ಕನ್ನಡದಲ್ಲೂ ಇತ್ತೀಚೆಗೆ ಸಾಕಷ್ಟು ಹಾರರ್ ಚಿತ್ರ ಬರುತ್ತಿದೆ. ಇತ್ತೀಚೆಗೆ ಅಂತರಾತ್ಮ ಎಂಬ ಹಾರರ್ ಚಿತ್ರವೊಂದು ಮಾಧ್ಯಮಗಳಿಂದ ಮೆಚ್ಚುಗೆ ಪಡೆದುಕೊಂಡರೂ, ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಯ್ತು. ಇನ್ನೂ ಕೆಲವು ಗುಣಮಟ್ಟದ ಕೊರತೆಯಿಂದಲೋ ಎಂಬಂತೆ ಸೋತವೆಂದರೂ ಅಡ್ಡಿಯಿಲ್ಲ. ಒಟ್ಟಾರೆ ಇಂಥ ಕ್ಷೇತ್ರದಲ್ಲೂ ಚಿತ್ರಗಳು ಬರುತ್ತಿವೆಯಲ್ಲಾ ಅನ್ನೋದೇ ವಿಶೇಷ.
ಒಂದಿಷ್ಟು ಸಸ್ಪೆನ್ಸ್ ಅಂಶಗಳನ್ನು ಒಳಗೊಂಡು, ದೆವ್ವರೂಪದಲ್ಲಿರುವ ಸುಂದರಿಯೊಬ್ಬಳು ಹುಡುಗನ್ನು ಪ್ರೇಮಿಸುವ ಹಾಗೂ ಕೊನೆಗೆ ಎಲ್ಲೇ ಮಾಯವಾಗಿ ಹೋಗುವ ಸಣ್ಣ ಎಳೆಯನ್ನು ಒಳಗೊಂಡ ಚಿತ್ರವೊಂದು ಕನ್ನಡದಲ್ಲಿ ಬಂದಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಹೆಸರು 'ನೀ ಬಂದು ನಿಂತಾಗ'.
ಇದೊಂದು ಎಳೆಯನ್ನೇ ಮುಖ್ಯವಾಗಿಟ್ಟುಕೊಂಡು ಚಿತ್ರವಾಗಿಸಿದ್ದಾರೆ ನಿರ್ದೇಶಕ ಶೇಖರ್ ಸರವಣ. ಚಿತ್ರ ಎಲ್ಲಿಯೂ ಬೋರ್ ಎನಿಸುವುದಿಲ್ಲ. ಹಾರರ್ ಚಿತ್ರಕ್ಕೆ ಬಹು ಮುಖ್ಯವಾಗಿ ಬೇಕಾಗುವ ಸಸ್ಪೆನ್ಸ,ನ್ನು ಉತ್ತಮವಾಗಿ ಕಾಪಾಡಿಕೊಳ್ಳಲಾಗಿದೆ. ನಟ ಸೌರಭ್ ಪಾಪ್ ಸಿಂಗರ್ ಆಗಿ ಕಾಣಿಸಿಕೊಂಡಿದ್ದಾರೆ. ದೆವ್ವದ ಪಾತ್ರದಲ್ಲಿ ನಟಿ ಜ್ಯೋತಿಕಾಶ್ರೀ ಮಿಂಚಿದ್ದಾರೆ. ಇವರ ಜತೆ ರಮ್ಯಾ ಬಾರ್ನೆ ಸಹ ಇದ್ದಾರೆ. ಪಾತ್ರ ಪೋಷಣೆ ಉತ್ತಮವಾಗಿದೆ.
ನಟ ರಮೇಶ್ ಭಟ್, ವಿನಯಾ ಪ್ರಕಾಶ್, ಸುಮಿತ್ರಾ ಪಾತ್ರ ಪೋಷಣೆ ಚೆನ್ನಾಗಿ ಮೂಡಿ ಬಂದಿದೆಯಂತೆ. ಇಂದ್ರಜಿತ್ ಸಂಗೀತ ನೀಡಿದ್ದಾರೆ. ಈ ಚಿತ್ರ ಕಳೆದ ತೆರೆಕಂಡಿದ್ದು, ಬಹು ದಿನದ ನಂತರ ಕನ್ನಡದಲ್ಲಿ ಒಂದು ಹಾರರ್ ಚಿತ್ರ ನೋಡಬೇಕೆನಿಸದರೆ ಹೋಗಿ ಬರಬಹುದು.