ಲೂಸ್ ಮಾದ ಖ್ಯಾತಿಯ ಯೋಗೀಶ್‌ಗೆ (ಜು.6) ಹುಟ್ಟುಹಬ್ಬದ ಸಂಭ್ರಮ. ಈಗಿನ್ನೂ 20 ದಾಟಿರುವ ಈ ಯುವಕ ಸದ್ಯ ಕನ್ನಡದ ಚಾಲ್ತಿಯಲ್ಲಿರುವ ಹೀರೋ.
ದುನಿಯಾ ಚಿತ್ರದಲ್ಲಿ ಲೂಸ್ ಮಾದ ಎಂಬ ಪುಟ್ಟ ಪಾತ್ರದ ಮೂಲಕ ಭಾರೀ ಹೆಸರು ಮಾಡಿದ ಈ ಯೋಗೀಶ್ ಹೀರೋ ಆಗುತ್ತಾನೆಂದು ಖಂಡಿತ ಆತನೂ ಊಹಿಸಿರಲೇ ಇಲ್ಲ. ನಂದ ಲವ್ಸ್ ನಂದಿತಾ ಮೂಲಕ ಹೀರೋ ಆದ ಲೂಸ್‌ಗೆ ಸಾಕಷ್ಟು ಅಭಿಮಾನಿಗಳೂ ಇದ್ದಾರೆ. ಇದೇ ಚಿತ್ರದ ಜಿಂಕೆ ಮರೀನಾ ಹಾಡು ಈಗಲೂ ಯೋಗೀಶ್ ಎಂಬ ಹೆಸರಿಗಿಂತಲೂ ಲೂಸ್ ಮಾದ ಎಂಬ ಹೆಸರೇ ಹೆಚ್ಚು ಚಾಲ್ತಿ.
ನಟಿ ರಮ್ಯಾರ ಪರಮ ಅಭಿಮಾನಿಯಾಗಿರುವ ಈ ಲೂಸ್ ಮಾದ ಅಭಿನಯದ ಅಂಬಾರಿ ಚಿತ್ರದ ಯಶಸ್ಸಿನ ನಂತರ ಸಾಲು ಸಾಲು ಚಿತ್ರಗಳು ಬಿಡುಗಡೆ ಕಂಡಿತಾದರೂ ಸದ್ಯ ಹೇಳಿಕೊಳ್ಳುವಂಥ ಗೆಲವೇನೂ ದಕ್ಕಿಲ್ಲ. ಕೈಯಲ್ಲೂ ಸಾಕಷ್ಟು ಚಿತ್ರಗಳಿವೆ. ಆದರೆ ಯಾವುದು ಲೂಸ್‌ಗೆ ಬ್ರೇಕ್ ನೀಡುವ ಚಿತ್ರವಾಗುತ್ತದೆ ಅನ್ನೋದನ್ನು ಕಾಲವೇ ನಿರ್ಧರಿಸಬೇಕು.
ಒಟ್ಟಾರೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಲೂಸ್ ಮಾದಗೆ ಹ್ಯಾಪಿ ಬರ್ತ್‌ಡೇ ಹೇಳೋಣ.