ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಕಲಿತರೂ ಪಾರ್ವತಿಗ್ಯಾಕೆ ಅದೃಷ್ಟವೇ ಇಲ್ಲ? (Kannada Cinema | Milana | Pruthwi | Punith | Parvathi Menon)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪುನಿತ್ ರಾಜ್ ಕುಮಾರ್, ಪಾರ್ವತಿ ಮೆನನ್ ಜೋಡಿಯ ಮಿಲನ ಚಿತ್ರವನ್ನು ಖಂಡಿತ ನೀವು ಮರೆತಿರಲಿಕ್ಕಿಲ್ಲ. ಹಲವು ಉತ್ತಮ ಹಾಡುಗಳನ್ನು ನೀಡಿದ ಈ ಚಿತ್ರದ ಸದಾ ನೆನಪಿನಲ್ಲಿರಲು ಕಾರಣ ಪಾರ್ವತಿ ಮೆನನ್ ಕಾಣಿಕೆಯೂ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಪುನೀತ್‌ಗೆ ಹೇಳಿ ಮಾಡಿಸಿದ ಜೋಡಿಯಾಗಿ ಪಾರ್ವತಿ ಕನ್ನಡಿಗರ ಮನ ಗೆದ್ದಿದ್ದರು. ಕನ್ನಡಿಗರು ಮೆಚ್ಚಿದ್ದ ಈ ಪಾರ್ವತಿಗ್ಯಾಕೋ ಈಗ ಅಷ್ಟಾಗಿ ಅದೃಷ್ಟ ಕೈಹಿಡಿದಿಲ್ಲ.

ಹೌದು. ಮಿಲನ ಸಂದರ್ಭದಲ್ಲಿ ಪಾರ್ವತಿ ಮೆನನ್‌ಗೆ ಕನ್ನಡ ಬರುತ್ತಿರಲಿಲ್ಲ. ತಮ್ಮ ಮುಂದಿನ ಚಿತ್ರ 'ಮಳೆ ಬರಲಿ ಮಂಜೂ ಇರಲಿ' ಚಿತ್ರದ ಹೊತ್ತಿಗೆ ಕನ್ನಡವನ್ನು ನೀಟಾಗಿ ಕಲಿತಿದ್ದರು. ಇದಕ್ಕೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊನೆಗೂ ತಮ್ಮ ಮಳೆ ಬರಲಿ ಮಂಜೂ ಇರಲಿ ಚಿತ್ರಕ್ಕೆ ತಾವೇ ಅಚ್ಚ ಕನ್ನಡದಲ್ಲಿ ಡಬ್ಬಿಂಗ್ ಕೂಡಾ ಮಾಡಿದ್ದರು. ಆದರೆ ಅವರ ಶ್ರಮ ಮಾತ್ರ ಅವರಿಗೆ ಫಲ ನೀಡಲಿಲ್ಲ. ಮಳೆ ಸೋತಿತು.

ಹುಟ್ಟು ಕೇರಳದವರಾದ ಇವರು ಇಷ್ಟು ಸಾಹಸ ಮೆರೆದದ್ದು, ಕನ್ನಡ ಮೂಲದ ನಟಿಯರಿಗೂ ಮಾದರಿ. ಆದರೆ ಇಷ್ಟಾದರೂ ಯಾಕೋ ಏನೋ ಅವರಿಗೆ ಅಂಥ ಹೇಳಿಕೊಳ್ಳುವ ಅವಕಾಶವೇನೂ ಸಿಗಲಿಲ್ಲ. ಜೊತೆಗೆ ಸಿಕ್ಕ ಸಿಕ್ಕ ಅವಕಾಶವನ್ನೆಲ್ಲಾ ಬಾಚುವ ಸ್ವಭಾವ ಅವರದ್ದಲ್ಲ. ಚಿತ್ರದ ಕಥೆಯನ್ನು ಅಳೆದು ತೂಗಿ ಒಪ್ಪಿದರೆ ಮಾತ್ರ ನಟಿಸಲು ಮನಸ್ಸು ಮಾಡುವ ಇವರು ಮೊನ್ನೆ ಪೃಥ್ವಿಯ ಮೂಲಕ ಮರಳಿದರು. ಆದರೆ ಪುನೀತ್ ಜೊತೆಗಿನ ಈ ಚಿತ್ರ ಹೇಳಿಕೊಳ್ಳುವ ಸಾಧನೆಯನ್ನೇನೂ ಮಾಡಲಿಲ್ಲ. ಚಿತ್ರಕ್ಕೆ ಶಹಬ್ಬಾಸ್ ಗಿರಿ ಕೇಳಿ ಬಂತಾದರೂ, ಪಾರ್ವತಿಗೆ ಹೇಳಿಕೊಳ್ಳುವಂಥ ಹೆಸರು ತರಲಿಲ್ಲ.

ಕೇರಳದ ಈ ಚೆಂದುಳ್ಳಿ ಚೆಲುವೆಗೆ ಇದು ನಿಜಕ್ಕೂ ಬೇಸರ ತರಿಸಿದೆ. ಮೊದಲ ಅಭಿನಯದ ಚಿತ್ರವೇ ವರ್ಷಗಳ ಕಾಲ ಓಡಿದರೂ ಬೆಲೆ ಸಿಗುತ್ತಿಲ್ಲ. ಚಿತ್ರರಂಗದಲ್ಲಿ ಯಶಸ್ಸು ಕಾಣಲು ಇನ್ನೇನು ಸಾಧನೆ ಮಾಡಬೇಕು ಎಂದು ಕೇಳುತ್ತಿದ್ದಾರೆ.

ಪಾರ್ವತಿ ಮೆನನ್ ಫೋಟೋಕ್ಕಾಗಿ ಮುಂದಿನ ಪುಟಕ್ಕೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾರ್ವತಿ ಮೆನನ್, ಮಿಲನ, ಪೃಥ್ವಿ, ಪುನೀತ್