ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈಗಲೂ ನಕ್ಕು ನಗಿಸುವ ಅನಂತನಾಗ್ ಕಾಮಿಡಿ ಟೈಂ! (Ananthanag, Comedy, Eradane Maduve)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಅನಂತನಾಗ್ ನಿಜಕ್ಕೂ ತೆರೆಯ ಮೇಲೆ ಹೇಗೋ, ನಿಜ ಜೀವನದಲ್ಲೂ ತುಂಬ ತುಂಬ ಕಾಮಿಡಿ ವ್ಯಕ್ತಿಯಂತೆ. ಅವರು ಇನ್ನೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಸೆಟ್ಟಿನಲ್ಲಿ ಇದ್ದುಬಿಡುತ್ತಾರೆ. ಆದರೆ, ಯಾರನ್ನಾದರೂ ಹತ್ತಿರ ಬಿಟ್ಟುಕೊಂಡರೆ ಮುಗಿಯಿತು. ಅವರನ್ನು ದಿನ ಪೂರ್ತಿ ನಗಿಸದೇ ಬಿಡುವುದಿಲ್ಲವಂತೆ!

ಎರಡನೇ ಮದುವೆ ಚಿತ್ರ ತೆರೆಗೆ ಬಂದಿದೆ. ಚಿತ್ರದಲ್ಲಿ ಅನಂತನಾಗ್ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಇಂಥ ಅನಂತನಾಗ್ ಯುವಕನಾಗಿದ್ದಾಗ ಹೇಗೆ ಜನಪ್ರಿಯತೆಯ ಉತ್ತುಂಗದಲ್ಲಿದ್ದರೋ, ಹಾಗೆಯೇ ಇಳಿ ವಯಸ್ಸಿನಲ್ಲೂ ಜನರ ಮನದಲ್ಲಿ ಭರ್ಜರಿಯಾಗಿಯೇ ಸ್ಥಾನ ಪಡೆದಿದ್ದಾರೆ. ಹಾಗಾಗಿಯೇ ಅನಂತ್ ಸಿನಿಮಾ ಬಿಡುಗಡೆ ಅವರ ಅಭಿಮಾನಿ ವರ್ಗ ಕಾತರದಿಂದ ಕಾಯುತ್ತಿರುತ್ತಾರೆ. ಇಂಥ ಅನಂತ್‌ನಾಗ್ ಯಾರನ್ನಾದರೂ ಹತ್ತು ನಿಮಿಷ ನೋಡಿದರೆ, ಅವರ ಸ್ವಭಾವ, ಹಾವಭಾವವನ್ನು ಯಥಾವತ್ ಮಿಮಿಕ್ರಿ ಮಾಡುತ್ತಾರಂತೆ. ಯಾವ ಮಟ್ಟದಲ್ಲಿ ಎಂದರೆ, ಎದುರಿಗೆ ನಿಂತವರು ಹೇಗೆ ಮಾಡುತ್ತಾರೋ, ಮಾತನಾಡುತ್ತಾರೋ ಅದೇ ರೀತಿ ಅನುಕರಣೆ ಮಾಡುತ್ತಾರಂತೆ! ಹಾಗಂತ ಅದು ವ್ಯಂಗ್ಯ ಅಲ್ಲ ತಮಾಷೆ. ಕೆಲವೊಮ್ಮೆ ಅದನ್ನು ಅವರಿಗೂ ತಿಳಿಸಿ, ಅವರ ಮುಂದೆಯೇ ನಟಿಸಿ, ಖುಷಿ ಪಡಿಸುತ್ತಾರಂತೆ.

ಅಂದಹಾಗೆ, ಎರಡನೇ ಮದುವೆ ಚಿತ್ರದಲ್ಲಿ ಅನಂತನಾಗ್ ಪಾತ್ರವೇ ಹೈಲೈಟ್. ಅವರು ಸುಮ್ಮನಿದ್ದೇ ನಗಿಸುತ್ತಾರೆ. ಅನಂತ್, ಶರಣ್ ಹಾಗೂ ತಾರಾ ಕಾಂಬಿನೇಷನ್ ನೋಡುತ್ತಿದ್ದರೆ ಜನ ಬಿಕ್ಕಿಬಿಕ್ಕಿ ನಗುತ್ತಿದ್ದಾರಂತೆ. ಈ ಚಿತ್ರದ ಜತೆ ಇವರ ಅಭಿನಯದ ಒಲವೇ ವಿಸ್ಮಯವೂ ಬಿಡುಗಡೆ ಅಗಿದೆ. ಕಳೆದ ಮೂರು ವಾರದ ಅವಧಿಯಲ್ಲಿ ಇವರ ಮೂರನೇ ಚಿತ್ರ ಇದಾಗಿದೆ.

ಒಟ್ಟಾರೆ ದಿನದಿಂದ ದಿನಕ್ಕೆ ಪ್ರಬುದ್ಧತೆ ಸಾಧಿಸುತ್ತಿರುವ ಅನಂತ್ ಮಾಡಿದ ಚಿತ್ರವೆಲ್ಲಾ ಉತ್ತಮ ಪಾತ್ರ ಪೋಷಣೆಯಿಂದ ಹೆಸರು ಮಾಡುತ್ತಿವೆ. ಇವರ ಅಭಿನಯದ ತೀರ್ಥ ಚಿತ್ರಕ್ಕೆ ಜನ ತೀರ್ಥ ಸುರಿದಿರಬಹುದು. ಆದರೆ ಅನಂತ್ ಅಭಿನಯವನ್ನು ಮೆಚ್ಚಿಕೊಳ್ಳದಿದ್ದವರು ಯಾರೂ ಇಲ್ಲ ಬಿಡಿ. ಮತ್ಯಾಕೆ ತಡ ಇನ್ನೊಮ್ಮೆ ಎರಡನೇ ಮದುವೆ ಸವಿದು ಬನ್ನಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅನಂತನಾಗ್, ಕಾಮಿಡಿ, ಎರಡನೇ ಮದುವೆ