ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಾರಾ ಮೇಡಮ್ಮಿಗೆ ಡಬಲ್ ಸಂತಸದ ಧಮಾಕ (Tara | Eradane Maduve | Jotheyagi Hithavagi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟಿ ತಾರಾ ಡಬಲ್ ಖುಷಿಯಲ್ಲಿದ್ದಾರೆ. ಕಾರಣ ಎರಡು ಮೂರು ವಾರದ ಹಿಂದೆ ಬಿಡುಗಡೆಯಾದ 'ಜೊತೆಯಾಗಿ ಹಿತವಾಗಿ' ಚಿತ್ರದಲ್ಲಿ ಮುಗ್ದ ತಾಯಿಯ ಪಾತ್ರ ಮಾಡಿ, ಎಲ್ಲರಿಂದ ಪ್ರಶಂಸೆ ಸಿಕ್ಕಿದ್ದು. ಇನ್ನೊಂದು, ಎರಡನೇ ಮದುವೆ ಚಿತ್ರದಲ್ಲಿ ಮಾಡರ್ನ್ ಮೋನಿಕಾಳನ್ನೇ ಹೋಲುವ ಗ್ಲ್ಯಾಮರಸ್ ಪಾತ್ರ ಮಾಡಿ, ಸೈ ಎನಿಸಿಕೊಂಡಿರುವುದು.

ಈ ಎರಡೂ ಪಾತ್ರಗಳು ಒಂದರ್ಥದಲ್ಲಿ ತದ್ವಿರುದ್ಧ ಪಾತ್ರಗಳು. ಆ ಚಿತ್ರದಲ್ಲಿ ಮೇಕಪ್ಪೇ ಇಲ್ಲದ ಮಾತೆ. ಇನ್ನು ಎರಡನೇ ಮದುವೆಯಲ್ಲಿ ಕಲರ್ ಫುಲ್ ಬಿನ್ನಾಣಗಿತ್ತಿ. ಅಲ್ಲಿ ತುಂಬಾ ಸೀರಿಯಸ್ ಪಾತ್ರ. ಇಲ್ಲಿ ಎದ್ದೂ ಬಿದ್ದು ಕಾಮಿಡಿ.

ಎರಡನೇ ಮದುವೆಯಲ್ಲಿ ಶರಣ್ ಜತೆ ಚಿತ್ರದುದ್ದಕ್ಕೂ ತಾರಾ ನಗಿಸುತ್ತಲೇ ಇರುತ್ತಾರೆ. ಹೀಗೆ ಎರಡು ಭಿನ್ನ ಪಾತ್ರವನ್ನು ಮಾಡಿ, ಸೈ ಎನಿಸಿಕೊಳ್ಳುವುದು ಒಬ್ಬ ನಿಜವಾದ ಕಲಾವಿದೆಯ ಲಕ್ಷಣ. ಅದನ್ನು ತಾರಾ ನಿಭಾಯಿಸಿ, ಗೆದ್ದಿದ್ದಾರೆ. ಅದೇ ಸಂತಸದಲ್ಲೇ ಇದ್ದಾರೆ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ.

ನಿಜಕ್ಕೂ ಈ ಮಾದರಿಯೆರಡು ವಿಭಿನ್ನ ಪಾತ್ರದಲ್ಲಿ ಅಭಿನಯಿಸುವುದು ಬಹಳ ಕಷ್ಟ. ಕನ್ನಡದಲ್ಲಿ ಹಲವರು ತಮ್ಮದೇ ಆದ ಸ್ಥಾನ ಪಡೆಯಲು ಪರಿತಪಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಕನ್ನಡ ಚಿತ್ರರಂಗದ ಹೊಸ ನೀರಲ್ಲಿ ತಾರಾ ಕೊಚ್ಚಿ ಹೋಗುತ್ತಾರೆ ಅಂದುಕೊಂಡವರ ನಡುವೆ ಈಸಿ ಜಯಿಸಿರುವ ತಾರಾಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾರಾ, ಎರಡನೇ ಮದುವೆ, ಜೊತೆಯಾಗಿ ಹಿತವಾಗಿ