ಅತ್ಯಂತ ಹಿರಿಯ ಹಾಗೂ ಜನಪ್ರಿಯ ನಾಯಕರನ್ನು ಒಳಗೊಂಡ ಮಲ್ಟಿ ಸ್ಟಾರ್ ಚಿತ್ರವೊಂದು ಸದ್ಯವೇ ಸೆಟ್ಟೇರಲಿದೆ. ಪ್ರಸ್ತುತ 'ವಿಘ್ನ' ಎಂಬ ಹೆಸರಿನಲ್ಲಿ ಚಿತ್ರ ಆರಂಭವಾಗಲಿದ್ದು, ಸೆಟ್ಟೇರಿ ಚಿತ್ರೀಕರಣ ಆರಂಭವಾಗುವ ಒಳಗೆ ಯಾವುದೇ ವಿಘ್ನ ಕಾಡದಿದ್ದರೆ ಇದೇ ಹೆಸರು ಇರಲಿದೆ.
ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಶಶಿಕುಮಾರ್, ಆದಿ ಲೋಕೇಶ್ ಸೇರಿದಂತೆ ಹಲವು ಜನಪ್ರಿಯ ನಟರು ನಟಿಸುತ್ತಿದ್ದಾರೆ. ಇದೊಂದು ಕಮರ್ಷಿಯಲ್ ಸಿನಿಮಾ ಆಗಿದ್ದು, ಯಾವುದೇ ಸಸ್ಪೆನ್ಸ್ ಅಥವಾ ಸೆಂಟಿಮೆಂಟು ಇಲ್ಲ. ಎಲ್ಲಾ ಡೈರೆಕ್ಟ್ ಅಟ್ಯಾಕ್ ಅಂತೆ. ಬದುಕಿನಲ್ಲಿ ಎದುರಾಗುವ ಎಲ್ಲಾ ಋಣಾತ್ಮಕ ಘಟನೆಯನ್ನು ಧನಾತ್ಮಕವಾಗಿಸುವುದು ಚಿತ್ರದ ವಿಶೇಷ.
ಚಿತ್ರದ ನಿರ್ದೇಶಕ ಸುನಿಲ್. ಇವರು ಇದುವರೆಗೂ ಸಾಕಷ್ಟು ಚಿತ್ರಗಳಲ್ಲಿ ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದು ಇವರ ಪೂರ್ಣ ಪ್ರಮಾಣದ ನಿರ್ದೇಶನದ ಮೊದಲ ಚಿತ್ರ. ಚಿತ್ರದ ನಾಯಕರ ಪಾತ್ರದ ಬಗ್ಗೆ ಮಾಹಿತಿ ಆಗಲಿ, ಉಳಿದ ತಂತ್ರಜ್ಞರ ಬಗ್ಗೆಯಾಗಲಿ, ಅಸಲಿ ನಾಯಕಿಯರು ಯಾರು ಎನ್ನುವುದು ಸಹ ಇದುವರೆಗೂ ತಿಳಿದು ಬಂದಿಲ್ಲ. ಸದ್ಯವೇ ಅದನ್ನು ಘೋಷಿಸುವುದಾಗ ನಿರ್ದೇಶಕರು ಹೇಳುತ್ತಾರೆ.