ದುನಿಯಾ ವಿಜಯ್ ಏಕಕಾಲಕ್ಕೆ ಮೂರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಒಂದು 'ಕರಿ ಚಿರತೆ'. ಇದು ಈ ಮೂರರಲ್ಲಿ ಮೊದಲು ಬಿಡುಗಡೆಯಾಗಲಿರುವ ಚಿತ್ರ ಇದಂತೆ. ಇದರ ಬಗ್ಗೆ ಅಪಾರ ನಿರೀಕ್ಷೆ ಹೊತ್ತಿರುವ ವಿಜಯ್ ಇದೊಂದು ಅದ್ಬುತ ಅಭಿನಯಕ್ಕೆ ಅವಕಾಶ ಇರುವ ಚಿತ್ರ. ತಮ್ಮನ್ನು ಬಿನ್ನವಾಗಿ ತೋರಿಸಲಿದೆ ಎನ್ನುತ್ತಾರೆ.
ಚಿತ್ರದಲ್ಲಿ ಇವರು ಅಪಘಾತದಲ್ಲಿ ಪೆಟ್ಟು ತಿಂದು ಮಾನಸಿಕ ಅಸ್ವಸ್ಥನಾಗಿರುವ ಪಾತ್ರವಂತೆ. ನಿಜಕ್ಕೂ ಈ ಪಾತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇನೆ. ಅಭಿನಯವನ್ನು ಉತ್ತಮವಾಗಿ ಮಾಡಲು ಸಾಕಷ್ಟು ಯತ್ನಿಸಿದ್ದೇನೆ ಎನ್ನುತ್ತಾರೆ. ಇನ್ನೊಂದು ಚಿತ್ರ ಕಂಠೀರವ. ಇದರ ಶೂಟಿಂಗ್ ಮುಗಿದು ಡಬ್ಬಿಂಗ್ ಕಾರ್ಯ ಜಾರಿಯಲ್ಲಿದೆ. ಇದೊಂದು ದೊಡ್ಡ ಕಥೆ. ರಾಮು ಚಿತ್ರಕ್ಕೆ ತುಂಬಾ ಹಣ ಹೂಡಿದ್ದಾರೆ. ಗೆಲ್ಲುವ ವಿಶ್ವಾಸ ಅವರಿಗಿದೆ. ಜನರೂ ಇಂಥ ಚಿತ್ರವನ್ನು ನೋಡಿ ಪೋಷಿಸಬೇಕು ಎನ್ನುತ್ತಾರೆ.
ಮತ್ತೊಂದು ಚಿತ್ರ ವೀರಬಾಹು. ಹೆಸರು ಕೇಳಿದ ತಕ್ಷಣ ಪೌರಾಣಿಕ ಚಿತ್ರ ಅಂದುಕೊಳ್ಳಬೇಡಿ. ಇದೊಂದು ಸ್ಮಶಾನ ಕಾಯುವ ಯುವಕನ ಪಾತ್ರ ಕುರಿತಾದ ಚಿತ್ರವಂತೆ. ಸ್ಮಶಾನದಲ್ಲಿ ಏನೆಲ್ಲಾ ಸನ್ನಿವೇಶಗಳು ನಡೆಯುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ಕಾಣಬಹುದು. ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. 30 ಚಿತ್ರಗಳನ್ನು ಮಾಡಿದ ಅನುಭವ ಇರುವ ಸಂದೇಶ್‌ಗೆ ಇದೊಂದು ಸವಾಲಿನ ಚಿತ್ರವಂತೆ. ಎಂ.ಎಸ್. ರಮೇಶ್ ಈ ಚಿತ್ರದ ನಿರ್ದೇಶಕರು.
ಒಟ್ಟಾರೆ ದುನಿಯಾ ವಿಜಯ್ ಸಾಕಷ್ಟು ಅತ್ಯುತ್ತಮ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ನೋಡುಗರ ಮೇಲೆ ಅಪಾರ ವಿಶ್ವಾಸ ಇರಿಸಿಕೊಂಡು, ಎಲ್ಲಾ ಚಿತ್ರವೂ ಗೆಲ್ಲುತ್ತದೆ ಎನ್ನುತ್ತಿದ್ದಾರೆ. ಆದರೆ ಉತ್ತಮ ಚಿತ್ರ ಹಾಗೂ ಯಶಸ್ವಿ ಚಿತ್ರದ ನೀರೀಕ್ಷೆಯಲ್ಲಿರುವ ವಿಜಯ್ಗೆ ಇದರಲ್ಲಿ ಯಾವುದಾದರೂ ಒಂದು ಚಿತ್ರ ಕೈ ಹಿಡಿದರೂ ಸಾಕು. ಆಲ್ ದಿ ಬೆಸ್ಟ್ ವಿಜಯ್.