ಜನಮೆಚ್ಚುಗೆ ಗಳಿಸಿದ ದಿನೇಶ್ ಬಾಬು ನಿರ್ದೇಶನ ಹಾಸ್ಯ ಚಿತ್ರ ಎರಡನೇ ಮದುವೆ ಇದೀಗ ಹಿಂದಿಗೂ ರಿಮೇಕ್ ಆಗಲಿದೆ. ಈಗಾಗಲೇ ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ತಮಿಳಿನಿಂದಲೂ ಚಿತ್ರದ ರಿಮೇಕ್ ಹಕ್ಕಿಗೆ ಬೇಡಿಕೆ ಬಂದಿದೆ. ತೆಲುಗಿನಲ್ಲಿ ಈಗಾಗಲೇ ಚಿತ್ರ ರಿಮೇಕ್ ಆಗಿದೆ. ಇದೀಗ ಹಿಂದಿಯಿಂದಲೂ ಈ ಚಿತ್ರದೆಡೆಗೆ ಕಣ್ಣು ಬಿದ್ದಿದೆ.
ಕರ್ನಾಟಕದ 44 ಕೇಂದ್ರಗಳ ಹೊರತಾಗಿ ದೆಹಲಿ, ಚೆನ್ನೈ, ಮುಂಬೈಗಳಲ್ಲೂ ಬಿಡುಗಡೆ ಕಂಡ ಎರಡನೇ ಮದುವೆಯನ್ನು ಹಿಂದಿಗೂಬ ರಿಮೇಕಿಸಲು ಪಿವಿಆರ್ ಚಿಂತಿಸಿದೆ. ಜೊತೆಗೆ ಅದ್ದೂರಿ ತಾರಾಗಣವನ್ನು ಒಂದು ಗೂಡಿಸಲು ಸಿದ್ಧತೆ ನಡೆಸಿದೆ. ಉತ್ತಮ ಮೆಚ್ಚುಗೆಗೆ ಪಾತ್ರವಾದ ಅನಂತನಾಗ್ ಪಾತ್ರಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಸಂಪರ್ಕಿಸಲು ಹೊರಟಿದೆ. ಅಷ್ಟೇ ಅಲ್ಲದೆ, ಇನ್ನುಳಿದ ಪಾತ್ರಗಳಿಗೂ ದೊಡ್ಡ ನಟರನ್ನೇ ಒಟ್ಟುಗೂಡಿಸುವ ಪಿವಿಐಆರ್ ಪ್ರಯತ್ನ ಸಾಗಿದೆ.
ಕನ್ನಡದಲ್ಲಿ ಈ ಚಿತ್ರವನ್ನು ಕಡಿಮೆ ಬಜೆಟ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಒಳಾಂಗಣ ಶೂಟಿಂಗೇ ಹೆಚ್ಚಾಗಿದ್ದ ಈ ಚಿತ್ರಕ್ಕೆ ಒಟ್ಟು 1.36 ಕೋಟಿ ರೂಪಾಯಿ ಖರ್ಚಾಗಿತ್ತಂತೆ. ಇದೀಗ ವ್ಯಾಪಕ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರ ಅಭೂತಪೂರ್ವ ಪ್ರತಿಕ್ರಿಯೆ ಕಾಣುತ್ತಿರುವುದು ವಿಶೇಷ. ಬಾಲಿವುಡ್ಡಿನ್ಲಲೂ ಎರಡನೇ ಮದುವೆ ಸದ್ದು ಮಾಡಲಿ ಎಂದೇ ಹಾರೈಸೋಣ.