ಮೊನ್ನೆಮೊನ್ನೆಯಷ್ಟೆ ಹೂ ಚಿತ್ರದಲ್ಲಿ ಗುಂಡುಗುಂಡಗೆ ಅರಳಿದ್ದ ನಮಿತಾ ಆತ್ಮಹತ್ಯೆಗೆ ಪ್ರಯತ್ನಪಟ್ಟರಂತೆ ನಿಜನಾ...? ಹೀಗೊಂದು ಸುದ್ದಿ ಮುಂಬೈಯಿಂದ ದಕ್ಷಿಣದುದ್ದಕ್ಕೂ ರಾತ್ರಿ ಬೆಳಗಾಗುವುದರೊಳಗೆ ಹರಡಿದೆ. ನಮಿತಾ ಆತ್ಮಹತ್ಯೆ ಮಾಡಿಕೊಂಡರಂತೆ. ಆಕೆಗೆ ಸಿಕ್ಕಾಪಟ್ಟೆ ಜೀವನದಲ್ಲಿ ಜಿಗುಪ್ಸೆ, ಡಿಪ್ರೆಶನ್ ಕಾರಣದಿಂದ ಆಕೆ ತನ್ನ ಮುಂಬೈಯ ಅಂಬೆ ವ್ಯಾಲಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿದ್ದಾರಂತೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅವೆಲ್ಲಾ ಈಗ ಅವೆಲ್ಲಾ ಸುಳ್ಳುಸುದ್ದಿ. ಕೇವಲ ಗಾಸಿಪ್ ಎಂದು ಸಾಬೀತಾಗಿದೆ.
ಈ ಸುದ್ದಿ ಕೇಳಿ ನಮಿತಾ ಗೊಳ್ಳನೆ ನಕ್ಕಿದ್ದಾರಂತೆ. ನಾನು ಆತ್ಮಹತ್ಯೆ ಮಾಡಿದ್ನಂತಾ? ಯಾರು ಹೇಳಿದ್ದು ಹಾಗಂತ ಎಂದು ನಮಿತಾ ಕಿಸಪಿಸನೆ ನಕ್ಕುಬಿಟ್ಟರಂತೆ. ಜೊತೆಗೆ, ನನ್ನ ಅಭಿಮಾನಿಗಳ್ಯಾರೂ ಬೇಸರಿಸಬೇಡಿ. ನಾನು ಆತ್ಮಹತ್ಯೆ ಮಾಡಿಲ್ಲ. ಆವರಿಗೆ ಬೇಸರವಾಗಿದ್ದಕ್ಕೆ ನನ್ನದೊಂದು ಕಿಸ್ ಎಂದು ಅಭಿಮಾನಿಗಳಿಗೆ ಮುಂಬೈಯಿಂದಲೇ ತನ್ನ ಕಿಸ್ಸನ್ನು ತೇಲಿ ಬಿಟ್ಟಿದ್ದಾಳೆ!
ಇತ್ತೀಚೆಗಷ್ಟೇ ತನಗೆ ಗ್ಲ್ಯಾಮರಸ್ ಸೆಕ್ಸೀ ಇಮೇಜಿನಿಂದ ಬೇಸರ ಬಂದಿದೆ. ಅಂತಹ ಪಾತ್ರಗಳ ಬಗ್ಗೆ ಜಿಗುಪ್ಸೆ ಬಂದಿದೆ ಎಂದಿದ್ದ ನಮಿತಾಗೆ ಅಷ್ಟು ಬೇಗನೆ ಜೀವನದಲ್ಲೂ ಯಾಕಪ್ಪಾ ಜಿಗುಪ್ಸೆ ಬಂತು ಅಂತ ಅಭಿಮಾನಿಗಳು ತಲೆ ಬಿಸಿ ಮಾಡಿಕೊಂಡಿದ್ದಾರಂತೆ. ಆದರೆ, ಅತ್ತ ನಮಿತಾ ಮಾತ್ರ ಹಾಯಾಗಿ ತಿಂದುಂಡು ಗುಂಡು ಗುಂಡನೆ ಮಜವಾಗಿದ್ದಾಳಂತೆ.