ಪ್ರಸಿದ್ಧ ವ್ಯಕ್ತಿಯೊಬ್ಬ ನಾಯಕಿಯನ್ನೇ ಅಪಹರಿಸಿದ್ದಾನೆ. ಇದನ್ನು ತಿಳಿದ ನಾಯಕ ಹೌಹಾರಿದ್ದಾನೆ. ಹುಡುಕಿ ಹೊರಟೇ ಬಿಟ್ಟಿದ್ದಾನೆ.
ಹೌದು ಇದು ನೈಜ ಘಟನೆ ಅಲ್ಲ. ಗನ್ ಚಿತ್ರದ ಶೂಟಿಂಗಿನಲ್ಲಿ ಗೋಚರಿಸಿದ ದೃಶ್ಯ. ಅಪಹರಣಕ್ಕೆ ಒಳಗಾದ ನಾಯಕಿಯನ್ನು ಹುಡುಕಿ ಹೋಗುವುದು, ಎಲ್ಲೋ ಒಂದೆಡೆ ಶೋಧಿಸುವುದು, ಅಲ್ಲಿ ಚಕ್ರವ್ಯೂಹದಂತಿದ್ದ ಕಳ್ಳರ ಕೋಟೆಯನ್ನು ಭೇದಿಸಿ ನಾಯಕಿಯನ್ನು ಪಾರು ಮಾಡುವುದು. ಖಳನಾಯಕನಿಗೆ ಒದ್ದು ಬುದ್ದಿ ಹೇಳುವುದು ಇವೆಲ್ಲಾ ನಡೆದವು.
ಈ ಒಂದು ಸನ್ನಿವೇಶವನ್ನು ಮಿನರ್ವ ಮಿಲ್ ಸಮೀಪ ಚಿತ್ರಿಸಿಕೊಳ್ಳಲಾಯಿತು. ನಾಯಕನಾಗಿ ಹರೀಶ್ ರಾಜ್ ಅದ್ಬುತ ಅಭಿನಯ ನೀಡಿದ್ದಲ್ಲದೇ, ಫೈಟ್ ಸಹ ಮಾಡಿದರು. ಇವರ ಜತೆ ನಾಯಕಿಯಾಗಿ ಮಲ್ಲಿಕಾ ಕಪೂರ್ ಹಾಗೂ ಪ್ರಭಾವಿ ವ್ಯಕ್ತಿಯಾಗಿ ರಂಗಾಯಣ ರಘು ನಟಿಸಿದರು. ಹರೀಶ್‌ರಿಂದ ಒದೆ ತಿನ್ನುವ ದೃಶ್ಯದಲ್ಲಿ ರಘು ಹಣ್ಣಾದರು.
ಇಡೀ ಈ ಸನ್ನಿವೇಶವನ್ನು ಡಿಫರಂಟ್ ಡ್ಯಾನಿ ವಿಶಿಷ್ಟವಾಗಿ ಸಾಹಸ ದೃಶ್ಯ ಹೆಣೆದಿದ್ದರು. ಒಟ್ಟಾರೆ ಚಿತ್ರ ಅತ್ಯುತ್ತಮವಾಗಿ ಮೂಡಿ ಬರುತ್ತಿರುವ ಬಗ್ಗೆ ಚಿತ್ರತಂಡದಲ್ಲಿ ಅಪಾರ ವಿಶ್ವಾಸ ಇದೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆಯೂ ಇದೆ. ಆದರೆ ಅದೆಲ್ಲ ಬಿಡುಗಡೆ ನಂತ ನೀಡಬೇಕು ಸದ್ಯ ಗನ್ ಚಿತ್ರತಂಡ ಬಳಿ ಇದೆ. ಪ್ರೇಕ್ಷಕರ ಕೈಗೆ ಬಂದಾಗ ಹೇಗೆ ಚಲಾಯಿಸುತ್ತಾರೋ ಕಾದು ನೋಡಬೇಕು.