ಥ್ರಿಲ್ಲರ್ ಮಂಜು ನಿರ್ದೇಶನದ ಮತ್ತೊಂದು ಥ್ರಿಲ್ಲರ್ ಕಿಲ್ಲರ್ ಚಿತ್ರ 'ಜಯಹೇ' ಚಿತ್ರ ಇದೇ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಪ್ರತಿಯೊಬ್ಬ ಸಾಹಸ ಪ್ರೇಮಿ ಚಿತ್ರ ವೀಕ್ಷಕರೂ ನೋಡಲೇ ಬೇಕು. ಏಕೆಂದರೆ ಇಲ್ಲಿ ಲೇಡಿ ಬ್ರೂಸ್ಲೀ ಆಯೇಷಾ ಇದ್ದಾರೆ ಅಂತಿದೆ ಚಿತ್ರತಂಡ.
ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಆಯೇಷಾ, ಫೈಟಿಂಗ್‌ಗೆ ನಿಂತರೆ ಕನ್ನಡದ ಜಾಕಿಚಾನ್ ಎನಿಸಿಕೊಳ್ಳುತ್ತಾರೆ. ಈಗಾಗಲೇ ತಮ್ಮ ಕಟ್ಟುಮಸ್ತಾದ ಎದೆಗಾರಿಕೆಯಿಂದ ಪಡ್ಡೆ ಹುಡುಗರ ಶಿಳ್ಳೆ ಗಿಟ್ಟಿಸಿರುವ ಆಯೇಷಾ, ಇದೀಗ ಫೈಟ್ ಮೂಲಕ ಕನ್ನಡದ ಇನ್ನಷ್ಟು ಚಿತ್ರರಸಿಕರ ಮನಗೆಲ್ಲಲು ಮುಂದಾಗಿದ್ದಾರೆ. ಚಿತ್ರದಲ್ಲಿ ಮನಸೂರೆಗೊಳ್ಳುವ ಹತ್ತಾರು ಫೈಟ್‌ಗಳು ಇವೆಯಂತೆ. ಇವರ ಚರೀಷ್ಮಾ ಪರದೆ ಮೇಲೆ ಏನೆಲ್ಲ ಗಮ್ಮತ್ತು ತೋರುತ್ತದೆ ಎನ್ನುವುದನ್ನು ನೋಡಲು ಚಿತ್ರ ವೀಕ್ಷಣೆಗೆ ಬರಬೇಕು.
ಸಾಹಸ ನಿರ್ದೇಶನ ಹಾಗೂ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಥ್ರಿಲ್ಲರ್ ಮಂಜು, ರಜನಿ ಚಿತ್ರದ ನಂತರ ಮತ್ತೊಮ್ಮೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಮತ್ತೊಮ್ಮೆ ಮಾರ್ಷಲ್ ಆರ್ಟ್ ಪ್ರದರ್ಶನ ಮಾಡಲಿದ್ದಾರೆ. ಚಿತ್ರದ ಸಾಹಿತ್ಯವನ್ನೂ ಅವರೇ ಬರೆದಿದ್ದಾರೆ. ಕೃಪಾಕರ್ ಸಂಗೀತವಿದ್ದು, ಜನಾರ್ದನ ಬಾಬು ಅವರ ಛಾಯಾಗ್ರಹಣವಿದೆ. ತಾರಾಗಣದಲ್ಲಿ ಜೈ ಆಕಾಶ್, ಥ್ರಿಲ್ಲರ್ ಮಂಜು, ಅವಿನಾಶ್, ರಮೇಶ್ ಭಟ್ ಮೊದಲಾದವರಿದ್ದಾರೆ.
ನಿಜಕ್ಕೂ ಕನ್ನಡದ ಪಾಲಿಗೆ ಇದೊಂದು ಅದ್ಬುತ ಸಾಹಸ ಚಿತ್ರ. ವೀಕ್ಷಿಸಿ ಇದರ ಅನುಭವ ಪಡೆಯುವುದು ಪ್ರೇಕ್ಷಕರಿಗೆ ಬಿಟ್ಟಿದ್ದು. ಚಿತ್ರದ ಸೋಲಿನ ಪಟ್ಟಿಗೆ ಇದು ಸೇರುತ್ತಾ ಅಥವಾ ಗೆದ್ದು ಹೆಸರು ಮಾಡುತ್ತಾ ನೋಡಬೇಕಿದೆ.