ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೊಬೈಲ್ ಕ್ಯಾಮರಾದಲ್ಲೇ ಸಿನಿಮಾ ಮಾಡಿದ್ರು! (Mobile Camera | Sandalwood)
ಸುದ್ದಿ/ಗಾಸಿಪ್
Bookmark and Share Feedback Print
 
ಸಿನಿಮಾವನ್ನು ಮೊಬೈಲ್ ಕ್ಯಾಮರಾ ಮೂಲಕವೂ ಚಿತ್ರಿಸಬಹುದು ಎನ್ನುವ ಸತ್ಯವನ್ನು ಕನ್ನಡ ಚಿತ್ರರಂಗದಲ್ಲಿ ಒಬ್ಬರು ತೋರಿಸಿಕೊಟ್ಟಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಕೋಟಿ ಕೋಟಿ ರೂ. ಬಂಡವಾಳ ಬೇಕು ಎಂದು ಹೇಳುವವರಿಗೆ ಇದು ಸಡ್ಡು ಹೊಡೆಯುವಂತೆ ನಿರ್ಮಾಣವಾಗಿದೆ. ಒಟ್ಟಾರೆ ಚಿತ್ರೀಕರಣಕ್ಕೆ ತಗುಲಿರುವ ವೆಚ್ಚ ಕೇವಲ 2 ಲಕ್ಷ ರೂ. ಮಾತ್ರ.

ಸಿನಿಮಾ ಜಗತ್ತಿನ ಇತಿಮಿತಿಗಳ ನಡುವೆಯೇ ಇತ್ತೀಚೆಗೆ ಹೊಸ ಹುಡುಗರು ಸಣ್ಣ ಬಂಡವಾಳದಲ್ಲಿ ಚಿತ್ರ ನಿರ್ಮಿಸಿ ದೊಡ್ಡ ಸುದ್ದಿ ಮಾಡಿದ್ದಾರೆ. ವಿಡಿಯೊ ಕ್ಯಾಮೆರಾ, ಅಷ್ಟೇ ಅಲ್ಲ ಮೊಬೈಲ್ ಕ್ಯಾಮೆರಾದಲ್ಲೂ ಚಿತ್ರೀಕರಣ ನಡೆಸಿ ಬೆರಗು ಹುಟ್ಟಿಸಿದ್ದಾರೆ ಯುವಕ ರಾಮಚಂದ್ರ ಕೊಡೇರಿ.

ವಾರದೊಳಗೆ 'ಬಂಬೂ ಬಸ್' ಎಂಬ ಕುತೂಹಲಭರಿತ ಮಕ್ಕಳ ಚಿತ್ರ ನಿರ್ಮಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯ ತುಂಟ ಹುಡುಗರು ಹಳೆಯ ಸೈಕಲ್ ಮತ್ತು ಬಂಬೂಗಳನ್ನು ಬಳಸಿ ಬಸ್ ನಿರ್ಮಿಸಿ ಹಳ್ಳಿಯ ಜನರಿಗೆ ಕೊಡುಗೆಯಾಗಿ ನೀಡುವುದು ಚಿತ್ರದ ಸಾರ. ಇಡೀ ಚಿತ್ರ ಆರು ಮಕ್ಕಳ ಕಳ್ಳ-ಪೊಲೀಸ್ ಆಟದ ತಮಾಷೆಯಲ್ಲೇ ಹಾಸ್ಯದ ಹಳಿಯ ಮೇಲೆ ಸಾಗುತ್ತದೆ. ಚೂಟಿ ಮಕ್ಕಳ ಡೈಲಾಗ್ ಮತ್ತು ಆಕ್ಟಿಂಗ್ ಖುಷಿ ಕೊಡುತ್ತದೆ.

ಚಿತ್ರದುದ್ದಕ್ಕೂ ನಿರ್ದೇಶಕನ ಕ್ರಿಯಾಶೀಲತೆ, ಉತ್ಸಾಹ ಎದ್ದು ಕಾಣುತ್ತದೆ. ಪುಟಾಣಿಗಳಾದ ಪ್ರವೀಣ್, ಚೇತನ್, ದೀಪ್ತಿ, ಶ್ರೀಕಾಂತ ಮತ್ತು ಅಭಿಷೇಕ್ ಚುರುಕಾಗಿ ಅಭಿನಯಿಸಿದ್ದಾರೆ. ಈ 'ಬಂಬೂ ಬಸ್'ಅನ್ನು ರಾಜ್ಯದ ಮೂಲೆಮೂಲೆಗಳ ಪ್ರಾಥಮಿಕ ಶಾಲೆಗಳಿಗೆ ಕೊಂಡೊಯ್ದು ಮಕ್ಕಳಿಗೆ ತೋರಿಸಲು ನಿರ್ದೇಶಕ ರಾಮಚಂದ್ರ ನಿರ್ಧರಿಸಿದ್ದಾರೆ. ಪ್ರಾಯೋಗಿಕವಾಗಿ ಈಗಾಗಲೇ ಬೆಂಗಳೂರಿನ ಶಾಲೆಗಳಲ್ಲಿ ಚಿತ್ರ ತೋರಿಸಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೊಬೈಲ್ ಕ್ಯಾಮರಾ, ಸಿನೆಮಾ, ಸ್ಯಾಂಡಲ್ವುಡ್