ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಣ್ಣಾವ್ರ ನೆನಪಲ್ಲಿ ಚೆಲುವೆಯೇ ನಿನ್ನ ನೋಡಲು (Cheluveye Ninna Nodalu | Shivaraj Kumar | Rajkumar)
ಸುದ್ದಿ/ಗಾಸಿಪ್
Bookmark and Share Feedback Print
 
PR
ಅಣ್ಣಾವ್ರ ಅವತಾರದಲ್ಲಿ ಶಿವಣ್ಣ ಅಭಿನಯಿಸಿದ ಚೆಲುವೆಯೇ ನಿನ್ನ ನೋಡಲು ಚಿತ್ರ ಅಂತೂ ಇಂತೂ ತೆರೆಗೆ ಬರಲು ಸಜ್ಜಾಗಿದೆ. ಇದೇ ಆಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಶಿವಣ್ಣ ಇತ್ತೀಚೆಗೆ ತಮ್ಮ ನಿವಾಸದಲ್ಲಿ ಚಿತ್ರದ ಬಗ್ಗೆ ಭರವಸೆಯಿಂದ ಮಾತನಾಡಿದ್ದು, ತಮ್ಮ ಅಪ್ಪನ ನೆನೆದು ಭಾವುಕರಾದರು.

ವರನಟ ಡಾ. ರಾಜ್‌ಕುಮಾರ್‌ರ ಚಿತ್ರವೊಂದರ ಹಾಡಿನ ಒಂದು ಸಾಲಿನಿಂದ ಎತ್ತಿಕೊಂಡ ಚಿತ್ರದ ಟೈಟಲ್ ಅಷ್ಟಕ್ಕೇ ಸೀಮಿತವಾಗಿಲ್ಲ. ಇಡೀ ಚಿತ್ರ ಡಾ. ರಾಜ್ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ಚೆಲುವೆ ಅಂತ ಅಂದರೆ ಕೇವಲ ಹೆಣ್ಣು ಮಾತ್ರವಲ್ಲ, ಸೌಂದರ್ಯದ ನಾನಾ ಮಜಲುಗಳನ್ನು ಬಿಂಬಿಸುವ ಪದ. ಅಪ್ಪನ ಸಾತ್ವಿಕ ಗುಣದ ದರ್ಶನ ನನಗೆ ಈ ಚಿತ್ರದಲ್ಲಿ ಆಯಿತು ಎಂದು ಶಿವಣ್ಣ ಭಾವುಕರಾದರು.

ನನಗೆ ಈ ಚಿತ್ರದ ತುಂಬಾ ಅಪ್ಪ ಕಾಣಿಸಿದರು. ಅವರ ಇಮೇದಿಗೆ ಯಾವುದೇ ಹೊಡೆತ ತರದ ರೀತಿ, ಜನರಲ್ಲಿ ಅವರ ಬಗ್ಗೆ ಇನ್ನಷ್ಟು ಗೌರವ ಮೂಡುವ ರೂಪದಲ್ಲಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಡಾ.ರಾಜ್‌ಕುಮಾರ್ ಅವರ ಗೆಟಪ್ಪಿನಲ್ಲೇ ನಾನು ಸಹ ಕಾಣಿಸಿಕೊಂಡಿದ್ದೇನೆ ಎಂದರು ಶಿವರಾಜ್ ಕುಮಾರ್.

ತಾಜ್ ಮಹಲ್ ಎದುರು ಒಂದು ಹಾಡಿನ ಶೂಟಿಂಗ್ ಮಾಡುವಾಗಿನ ಅನುಭವ ನಿಜಕ್ಕೂ ಅವಿಸ್ಮರಣೀಯ. ಜಗತ್ತಿನ ಉಳಿದ ಆರು ಅದ್ಬುತದ ಎದುರು ನಿಂತಾಗಲೂ ಈ ಅನುಭವ ಆಗಿರಲಿಲ್ಲ. ನಿಜಕ್ಕೂ ಇದು ಅದ್ಬುತ ಎಂದರು.

ಚಿತ್ರ ತಂಡವನ್ನು ಕುಟುಂಬದ ರೀತಿ ಪರಿಗಣಿಸಿದರೆ ಉತ್ತಮ ಚಿತ್ರ ಮೂಡಿ ಬರಲು ಸಾಧ್ಯ. ನಟ, ನಿರ್ದೇಶಕ ಇಬ್ಬರೂ ಅಣ್ಣತಮ್ಮಂದಿರಂತೆ ಇದ್ದರೆ, ಉತ್ತಮ ಚಿತ್ರ ಬರುತ್ತದೆ ಅಂತ ಅಪ್ಪಾಜಿ ಯಾವತ್ತೂ ಹೇಳುತ್ತಿದ್ದರು. ಅದು ಈ ಚಿತ್ರದಲ್ಲಿ ಸಾಧ್ಯವಾಗಿದೆ ಎಂದರು ಶಿವಣ್ಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೆಲುವೆಯೇ ನಿನ್ನ ನೋಡಲು, ಶಿವರಾಜ್ ಕುಮಾರ್, ಡಾರಾಜ್ ಕುಮಾರ್