ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಜಾಕಿ'ಗಾಗಿ ಆಫ್ರಿಕಾಗೆ ಹಾರಿದ ಪುನೀತ್-ಸೂರಿ ಟೀಮ್ (Jockey | Dunia Soori | Yogaraj Bhat | Puneth Rajkumar)
ಸುದ್ದಿ/ಗಾಸಿಪ್
Bookmark and Share Feedback Print
 
PR
ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡಿರುವ 'ದುನಿಯಾ' ಸೂರಿಯ 'ಜಾಕಿ' ಚಿತ್ರತಂಡ ಎರಡು ಹಾಡಿನ ಚಿತ್ರೀಕರಣಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದೆ.

ಮೊನ್ನೆ ಮೊನ್ನೆಯವರೆಗೆ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್, ಪುಟ್ಬಾಲ್ ವಿಶ್ವಕಪ್ ಸೇರಿದಂತೆ ಹಲವು ಟೂರ್ನಿಗಳನ್ನು ಅಲ್ಲಿಂದ ಕಂಡ ನಮಗೆ ಇದೀಗ ಹಾಡೊಂದರಲ್ಲಿ ದಕ್ಷಿಣ ಆಫ್ರಿಕಾ ನೋಡುವ ಸುಯೋಗವನ್ನು ಜಾಕಿ ಚಿತ್ರತಂಡ ಒದಗಿಸುತ್ತಿದೆ.

ಅತಿ ಶೀಘ್ರವೇ ತರೆಗೆ ಬರಲಿದೆ ಎನ್ನಲಾಗುತ್ತಿರುವ ಈ ಚಿತ್ರದ ಎರಡು ಹಾಡುಗಳು ದಕ್ಷಿಣ ಆಫ್ರಿಕಾದ ಮನಮೋಹಕ ತಾಣವನ್ನು ತೋರಿಸಲಿವೆ.

ದಕ್ಷಿಣ ಆಫ್ರಿಕಾ, ನಮೀಬಿಯಾ, ಇಟಲಿ ಸುತ್ತಲಿನ ಪ್ರದೇಶದಲ್ಲಿ ಪುನಿತ್ ರಾಜ್‌ಕುಮಾರ್ ಹಾಗೂ ಭಾವನಾ ರಾವ್ ಅಭಿನಯದ ಎರಡು ಹಾಡಿನ ಚಿತ್ರೀಕರಣ ನಡೆಯಲಿದೆ. ತಮಿಳಿನ ಜನಪ್ರಿಯ ನೃತ್ಯ ನಿರ್ದೇಶಕ ಗಣೇಶ್ ಹಾಗೂ ನಮ್ಮವರಾದ ಹರ್ಷ ನೃತ್ಯ ನಿರ್ದೇಶನದಲ್ಲಿ ಈ ಹಾಡುಗಳು ಮೂಡಿ ಬರಲಿವೆ. ಸೆಪ್ಟೆಂಬರ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದ್ದು, ಈ ಹಾಡಿನ ರಸದೌತಣ ಸವಿಯಬಹುದಾಗಿದೆ ಎನ್ನಲಾಗುತ್ತಿದೆ.

ನಿರ್ದೇಶಕ ಸೂರಿ ನೇತೃತ್ವದ ತಂಡ ಪ್ರವಾಸ ತೆರಳಿದ್ದು, ಉತ್ತಮ ದೃಶ್ಯಗಳೊಂದಿಗೆ ಮರಳುವ ಭರವಸೆ ನೀಡಿದೆ. ಅಂದ ಹಾಗೆ ಚಿತ್ರಕ್ಕೆ ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಸಾಹಿತ್ಯ ಇದೆ. ಸತ್ಯ ಹೆಗ್ಡೆ ಛಾಯಾಗ್ರಹಣವಿದೆ.

ಒಟ್ಟಾರೆ ಸಾಹಸದ ಜತೆ ರಮಣೀಯ ತಾಣವನ್ನೂ ವೀಕ್ಷಿಸುವ ಸದವಕಾಶವನ್ನು ಚಿತ್ರತಂಡ ಒದಗಿಸಿಕೊಡಲು ಮುಂದಾಗಿದೆ. ಥ್ಯಾಕ್ಸ್ ಅಂದು ಬಿಡೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಕಿ, ದುನಿಯಾ ಸೂರಿ, ಯೋಗರಾಜ್ ಭಟ್, ಪುನೀತ್ ರಾಜ್ಕುಮಾರ್