ನಾಗೇಂದ್ರ ಪ್ರಸಾದ್ ನಿರ್ದೇಶನದ 'ವಿನಾಯಕ ಗೆಳೆಯರ ಬಳಗ'ದ ಚಿತ್ರೀಕರಣ ಮಂಡ್ಯದ ಮಳವಳ್ಳಿಯಲ್ಲಿ ಭರದಿಂದ ಸಾಗಿದೆ. ಮೊಟ್ಟ ಮೊದಲ ಬಾರಿಗೆ 108 ಗಣೇಶ ವಿಗ್ರಹದ ಬಳಕೆ ಇಲ್ಲಾಗಿದೆ. 100ಕ್ಕೂ ಜಾನಪದ ಕಲಾವಿದರನ್ನು ಶೂಟಿಂಗ್‌ಗಾಗಿ ಕರೆಸಲಾಗಿದೆ. ಪುರೋಹಿತರು ಗಣೇಶ ಪೂಜೆ ಮಾಡಿ ಕಲಾವಿದರಾದ ವಿಜಯ್ ರಾಘವೇಂದ್ರ ಹಾಗೂ ಬಳಗ ಆರತಿ ಬೆಳಗುವ ಸನ್ನಿವೇಶವನ್ನು ಛಾಯಾಗ್ರಾಹಕ ಪ್ರಕಾಶ್ ಕ್ಯಾಮರಾದಲ್ಲಿ ಸೆರೆ ಹಿಡಿದರು.
80ರ ದಶಕದಲ್ಲಿ ಅಪಾರ ಜನಪ್ರಿಯತೆ ಸಾಧಿಸಿದ್ದ ಟ್ರಕ್ ಒಂದರ ಮೇಲೆ ಗಣೇಶನ ಮೆರವಣಿಗೆ ದಾರಿಯುದ್ದಕ್ಕೂ ಜಾನಪದ ವೈಭವದೊಂದಿಗೆ ಸಾಗಿತು. ವಿಜಯ್ ರಾಘವೇಂದ್ರ ಲಾರಿ ಮೇಲೆ ನಿಂತು ಹಣೆಗೆ ಉದ್ದನೇ ಕೆಂಪು ತಿಲಕ ಇರಿಸಿಕೊಂಡು ಫೋಸ್ ನೀಡಿದರು. ಕೆಳಗಿಳಿದು ಬಂದು ರಸ್ತೆ ಮೇಲೆ ಸ್ಟೆಪ್ ಹಾಕಿದರು.
ಚಿತ್ರದ ಕ್ಲೈಮ್ಯಾಕ್ಸ್ ಆದ ಗಣೇಶನ ವಿಸರ್ಜನೆಯನ್ನು ಸಹ ಮಳವಳ್ಳಿಯಿಂದ 20 ಕಿ.ಮಿ. ದೂರದ ಕಲ್ಕಣಿ ಕೆರೆಯಲ್ಲಿ ನಡೆಸಲಾಯಿತು. ತೆಪ್ಪಗಳ ಬಳಕೆ ಮೂಲಕ ವಿಸರ್ಜಿಸುವ ಸನ್ನಿವೇಶವನ್ನೂ ಚಿತ್ರೀಕರಿಸಲಾಯಿತು. ರಾತ್ರಿ ಹೊತ್ತು ಇದರ ಚಿತ್ರೀಕರಣ ನಡೆಸಲಾಯಿತು. 15ಕ್ಕೂ ಹೆಚ್ಚು ತೆಪ್ಪ ನೋಡುಗರ ಕಣ್ಮನ ಸೆಳೆದಿತ್ತು. ರಾತ್ರಿ ಕೆರೆಯ ತುಂಬಾ ಲೈಟ್ ಹಾಕಿದ್ದರು. ಕೆರೆಯ ನೀರಲ್ಲಿ ಅದನ್ನು ನೋಡುವುದೇ ಒಂದು ಮಜವಾಗಿತ್ತು.
ಖಳನಟರಾಗಿ ಚಿ. ಗುರುದತ್ ನಟಿಸಿದ್ದಾರೆ. ನಾಯಕಿ ಮೇಘನಾ ಗಾಂವ್ಕರ್ ಚಿತ್ರೀಕರಣದಲ್ಲಿ ಪಾಲ್ಗೊಂಡರುಇದ್ದರು. ಅವರು ಸಹ ಸಾಂಪ್ರದಾಯಿಕ ಉಡುಗೆಯಲ್ಲಿ ಇದ್ದು, ಗಣೇಶ ವಿಸರ್ಜನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು.