ಡಬ್ಬಲ್ ಮೀನಿಂಗ್ ಡೈಲಾಗ್ ಅಂದಾಕ್ಷಣ ನೆನಪಾಗುವ ಹೆಸರು ಕಾಶೀನಾಥ್. ಹೌದು ಒಂದು ಸಂದರ್ಭದಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ ಮೂಲಕವೇ ಕನ್ನಡ ಚಿತ್ರರಂಗವನ್ನು ಆಳಿದ ದೊರೆ ಇವರು. ಅಲ್ಲದೇ ಸಸ್ಪೆನ್ಸ್ ಚಿತ್ರಗಳ ಮೂಲಕ ಮನೆ ಮಾತಾಗಿದ್ದರು. ಇದೀಗ ಡಬ್ಬಲ್ ಮೀನಿಂಗ್ ಡೈಲಾಗ್ ಅಷ್ಟಾಗಿ ಉಳಿದಿಲ್ಲ. ಅದರಿಂದ ಸಸ್ಪೆನ್ಸ್ ಟ್ರೈ ಮಾಡೋಣ ಅನ್ನುವ ಕಾರ್ಯಕ್ಕೆ ಕಾಶೀನಾಥ್ ಮುಂದಾಗಿದ್ದಾರೆ. ಇದರ ಫಲವೇ 12ಎ.ಎಮ್.
ಕಾಲ ಬದಲಾದಂತೇ ಕಾಶಿ ಸಿನಿಮಾಗೆ ಆ ಮಟ್ಟದ ಪ್ರತಿಕ್ರಿಯೆ, ಜನಪ್ರಿಯತೆ ಸಿಗಲಿಲ್ಲ. ಎಲ್ಲೋ ಒಂದು ಕಡೆ ಅವರು ಅಪ್ಡೇಟ್ ಆಗದೇ ಹಿಂದೆ ಉಳಿದುಕೊಂಡು ಬಿಟ್ಟರೋ ಏನೋ. ಇದೀಗ ಅದೆಲ್ಲಾ ದೂರಾಗಿದೆ. ಮತ್ತೆ ಚಿತ್ರರಂಗಕ್ಕೆ ಅವರು ಯಶಸ್ವಿಯಾಗಿ ಮರಳುವ ಸೂಚನೆ ನೀಡಿದ್ದಾರೆ. ಈ ಮಧ್ಯೆ ಇವರ ಮೂರ್ಖ, ಅಪ್ಪಚ್ಚಿ ಮೊದಲಾದ ಚಿತ್ರಗಳು ಬಂದವಾದರೂ, ಹೆಸರು ಮಾಡಲಿಲ್ಲ. ಇದೀಗ ಒಂದು ಹೊಸ ಸೂತ್ರಕ್ಕೆ ಇವರು ಒಳಗಾಗಿ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬರಲು ಕಾರ್ಯ ರೂಪಿಸಿದ್ದಾರೆ.
ಕಾಶಿನಾಥ್ ಪ್ರಥಮ ಪ್ರಯೋಗ ಎಂಬಂತೆ ಒಂದು ಚಿತ್ರವನ್ನು ಶುರುಮಾಡಿದ್ದಾರೆ ಹೆಸರು '12 ಎ.ಎಮ್'. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಕಾಶಿ ಶಿಷ್ಯ ಕಾರ್ತಿಕ್‌ಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ. ನಿರ್ಮಾಪಕರು ವಿಜಯ್ ಕುಮಾರ್. ಅವರು ವೃತ್ತಿಯಲ್ಲಿ ಬಿಲ್ಡರ್. ಇದೇ ಮೊದಲ ಬಾರಿಗೆ ಸಿನಿಮಾಗೆ ಬಂದಿದ್ದಾರೆ. ಕಾಶಿನಾಥ್ ಎಲ್ಲದರ ಉಸ್ತುವಾರಿ ವಹಿಸಿಕೊಂಡು, ಕಾರ್ಯಕಾರಿ ನಿರ್ಮಾಪಕರ ಸ್ಥಾನದಲ್ಲಿ ನಿಂತಿದ್ದಾರೆ. ಕಾಶಿ ಮಗ ಅಲೋಕ್ ಅಲಿಯಾಸ್ ಅಭಿಮನ್ಯು ಚಿತ್ರದ ನಾಯಕ. ವಿ. ಮನೋಹರ್‌ಗೆ ಸಂಗೀತದ ಜವಾಬ್ದಾರಿ ನೀಡಲಿದ್ದಾರೆ.