ಪತ್ರಕರ್ತರು ಪೆನ್ನು ಮಾತ್ರ ಹಿಡಿಯಬಲ್ಲರು. ಇವರಿಂದ ಚಿತ್ರ ವಿಮರ್ಶೆ ಮಾತ್ರ ಸಾಧ್ಯ ಅಂದುಕೊಂಡವರಿಗೆ ಅಚ್ಚರಿ ಮೂಡಿಸುವ ಕೆಲಸವನ್ನು ಪತ್ರಕರ್ತ ಎ.ಎಂ.ಪ್ರಸನ್ನ ಮಾಡಿದ್ದಾರೆ.
ಮೊದಲ ಬಾರಿಗೆ ಇವರು ಕ್ಯಾಮೆರಾ ಹಿಡಿದಿದ್ದಾರೆ. ಈ ಮೂಲಕ ಚಿತ್ರವೊಂದರ ನಿರ್ದೇಶಕರಾಗಿ ಅವರು ತಮ್ಮ ಜೀವನದಲ್ಲಿ ಹೊಸ ಮಜಲು ಹೊಂದುತ್ತಿದ್ದಾರೆ. ಇಷ್ಟು ದಿನ ಸಂಭಾಷಣೆಗೆ ಪೆನ್ನು ಹಿಡಿದಿದ್ದ ಅವರು, ಇದೀಗ ನಿರ್ದೇಶಕರಾಗಿದ್ದಾರೆ. ಚಿತ್ರದ ಹೆಸರು ರಂಗಪ್ಪ ಹೋಗ್ಬಿಟ್ನಾ? ರಮೇಶ್ ಮುಖ್ಯಪಾತ್ರದಲ್ಲಿ ಇರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ.
ಇದೊಂದು ಪಕ್ಕಾ ಕಾಮಿಡಿ ಸಿನಿಮಾ. ರಂಗಪ್ಪ ನಾಯಕ ರಮೇಶ್‌ರ ತಂದೆ. ಆ ಪಾತ್ರವನ್ನು ಮಹಾಬಲರಾವ್ ಮಾಡುತ್ತಿದ್ದಾರೆ. ಕಾನ್ಪಿಡೆಂಟ್ ಗ್ರೂಪಿನ ರವಿಕುಮಾರ್ ಹಾಗೂ ಸ್ನೇಹಿತರು ಸೇರಿ ನಿರ್ಮಾಣಕ್ಕೆ ಇಳಿದಿದ್ದಾರೆ. ತಾರಾಗಣದಲ್ಲಿ ಸಂಜನಾ, ಸಿಹಿಕಹಿ ಚಂದ್ರು, ರಾಮಕೃಷ್ಣ, ಮನದೀಪ್ ರಾಯ್, ಕರಿಬಸವಯ್ಯ ಮೊದಲಾದವರಿದ್ದಾರೆ.
ಒಟ್ಟಾರೆ ಜನಮನ ಸೂರೆಗೊಳ್ಳುವ ರೀತಿಯಲ್ಲಿ ಹಾಸ್ಯ ಚಿತ್ರಗಳು ಕನ್ನಡದ ನೆಲದಲ್ಲಿ ಜನಪ್ರಿಯವಾಗುತ್ತಿದ್ದು, ಅವುಗಳ ಪಟ್ಟಿಗೆ ಇದೂ ಸೇರ್ಪಡೆ ಆಗುತ್ತಿದೆ. ರಮೇಶ್‌ರನ್ನು ಸೋಲಿನ ಸುಳಿಯಿಂದ ಆಚೆ ತರಲು ಇದು ಯತ್ನಿಸುತ್ತದಾ ಕಾದು ನೋಡಬೇಕು.