ಮಸ್ತ್ ಮಜಾ ಮಾಡಿ ಚಿತ್ರದ ಮೂಲಕ ಕನ್ನಡ ಜನತೆಗೆ ಒಂದು ಉತ್ತಮ ಚಿತ್ರ ನೀಡಿದ್ದ ಸೌಂದರ್ಯ ಜಗದೀಶ್ ಅದೇ ಸ್ಪೂರ್ತಿಯಲ್ಲಿ ನಿರ್ಮಿಸುತ್ತಿರುವ ಚಿತ್ರ 'ಅಪ್ಪು ಪಪ್ಪು'. ಇದು ಮೇಲ್ನೋಟಕ್ಕೆ ಪ್ರಾಣಿ ಹಾಗೂ ಮನುಷ್ಯರ ನಡುವಿನ ಸಂಬಂಧವನ್ನು ತೋರ್ಪಡಿಸುವ ಚಿತ್ರದಂತೆ ಕಂಡರೂ, ಇದರಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆಯಂತೆ. ಪ್ರೀತಿ, ಪ್ರಾಣಿ ಸಂರಕ್ಷಣೆ, ಪ್ರಾಣಿ ಪ್ರೀತಿಯನ್ನೂ ಮೀರಿ ಇಲ್ಲಿ ಇನ್ನೂ ಏನೋ ಇದೆ ಎನ್ನುತ್ತಾರೆ ಜಗದೀಶ್.
ಹೀಗಾಗಿ ಇದು ಮಕ್ಕಳಿಗೆ ಸೀಮಿತವಾದ ಚಿತ್ರವಲ್ಲ. ಗಂಡ ಹೆಂಡತಿಯ ನಡುವೆ ಮುನಿಸು, ಇವರ ನಡುವೆ ಬಾಳುವ ಮಗು, ಇದರ ಬದುಕು ಹೇಗಿರುತ್ತದೆ ಎನ್ನುವುದನ್ನು ಚಿತ್ರಿಸಿದ್ದೇವೆ. ಇದು ಪ್ರಸ್ತುತ ಸಮಾಜದಲ್ಲಿ ಅತ್ಯಂತ ಅಗತ್ಯ ವಿಷಯವಾಗಿದೆ. ರಾಜ್ಯವೂ ಸೇರಿದಂತೆ ರಾಷ್ಟ್ತ್ರ, ಅಂತಾರಾಷ್ಟ್ತ್ರೀಯ ಮಟ್ಟದ ಸಮಸ್ಯೆಯಾಗಿದೆ ಇದು ಎನ್ನುತ್ತಾರೆ ಅವರು.
ಆಗಸ್ಟ್ 28ರಂದು ಚಿತ್ರವನ್ನು ತೆರೆಗೆ ತರಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಚಿತ್ರದ ಪ್ರಚಾರಕ್ಕೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. 25 ಬಸ್ಸುಗಳಲ್ಲಿ ಪೋಸ್ಟರ್ ಹಾಕುವ ಜತೆಗೆ ನೋಟ್ ಪುಸ್ತಕದ ಮೇಲೆ ಅಂಟಿಸಿಕೊಳ್ಳಬಲ್ಲ 10 ಲಕ್ಷ ಸ್ಟಿಕ್ಕರ್‌ಗಳನ್ನು ಮುದ್ರಿಸಿ ವಿತರಿಸಿದ್ದೇನೆ. ಒಟ್ಟಾರೆ ಚಿತ್ರದ ಕುರಿತು ಒಂದಿಷ್ಟು ಆಸಕ್ತಿ ಮೂಡಿ ಜನ ಬಂದರೆ ಮನರಂಜನೆ ಜತೆ ಸಂದೇಶವೂ ಸಿಗುತ್ತದೆ. ಪಾಲಕರು ಮಕ್ಕಳೊಂದಿಗೆ ಬಂದು ವೀಕ್ಷಿಸಿದರೆ ಅರ್ಥಪೂರ್ಣ ಎನ್ನುತ್ತಾರೆ. ಎಲ್ಲರೂ ಅಪ್ಪು ಪಪ್ಪು ನೋಡಿ ಮನರಂಜನೆ ಪಡೆಯಿರಿ.