ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ಬಣ್ಣ ಹಚ್ಚಲಿರುವ ಕುಮಾರಣ್ಣನ 'ಹಸಿವು'! (Hasivu | Kumaraswamy | Shivakashi | Politics)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕುಮಾರಸ್ವಾಮಿ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲು ಯಾವ ಚಿತ್ರದಲ್ಲಿ ನಟಿಸಿದ್ದರು ಅಂತ ಕೇಳಿದಿರಾ? ಹೌದು ಸ್ವಾಮಿ ಇನ್ನೂ ತೆರೆಕಾಣದ ಶಿವಕಾಶಿಯಲ್ಲಿ ಅವರು ಸಿಎಂ ಆಗಿ ಮೆರೆದಿದ್ದಾರೆ. ಇದುವರೆಗೂ ನಿರ್ಮಾಪಕ ಹಾಗೂ ಹಂಚಿಕೆದಾರರಾಗಿ ಮಾತ್ರ ಕಾಣಿಸಿಕೊಂಡಿದ್ದ ಕುಮಾರಸ್ವಾಮಿ ನಟರಾಗಿ ಮಿಂಚುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಅಸಲಿ ರಾಜಕೀಯ ಬದುಕಿನಲ್ಲೂ ಸಿಎಂ ಆಗಿ ಮೆರೆದಿದ್ದ ಕುಮಾರಣ್ಣ ಶಿವಕಾಶಿಯಲ್ಲಿ ಯಾವ ಮಾದರಿಯ ಸಿಎಂ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಅದರ ನಡುವೆಯೇ ಮತ್ತೊಂದು ಚಿತ್ರದಲ್ಲಿ ಅವರು ನಟಿಸುವ ಸುದ್ದಿ ಕೇಳಿ ಬಂದಿದೆ. ಹೌದು, ಕುಮಾರಣ್ಣ ಬಹುದಿನದ ನಂತರ ಚಿತ್ರರಂಗದತ್ತ ಲಕ್ಷ್ಯ ಹರಿಸುತ್ತಿದ್ದಾರೆ. ಕೆಲ ಸಿನಿಮಾ ಸಂಬಂಧಿ ಕಾರ್ಯಕ್ರಮವನ್ನು ಅಟೆಂಡ್ ಮಾಡುತ್ತಿದ್ದಾರೆ. ಅಂತಿಮವಾಗಿ ಚಿತ್ರವೊಂದರಲ್ಲಿ ನಟಿಸಲೂ ಮುಂದಾಗಿದ್ದಾರೆ. ಚಿತ್ರದ ಹೆಸರು 'ಹಸಿವು'. ಇದಕ್ಕೊಂದು ಅಡಿ ಬರಹ ಇದೆ 'ಕಥೆ ಕೇಳು ದೊರೆಯೇ'. ಚಿತ್ರದ ಪಾತ್ರ ವಿವರ ತಿಳಿದು ಬಂದಿಲ್ಲ. ಕುಮಾರಣ್ಣನ ಪಾತ್ರ ಏನು ಅನ್ನುವುದೂ ಗೊತ್ತಾಗಿಲ್ಲ.

ಅಂದಹಾಗೆ ಮಂಜು ದೈವಜ್ಞ ಚಿತ್ರದ ನಿರ್ದೇಶಕ, ಶ್ರೀ ತಿರುಮಲ ಸಿನಿ ಪ್ರೊಡಕ್ಷನ್ ಲಾಂಛನದ ಅಡಿ ಚಿತ್ರ ನಿರ್ಮಾಣ ಆಗುತ್ತಿದೆ. ಮಂಜು ದೈವಜ್ಞ ಅವರ ನಾರದ ವಿಜಯ ಚಿತ್ರ ಸಹ ಇನ್ನೇನು ತೆರೆ ಕಾಣಬೇಕಾಗಿದೆ. ಅದರ ನಿರೀಕ್ಷೆಯಲ್ಲಿ ಅವರು ಇದ್ದಾರೆ. ಕಳವಾಸ ರಘು ಚಿತ್ರದ ಕಥೆ, ಚಿತ್ರಕಥೆ ಸಂಭಾಷಣೆ ಹಾಗೂ ಗೀತರಚನೆಯ ಜವಾಬ್ದಾರಿ ವಹಿಸಿದ್ದಾರೆ. ಶ್ರೀಶಿವು ಛಾಯಾಗ್ರಹಣ ಹಾಗೂ ಗೋವರ್ಧನ್ ಸಂಕಲನ ಚಿತ್ರಕ್ಕೆ ಇದೆ. ಸಂಗೀತ ನಿರ್ದೇಶಕರ ಆಯ್ಕೆ ಇನ್ನೂ ಆಗಿಲ್ಲ. ಶ್ರಾವಣ ಮಾಸದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಸಿವು, ಕುಮಾರಸ್ವಾಮಿ, ಶಿವಕಾಶಿ, ರಾಜಕೀಯ, ಕರ್ನಾಟಕ ಸಿಎಂ