ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜೋಗಯ್ಯನ ಒಂದು ಕೋಟಿ ರೂ ತಿರಸ್ಕರಿಸಿದ ನಯನತಾರಾ! (Jogayya, Nayanatara, Prem, Rakshitha, Shivaraj kumar)
ಸುದ್ದಿ/ಗಾಸಿಪ್
Bookmark and Share Feedback Print
 
WD
ಶಿವರಾಜ್ ಕುಮಾರ್ ಅಭಿನಯದ 100ನೇ ಚಿತ್ರ, ಮೇಲಾಗಿ ಪ್ರೇಮ್ ನಿರ್ದೇಶನ ಹಾಗೂ ರಕ್ಷಿತಾ ನಿರ್ಮಾಣದ ಜೋಗಯ್ಯ ಚಿತ್ರಕ್ಕೆ ಒಮ್ಮೆ ಬಾಲಿವುಡ್ಡಿನ ಅಮಿಷಾ ಪಟೇಲ್ ನಾಯಕಿ ಎಂದರು. ಮತ್ತೊಮ್ಮೆ. ಅಮೃತಾ ರಾವ್‌ಗೆ ಮಣೆ ಹಾಕಲಾಗುತ್ತಿದೆ ಎಂದರು. ಜೊತೆಗೆ, ಅನುಷ್ಕಾ ಶರ್ಮಾ ಕಾಲ್‌ಶೀಟ್ ಬಗ್ಗೆಯೂ ಮಾತುಕತೆ ನಡೆದಿದೆ ಎಂದರು. ಶ್ರೀಲಂಕಾದ ಬೆಡಗಿ ಜ್ಯಾಕ್ವಿಲೀನ್ ಫೆರ್ನಾಂಡಿಸ್ ಹೆಸರೂ ಈ ನಡುವೆ ತೇಲಿ ಬಂತು. ಇಷ್ಟೆಲ್ಲ ಸುದ್ದಿ ಕೇಳಿ ಬಂದರೂ ಅಂತಿಮವಾಗಿ ನಾಯಕಿ ಯಾರು ಅಂತ ಗೊತ್ತಾಗಲಿಲ್ಲ.

ಅಷ್ಟರಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ನಯನತಾರಾ ಹೆಸರೂ ಕೇಳಿ ಬಂದಿದೆ. ಅದೂ ಕೂಡಾ ಅಂತಿಥ ಸುದ್ದಿಯಲ್ಲ. ನಯನತಾರಾಗೆ ನಿರ್ದೇಶಕ ಪ್ರೇಮ್ ಒಂದು ಕೋಟಿ ರೂಪಾಯಿ ಆಫರ್ ನೀಡಿದ್ದರೂ ಸಹ, ಜೋಗಯ್ಯನ ಆಫರ್‌ಗೆ ನಯನತಾರಾ ಈಗಾಗಲೇ ನೋ ಎಂದಾಗಿದೆ ಎಂಬ ಸುದ್ದಿ ತೇಲಿ ಬಂದಿದೆ.

ಮೂಲಗಳ ಪ್ರಕಾರ, ಜೋಗಯ್ಯ ಚಿತ್ರಕ್ಕೆ ನಯನತಾರಾರನ್ನು ಆಯ್ಕೆ ಮಾಡಲು ಶಿವಣ್ಣ ಸೂಚಿಸಿದ್ದಾರಂತೆ. ಶಿವಣ್ಣರಿಗೆ ನಯನತಾರಾ ಜೊತೆಗೆ ನಟಿಸಬೇಕೆಂಬ ಬಯಕೆ ಇದೆ ಎನ್ನಲಾಗಿದ್ದು, ಹೀಗಾಗಿ ನಯನತಾರಾರನ್ನು ಸಂಪರ್ಕಿಸಲಾಗಿತ್ತು. ಜೊತೆಗೆ ಬರೋಬ್ಬರಿ ಒಂದು ಕೋಟಿ ರೂಪಾಯಿಯ ಆಫರನ್ನೂ ನೀಡಲಾಗಿತ್ತು. ಆದರೆ ಆ ಆಫರನ್ನು ನಯನತಾರಾ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

WD
ಅಷ್ಟಕ್ಕೂ ನಯನತಾರಾ ಈ ಅವಕಾಶವನ್ನು ತಿರಸ್ಕರಿಸಲು ಕಾರಣ ಪ್ರಭುದೇವ್ ಅಂತೆ. ಪ್ರಭುದೇವ್ ಹಾಗೂ ನಯನತಾರಾರ ಸಂಬಂಧದ ಸುದ್ದಿ ಹೊಸತೇನಲ್ಲ. ಅವರಿಬ್ಬರೂ ಈಗಾಗಲೇ ಮದುವೆಯೂ ಆಗಿದ್ದಾರೆ ಎಂಬ ಗಾಳಿ ಸುದ್ದಿಯೂ ಇದೆ. ಸದ್ಯದಲ್ಲೇ ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯೂ ಇದೆ. ಈ ಗಾಳಿಸುದ್ದಿಗಳ ನಡುವೆ ಅವರು ಪರಸ್ಪರ ಪ್ರೀತಿಸುತ್ತಿರುವುದು ಸುಳ್ಳಲ್ಲ ಎಂಬುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ನಯನತಾರಾ ಈಗಾಗಲೇ ಸೆಟಲ್ ಆಗಲು ಪ್ಲಾನ್ ಮಾಡುತ್ತಿದ್ದು, ಪ್ರಭು ಅವರನ್ನು ಮದುವೆಯಾಗಿ ಹಾಯಾಗಿರಲು ಬಯಸಿದ್ದು, ಈಗ ಒಪ್ಪಿಕೊಂಡ ಪ್ರಾಜೆಕ್ಟ್‌ಗಳನ್ನು ಮುಗಿಸಿ ನಂತರ ಯಾವುದೇ ಪ್ರಾಜೆಕ್ಟ್ ಒಪ್ಪದಿರಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಭುದೇವ ಅವರ ಸಲಹೆ ಮೇರೆಗೆ ಒಂದು ಕೋಟಿ ರೂಪಾಯಿಗಳ ಈ ಪ್ರಾಜೆಕ್ಟನ್ನೂ ನಯನತಾರಾ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಇದಕ್ಕೂ ಮೊದಲೇ ಬಾಲಿವುಡ್ ಬೆಡಗಿ ಅಮೃತಾ ರಾವ್ 60 ಲಕ್ಷ ರೂಪಾಯಿಗಳ ಸಂಭಾವನೆ ನಿರೀಕ್ಷಿಸುತ್ತಿದ್ದು, ಪ್ರೇಮ್ ಈ ಚಿತ್ರದ ನಾಯಕಿಗೆ 45 ಲಕ್ಷ ರೂಗಳವರೆಗೂ ಮಾತ್ರ ಸಂಭಾವನೆ ನೀಡಬಹುದು ಎಂದಿದ್ದಾಗಿಯೂ ಹಿಂದೆ ಹೇಳಲಾಗಿತ್ತು. ಹಾಗಾಗಿ ಈ ಒಂದು ಕೋಟಿ ರೂಪಾಯಿಗಳ ಆಫರ್ ಅದೆಲ್ಲಿಂದ ಬಂತು ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಗಾಂಧಿನಗರಿಯ ಗಲ್ಲಿಗಳಲ್ಲಿ ಹಲವರು ಇದೆಲ್ಲಾ ಪ್ರೇಮ್ ಪಬ್ಲಿಸಿಟಿ ಗಿಮಿಕ್ ಅನ್ನುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಅಂತಿಮವಾಗಿ ಆಯ್ಕೆ ಯಾಗುವವರೆಗೂ ಇಂಥ ಅಂತೆಕಂತೆಗಳನ್ನೆಲ್ಲಾ ಕೇಳಬೇಕು ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೋಗಯ್ಯ, ನಯನತಾರಾ, ಪ್ರೇಮ್, ರಕ್ಷಿತಾ, ಶಿವರಾಜ್ ಕುಮಾರ್