ವಿ.ಕೆ. ಪ್ರಕಾಶ್ ನಿರ್ಮಾಣದಲ್ಲಿ ಮೂಡಿ ಬಂದಿರುವ ದೇವೇರ್ ಹೆಸರಿನ ತುಳು ಚಿತ್ರದ ಸಿದ್ಧತೆ ಭರದಿಂದ ಸಾಗಿದೆ. ಇನ್ನೋಸ್ಟಾರ್ಮ್ ಎಂಟರ್ಟೈನ್ಮೆಂಟ್ ಗ್ರೂಪ್ ಮತ್ತು ಟ್ರೇಡ್ಸ್ ಅಂಡ್ ಫಿಲಂಸ್ ಲಿಮಿಟೆಡ್ ಲಂಛನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಚಿತ್ರದ ರೀರೆಕಾರ್ಡಿಂಗ್ ವಿಜಯಾ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಸುಧಾಕರ್ ಬನ್ನಂಜೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಜತೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.
ಚಿತ್ರದ ಸಂಗೀತ ಮದನ್ ಮೋಹನ್, ಛಾಯಾಗ್ರಹಣ ನಾಗರಾಜ್ ಅದ್ವಾನಿ, ಸಂಕಲನ ಕೆ. ಗಿರೀಶ್ ಕುಮಾರ್, ಕಲೆ ಲಕ್ಷ್ಮಣ್ ವಹಿಸಿಕೊಂಡಿದ್ದಾರೆ. ಚಿತ್ರದ ನಾಯಕ ಸುಧೀರ್, ನಾಯಕಿಯಾಗಿ ಲಹರಿ ಅಭಿನಯಿಸಿದ್ದಾರೆ. ಮಾಸ್ಟರ್ ಪ್ರೇರಣ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದ ತಾರಾಂಗಣದಲ್ಲಿ ಸುಧಾಕರ ಬನ್ನಂಜೆ, ಕಾರ್ಕಳ ಶೇಖರ ಭಂಡಾರಿ, ಸಹನಾ ಭಂಡಾರಿ, ಚೇತನ್ ರೈ, ತಾರಾನಾಥ್ ಉರ್ವ, ಶಾಂಭವ ಕಾರ್ಕಳ, ಜಾನ್ ಮಣಿಪಾಲ್, ಉಮೇಶ್ ಅಮೀನ್, ಸುಂದರ್ ಹೆಗ್ಡೆ, ಲಕ್ಷ್ಮಣ್, ಸಾವ್ಯ, ಪ್ರಿಯಾ, ಸುನೀತಾ, ರಾಘವೇಂದ್ರ, ಸ್ವಾತಿ, ಬಿಂದು ಮಹೇಶ್ ಮತ್ತಿತತರರು ನಟಿಸಿದ್ದಾರೆ.
ತುಳು ಚಿತ್ರಕ್ಕೆ ವಿಶೇಷ ಮಾನ್ಯತೆ ನೀಡಬೇಕೆಂದು ಮನವಿ ಮಾಡುವ ಜತೆ ತುಳು ಚಿತ್ರವನ್ನು ನೋಡುವ ಮೂಲಕ ಪ್ರಚೋದಿಸಬೇಕೆಂದು ಈ ಮೂಲಕ ನಿರ್ದೇಶಕರು ಸರಕಾರ ಹಾಗೂ ಸಾರ್ವಜನಿಕರನ್ನು ಕೋರಿದ್ದಾರೆ.
ತುಳು ಭಾಷೆಯಲ್ಲಿ ಮೂಡಿ ಬರುತ್ತಿರುವ ಅದ್ದೂರಿ ವೆಚ್ಚದ ಚಿತ್ರ ಇದಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ. ಎಂಥವರನ್ನೂ ಇದು ಸೆಳೆಯುತ್ತದೆ ಎನ್ನುವ ಅಭಿಪ್ರಾಯ ಅವರದ್ದು.