ಡೆಡ್ಲಿ ಸೋಮ ಇನ್ನೇನು ತೆರೆಗೆ ಬರಲು ಸಜ್ಜಾಗುತ್ತಿದ್ದಾನೆ. ಈ ನಡುವೆ ಈ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಈ ಚಿತ್ರದ ಬಗ್ಗೆ ಅಪಾರ ಭರವಸೆಯಿಂದ, ಈ ಚಿತ್ರ ಖಂಡಿತವಾಗಿಯೂ ನಮ್ಮ ಶ್ರಮಕ್ಕೆ ಮೋಸ ಮಾಡುವುದಿಲ್ಲ, ಆಸೆಯಿಂದ ಬಂದ ಪ್ರೇಕ್ಷಕನಿಗೆ ನಿರಾಸೆ ಮೂಡಿಸುವುದಿಲ್ಲ ಎಂದಿದ್ದಾರೆ.
ಹೌದು. ಚಿತ್ರದ ಕೆಲ ದೃಶ್ಯಗಳು ಅತ್ಯುತ್ತಮವಾಗಿ ಮೂಡಿಬಂದಿದ್ದು, ಇದನ್ನು ತೆರೆಯ ಮೇಲೆಯೇ ನೋಡಿ ಆನಂದಿಸಬೇಕು. ಜನರ ಕಣ್ಣಲ್ಲಿ ಕಾಣುವ ಕಾತುರ, ನಿರೀಕ್ಷೆಯನ್ನು ಖುದ್ದು ತಾವು ನೋಡಬಯಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಇಡೀ ಚಿತ್ರತಂಡ ಅದಮ್ಯ ಉತ್ಸಾಹದಿಂದ ಈ ಚಿತ್ರ ಸಿದ್ಧಪಡಿಸಿದ್ದು, ಮನೆ ಮಂದಿ ಕುಳಿತು ನೋಡಬಲ್ಲ ರೌಡಿಸಂ ಚಿತ್ರ ಇದಾಗಿದೆಯಂತೆ.
ಡೆಡ್ಲಿ ಸೋಮ ಎರಡನೇ ಭಾಗ ಒಂದು ಹಿಂದಿ ಸಿನಿಮಾ ಮಟ್ಟಕ್ಕೆ ಮೂಡಿಬಂದಿದೆ ಎಂಬ ಮಾತನ್ನು ನಿರ್ಮಾಪಕ ಮಂಜುನಾಥ್ ಹೇಳುತ್ತಾರೆ ಅಂದರೆ ಅವರಿಗಿರುವ ನಿರೀಕ್ಷೆ ಎಷ್ಟು ಅನ್ನುವುದನ್ನು ಇದು ತೋರಿಸುತ್ತದೆ. ಅಪಾರ ನಿರೀಕ್ಷೆ ಇಟ್ಟು ಈ ಚಿತ್ರ ಸಿದ್ಧಪಡಿಸಿದ್ದಾರೆ ಅವರು.
ನಾಯಕ ಆದಿತ್ಯಗೆ ಡಬಲ್ ಖುಷಿಯಾಗಿದ್ದಾರೆ. ಚಿತ್ರ ನೋಡಿದಾಗ ಅವರಿಗಿದ್ದ ಡೌಟುಗಳೆಲ್ಲ ಕ್ಲೀಯರ್ ಆಯಿತಂತೆ. ಕೆಲವು ದೃಶ್ಯಗಳನ್ನು ನೀವು ತೆರೆಯ ಮೇಲೆ ನೋಡಿಯೇ ಅನುಭವಿಸಬೇಕು ಅಷ್ಟು ಉತ್ತಮವಾಗಿದೆ ಅಂತ ಅವರು ನಿರ್ದೇಶಕರ ಮಾತನ್ನೇ ಪುನರುಚ್ಛರಿಸುತ್ತಾರೆ ಆದಿತ್ಯ. ಈ ಚಿತ್ರದಲ್ಲಿ ನಿರ್ದೇಶಕರ ಕ್ರಿಯೇಟಿವಿಟಿ ಏನು ಎಂಬುದು ಗೊತ್ತಾಗುತ್ತದೆ. ನನ್ನಿಂದ ಕೆಲಸ ತೆಗೆಸಿದ್ದಾರೆ. ಜತೆಗೆ ಒಂದಷ್ಟನ್ನು ಕಲಿಸಿದ್ದಾರೆ. ಅಂಡರ್ ವರ್ಲ್ಡ್ ಕಥೆಯಾದರೂ ಅಲ್ಲಿ ಭಿನ್ನತೆಯಿದೆ. ಹೊಸತನವಿದೆ ಎನ್ನುತ್ತಾರೆ ಆದಿತ್ಯ.