ನಾರಿಯ ಸೀರೆ ಕದ್ದ ರವಿಚಂದ್ರನ್ ಜೊತೆ ನಿಖಿತಾ, ಶುಭಾ ಪೂಂಜಾ!
MOKSHA
ಕ್ರೇಜಿಸ್ಟಾರ್ ರವಿಚಂದ್ರನ್ ನಾರಿಯರ ಸೀರೆ ಕದಿಯಲು ಮುಂದಾಗಿದ್ದಾರೆ. ಇದೇನು ಇದುವರೆಗೂ ಸೀರೆಯುಟ್ಟ ನಾರಿಯರನ್ನು ಕ್ಯಾಮರಾ ಎದುರು ಸೆರಗು ಹಾರುವಂತೆ ಮಾಡುತ್ತಿದ್ದ ನಮ್ಮ ರವಿಮಾಮನಿಗೆ ಇದ್ಯಾವ ಗ್ರಹಚಾರ ಬಂತು ಅಂದುಕೊಂಡಿರಾ? ತಪ್ಪು ಕಲ್ಪಿಸಿಕೊಳ್ಳಬೇಡಿ. ಇದು ರವಿ ಅಭಿನಯದ ಲೇಟೆಸ್ಟ್ ಚಿತ್ರದ ಸುದ್ದಿ.
MOKSHA
ಹೌದು. ರವಿಚಂದ್ರನ್ 'ನಾರಿಯ ಸೀರೆ ಕದ್ದ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮನರಂಜನೆಗೆ ಒತ್ತುಕೊಟ್ಟು ಈ ಚಿತ್ರ ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು ಸುತ್ತಲೂ ಒಂದೂವರೆ ತಿಂಗಳು ಚಿತ್ರೀಕರಣ ನಡೆಯಲಿದೆ. ಸಂಗೀತಂ ಶ್ರೀನಿವಾಸರಾವ್, ಎಂ.ಎಸ್. ರಾಜಶೇಖರ್ ಮತ್ತಿತರ ಹಿರಿಯ ನಿರ್ದೇಶಕರ ಜತೆ ಕೆಲಸ ಮಡಿದ ಅನುಭವ ಇರುವ ಅಣ್ಣಯ್ಯ ಅವರು ಈ ಚಿತ್ರದ ನಿರ್ದೇಶಕರು.
ಸದ್ಯ ಹೂ ಚಿತ್ರದ ನಂತರ ಆಸೆ ಹಾಗೂ ಮಂಜಿನ ಹನಿ ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿರುವ ರವಿ ತಮ್ಮ ಬ್ಯುಸಿ ಷಡ್ಯೂಲ್ ನಡುವೆಯೂ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
MOKSHA
ಚಿತ್ರದ ಹಾಡುಗಳನ್ನು ರಾಜ್ಯದ ರಮಣೀಯ ತಾಣಗಳಲ್ಲಿ ತೆಗೆಯುವುದು ತಂಡದ ಉದ್ದೇಶ. ಗೌತಮಿ ಎಂಟರ್ಪ್ರೈಸಸ್ ಅಡಿ ಡಿ.ಬಿ. ಕುಮಾರಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಣ್ಣಯ್ಯ ಅವರೇ ಕಥೆ ಚಿತ್ರಕಥೆ ರಚಿಸಿದ್ದಾರೆ. ನಟ ಹಾಗೂ ನಿರ್ದೇಶಕ ಮೋಹನ್ ಸಂಭಾಷಣೆ ಬರೆದಿದ್ದಾರೆ. ವಿ. ಮನೋಹರ್ ಸಂಗೀತ, ವಿಷ್ಣುವರ್ಧನ್ ಛಾಯಾಗ್ರಹಣ ಹಾಗೂ ಸಂಜೀವರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ. ರವಿಚಂದ್ರನ್‌ಗೆ ನಾಯಕಿಯಾಗಿ ನಿಖಿತಾ ಆಯ್ಕೆಯಾಗಿದ್ದಾರೆ. ನವೀನ್ ಕೃಷ್ಣ, ಶುಭಾ ಪೂಂಜಾ ಹಾಗೂ ದತ್ತಣ್ಣ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರಂತೆ.