ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ವಿಷ್ಣುವರ್ಧನ' ಟೈಟಲ್ ವಿವಾದಕ್ಕೆ ಹೊಸ ತಿರುವು! (Vishnuvardhan | Sudeep | Dwarakeesh | Bharathi)
ಸುದ್ದಿ/ಗಾಸಿಪ್
Bookmark and Share Feedback Print
 
PR
ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಸಿನಿಮಾ ಮಾಡುವ ದ್ವಾರಕೀಶ್ ಪ್ರಯತ್ನ ನೀರಿನಲ್ಲಿ ಮಾಡಿದ ಹೋಮದಂತಾಗಿದೆ. ವಿಷ್ಣುವರ್ಧನ ಶೀರ್ಷಿಕೆಯನ್ನು ಯಾರೂ ಬಳಕೆ ಮಾಡುವಂತಿಲ್ಲಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದ್ದು ಶುಕ್ರವಾರ ಆದೇಶ ಹೊರಡಿಸಿದೆ. ಇದೇ ವೇಳೆ ವಿಷ್ಣುವರ್ಧನ ಚಿತ್ರದ ಟೈಟಲ್ ವಿವಾದ ಹೊಸ ತಿರುವು ಪಡೆದಿದ್ದು ನಟ ಅಭಿಜಿತ್, ಈಗಾಗಲೇ ತಾನು ವಿಷ್ಣು ಹೆಸರಿನ ಸಿನಿಮಾ ಟೈಟಲ್‌ಗೆ ಮಂಡಳಿಯಿಂದ ಅನುಮತಿ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ!

ಇದೇ ವೇಳೆ ಟೈಟಲ್‌ಗೆ ಅನುಮತಿ ನೀಡದಿರುವ ಬಗ್ಗೆ ದ್ವಾರಕೀಶ್, ಸುದೀಪ್ ಅವರ ನಿರ್ಧಾರದಂತೆ ಮುನ್ನಡೆಯುತ್ತೇವೆ. ಬಲವಂತವಾಗಿ ಚಿತ್ರದ ಟೈಟಲ್ ಪಡೆಯುವ ಆಸೆ ನನಗಿಲ್ಲ ಎಂದಿದ್ದಾರೆ.

ಚಿತ್ರದ ನಾಯಕ ನಟ ಸುದೀಪ್ ಕೂಡಾ ಈ ಬಗ್ಗೆ ಮಾತನಾಡುತ್ತಾ, ಸಮಿತಿಯ ತೀರ್ಮಾನದಿಂದ ನನಗೆ ಬೇಸರವಾಗಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.

ಭಾರತಿ ವಿಷ್ಣುವರ್ಧನ್ ಅವರ ಮೇಲೆ ನನಗೆ ಗೌರವವಿದೆ. ಟೈಟಲ್ ವಿವಾದಕ್ಕೂ ಮುನ್ನ ನಾನು ಯಾವ ರೀತಿ ಭಾರತಿ ಅವರನ್ನು ಗೌರವಿಸುತ್ತಿದ್ದೆನೋ ಈಗಲೂ ಅದೇ ರೀತಿ ಗೌರವವಿದೆ. ನೋಡೋಣ. ಇನ್ನೂ ಸಮಯವಿದೆ. ಚಿತ್ರದ ಟೈಟಲ್ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಲಿದ್ದೇವೆ ಎಂದಿದ್ದಾರೆ ಸುದೀಪ್. ಈಗಾಗಲೇ ಪ್ರೊಡಕ್ಷನ್ ನಂ47 ಎಂಬ ಅನಾಮಧೇಯ ಹೆಸರಿನಡಿ ಚಿತ್ರ ಸೆಟ್ಟೇರಿದ್ದು ಸುದೀಪ್ ರಾಜನ ವೇಷದಲ್ಲಿ ನಟಿಸಿದ್ದರು.

ಆದರೆ ಇದೇ ವೇಳೆ ನಟ ಅಭಿಜಿತ್ ಅವರು, ನಾನೀಗಾಗಲೇ ವಿಷ್ಣು ಹೆಸರಿನಲ್ಲಿ ಚಿತ್ರವೊಂದಕ್ಕೆ ಟೈಟಲ್ ಅನುಮತಿ ಪಡೆದಿದ್ದೇನೆ. ಹಾಗಾಗಿ ವಿಷ್ಣು ಹೆಸರಿನಲ್ಲಿ ದ್ವಾರಕೀಶ್‌ಗೆ ಖಂಡಿತಾ ನಾನು ಟೈಟಲ್ ನೀಡುವುದಿಲ್ಲ. ನಾನು ಟೈಟಲ್ ಪಡೆದಿರುವ ಬಗ್ಗೆ ಭಾರತಿ ಅವರಿಗೂ ತಿಳಿದಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ, ಸುದೀಪ್, ದ್ವಾರಕೀಶ್, ಕರ್ನಾಟಕ ಚಲನಚಿತ್ರ ಮಾಣಿಜ್ಯ ಮಂಡಳಿ, ಅಭಿಜಿತ್, ಭಾರತಿ ವಿಷ್ಣುವರ್ಧನ್