದ ತಾರಾಬಳಗದಲ್ಲಿ ಅವಿನಾಶ್, ಸಾಧುಕೋಕಿಲಾ, ತಾರಾ, ಲೋಹಿತ್ ಮುಂತಾದವರಿದ್ದಾರೆ. ಅಂತು ಇದೇ ತಿಂಗಳು ಕೊನೆಯ ಹೊತ್ತಿಗೆ ತೆರೆ ಕಾಣುವ ಈ ಚಿತ್ರ ಮತ್ತೊಂದು ಪ್ರೇಮ ಕಥೆಯಾಗಿದ್ದು, ಜನರ ವಿಶ್ವಾಸ ಗಳಿಸುವಲ್ಲಿ ಸಫಲವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮನಸಿನ ಮಾತು, ಐಂದ್ರಿತಾ ರೇ, ಅಜಯ್