ಕನ್ನಡದ ಮಿ.ಕೋಕಿಲಾ ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿ ನಂತರ ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾಗಿ ಬೆಳೆದ ನಟ ಕೋಕಿಲಾ ಮೋಹನ್. ಕಳೆದ ವರ್ಷ ತೆರೆಕಂಡ ಇವರ 'ಗೌತಮ' ಚಿತ್ರ ಕೊಂಚ ಹೆಸರು ಮಾಡಿತ್ತು. ಇದೀಗ ಅವರು ಮತ್ತೆ ಕನ್ನಡಕ್ಕೆ ಬಂದಿದ್ದಾರೆ.
ಹೌದು, ಇವರ ಹೊಸ ಚಿತ್ರ 'ಅಶೋಕವನ'ಕ್ಕಾಗಿ ಇವರು ಬರಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ವಿಶಾಖಪಟ್ಟಣಂನಲ್ಲಿ ಬಿರುಸಿನಿಂದ ಸಾಗಿದೆ. ಮಾಸಾಂತ್ಯಕ್ಕೆ ಚಿತ್ರತಂಡ ಬೆಂಗಳೂರಿಗೆ ಮರಳುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಕೌಟುಂಬಿಕ ಹಿನ್ನೆಲೆ ಒಳಗೊಂಡ ಕೌತುಕಮಯ ಚಿತ್ರ ಇದಾಗಿದೆ. ಚಿತ್ರವನ್ನು ಸ್ಯಾಮ್ ಜೆ. ಚೈತನ್ಯ ನಿರ್ದೇಶಿಸುತ್ತಿದ್ದಾರೆ.
ಬಹು ನಿರೀಕ್ಷೆಯ ಈ ಚಿತ್ರದ ಇನ್ನೊಂದು ವಿಶೇಷ ಎಂದರೆ, ಚಿತ್ರದ ಕಥೆ ಒಂದು ಗಂಟೆಯಲ್ಲಿ ನಿರ್ಧಾರವಾಯಿತಂತೆ. ಆದರೆ ಚಿತ್ರಕಥೆ ಸಿದ್ಧವಾಗಲು ಒಂದು ವರ್ಷ ಬೇಕಾಯಿತಂತೆ. ಇದಕ್ಕೂ ಸಾಕಷ್ಟು ಕಾರಣವಿದೆ. ಕಾರಣ ಚಿತ್ರ ಕಥೆಯ ಮೂಲಕ ಸಾಗುವುದಿಲ್ಲ. ತಂತ್ರಜ್ಞಾನದ ಮೂಲಕ ಬೆಳೆಯುತ್ತದೆ. ಇದರಿಂದ ಇವರ ಅನುಕೂಲ ನೋಡಿ ಸರಳವಾಗಿ ಚಿತ್ರ ರಚಿಸಲಾಗಿದೆ ಎನ್ನಲಾಗುತ್ತಿದೆ.
ಗೌರಿ ಮೋಹನ್‌ರ ರೆಡ್ ಕಾರ್ಪೆಟ್ ರೀಲ್ಸ್ ಸಂಸ್ಥೆಯ ಲಾಂಛನದ ಅಡಿ ಚಿತ್ರ ಸಿದ್ಧವಾಗುತ್ತಿದೆ. ಎಸ್.ಎಲ್. ಸರವಣ್ ಹಾಗೂ ಜೆ. ಸ್ಯಾಮ್ಸನ್ ಬಾಬು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಛಾಯಾಗ್ರಹಣ ಎಸ್.ಎಲ್. ಆರ್ಯನ್ ಸಾರೊ ಅವರದ್ದು. ಸೂರ್ಯ ಅವರ ಸಂಕಲನವಿದೆ.