ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮರೆಯಲಾರೆ ಎನ್ನುತ್ತಾ ಮತ್ತೆ ಬಂದ ಆ ದಿನಗಳ ಚೇತನ್ (Mareyalare | Chethan | Aa Dinagalu)
ಸುದ್ದಿ/ಗಾಸಿಪ್
Bookmark and Share Feedback Print
 
Chetan
MOKSHA
ಆ ದಿನಗಳು ನಂತರ ಸೂರ್ಯಕಾಂತಿ, ಬಿರುಗಾಳಿ ಚಿತ್ರಗಳನ್ನು ಮಾಡಿದ ಚೇತನ್ ಇದೀಗ ಹೊಸದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ಮರೆಯಲಾರೆ. ಇದರಲ್ಲಿ ಆತನಿಗೆ ನಾಯಕಿಯಾಗಿ ಸಿಂಧು ಲೋಕನಾಥ್ ಎಂಬ ಕೊಡಗಿನ ಬೆಡಗಿ ಆಯ್ಕೆಯಾಗಿದ್ದಾಳೆ. ಈಕೆ ಈ ಹಿಂದೆ ಪರಿಚಯ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಹೊರಹೊಮ್ಮಲಿದ್ದಾರೆ.

ಶರಣ್ ಕದ್ರಿ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇವರಿಗೆ ಇದು ಮೊದಲ ಚಿತ್ರ. ಸುರಭಿ ಟಾಕೀಸ್ ಪ್ರೈ.ಲಿ. ಹೆಸರಿನ ಸಂಸ್ಥೆಯ ಮೂಲಕ ಇವರೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನೋಕಿಯಾ ಸಂಸ್ಥೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ ಇವರು ಕಾರ್ಪೋರೇಟ್ ಕ್ಷೇತ್ರದ ಮನದಾಳವನ್ನು ಅರಿತು ಚಿತ್ರ ಮಾಡಲು ಮುಂದಾಗಿದ್ದಾರೆ.

ಕೆಲ ಕಿರುತೆರೆ ಧಾರವಾಹಿಗಳನ್ನು ನಿರ್ದೇಶಿಸಿರುವ ಇವರು 2003ರಲ್ಲೇ ಒಂದು ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದರಂತೆ. ಅದು ದೂರದರ್ಶನದಲ್ಲಿ ಪ್ರಸಾರ ಸಹ ಆಗಿತ್ತಂತೆ. ಈ ಚಿತ್ರದ ಕಥೆಯನ್ನು ಸಹ 3 ವರ್ಷ ಹಿಂದೆಯೇ ಇವರು ಬರೆದಿದ್ದರಂತೆ. ಇದೀಗ ಅದಕ್ಕೆ ಒಂದಿಷ್ಟು ಹೊಸ ಟಚ್ ನೀಡಿ ಹೊಸತನದೊಂದಿಗೆ ತೆರೆಗೆ ತರುತ್ತಿದ್ದಾರೆ.

ಹೆಸರೇ ಹೇಳುವಂತೆ ಇದೂ ಸಹ ಒಂದು ಲವ್ ಸ್ಟೋರಿ. ವಿಶೇಷ ಅಂದರೆ ಇದೊಂದು ಯುವ ಹೃದಯಗಳ ಕಥೆಯಂತೆ. ಯುವ ಮನಸ್ಸಿನ ತಳಮಳ, ಅವರಲ್ಲಿರುವ ಯಶಸ್ಸಿನ ಧಾವಂತ, ಮಾನವೀಯ ಸಂಬಂಧಗಳು ಚಿತ್ರದ ಹೈಲೈಟ್ ಅನ್ನಲಾಗುತ್ತಿದೆ. ಅರ್ಜುನ್ ಈ ಚಿತ್ರದ ಸಂಗೀತ ನಿರ್ದೇಶಕರು. ನಾರಾಯಣ್ ಛಾಯಾಗ್ರಹಣ ಮಾಡುವರು. ಚಿತ್ರದಲ್ಲಿ ಪದ್ಮಜಾ ರಾವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮರೆಯಲಾರೆ, ಚೇತನ್, ಆ ದಿನಗಳು