ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪಟ್ರೆ ಅಜಿತನ ಗುಬ್ಬಿಯ ಡ್ಯಾನ್ಸ್ ಕಮಾಲ್ (Patre Loves Padma | Gubbi | Ajith)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪಟ್ರೆ ಲವ್ಸ್ ಪದ್ಮ ಚಿತ್ರದಲ್ಲಿ ಡೀಸೆಂಟ್ ಹುಡುಗ ಆಗಿ ಗೋಚರಿಸಿದ್ದ ನಟ ಅಜಿತ್ ಗುಬ್ಬಿ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದಾರೆ. ಅದೂ ಕಾಲೇಜ್ ಹುಡುಗ.

ಒಂದಿಷ್ಟು ಹಾಡು, ಮಸ್ತಿ, ಡಾನ್ಸುಗಳ ನಡುವೆ ಕಾಣಿಸಿಕೊಡಲಿದ್ದಾರೆ. ಪಟ್ರೆಯಲ್ಲಿ ಗಂಭೀರ ಪಾತ್ರ ನಿರ್ವಹಿಸಿದ್ದ ಅಜಿತ್ ಡಾನ್ಸ್ ಹೆಚ್ಚು ಪ್ರಾಧಾನ್ಯ ನೀಡಿರಲಿಲ್ಲ. ಆದರೆ ಕಾಲೇಜು ಹುಡುಗನಾಗಿ ನಟಿಸುತ್ತಿರುವುದರಿಂದ ಡಾನ್ಸು ಅನಿವಾರ್ಯ. ಒಟ್ಟಾರೆ ಲವ್ವು, ಡಾನ್ಸು, ರೊಮ್ಯಾನ್ಸು ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಕದಡಿದಾಗ ಹುಟ್ಟಿಕೊಳ್ಳುವುದೇ ಗುಬ್ಬಿ ಅನ್ನಲಾಗುತ್ತಿದೆ.

ಗುಬ್ಬಿ ಚಿತ್ರದ ಕುರಿತು ಅಲ್ಲಲ್ಲಿ ಕಾರ್ಯಕ್ರಮ ನೀಡುತ್ತಿರುವ ಅಜಿತ್ ಒಂದೆರಡು ಮಾತನಾಡಲು ಮುಂದಾದರು. ಮಾತಿಗೆ ಮುನ್ನ ನಿಮಗೆ ನನ್ನ ಮಾತು ಬೇಕಾ, ಡಾನ್ಸ್ ಬೇಕಾ ಎಂದು ಕೇಳಿದರು. ತಕ್ಷಣ ಅಮ್ಮಣ್ಣಿ ಕಾಲೇಜಿನ ಹೆಣ್ಣು ಮಕ್ಕಳು ಡಾನ್ಸು ಅಂದರು. ಇವನಿಂದ ಡಾನ್ಸ್ ಸಾಧ್ಯವೇ ಅಂತ ಅಲ್ಲಿದ್ದವರು ಅಂದುಕೊಂಡು ಒಳಗೊಳಗೇ ಮುಸಿ ಮುಸಿ ನಕ್ಕರು.

ಆದರೆ ಹಾಡೊಂದಕ್ಕೆ ಅಜಿತ್ ಹೆಜ್ಜೆ ಹಾಕಿದರೆ ಅಲ್ಲಿದ್ದವರೆಲ್ಲಾ ನಿಬ್ಬೆರಗು. ನಿಜಕ್ಕೂ ಇಷ್ಟೊಂದು ಪ್ರತಿಭೆ ಈ ಹುಡುಗನಲ್ಲಿ ಇದೆಯಾ ಅಂತ ಅನ್ನಿಸಿದ್ದು ಸುಳ್ಳಲ್ಲ. ಒಂದು ಕ್ಷಣ ಇವರು ಪಟ್ರೆ ಲವ್ಸ್ ಪದ್ಮದ ಅಜಿತ್ ಹೌದಾ ಅನ್ನಿಸಿದ್ದು ಸುಳ್ಳಲ್ಲ.

ಒಟ್ಟಾರೆ ಸದ್ಯ ಕಾಲೇಜು ಮಕ್ಕಳಲ್ಲೀಗ ಗುಬ್ಬಿಯ ನರ್ತನ ಆರಂಭವಾಗಿದೆ. ನಿರೀಕ್ಷೆಯೂ ಜೋರಾಗಿದೆ. ಯಾವುದಕ್ಕೂ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಟ್ರೆ ಲವ್ಸ್ ಪದ್ಮ, ಗುಬ್ಬಿ, ಅಜಿತ್