ಐವರು ಯುವ ನಿರುದ್ಯೋಗಿಗಳು ತಮ್ಮದೇ ಆದ ಜೀವನ ರೂಪಿಸಿಕೊಳ್ಳಲು ರಾಜಧಾನಿಗೆ ಬಂದು ಪಡಬಾರದ ಕಷ್ಟಪಟ್ಟು ಅಂತಿಮವಾಗಿ ಕೆಟ್ಟ ಹಾದಿ ತುಳಿದು ತಮ್ಮ ಜೀವನವನ್ನು ಯಾವ ರೀತಿ ಹಾಳು ಮಾಡಿಕೊಳ್ಳುತ್ತಾರೆ ಎನ್ನುವುದನ್ನು ನೋಡುವುದಾದರೆ ರಾಜಧಾನಿ ಚಿತ್ರ ನೋಡಬೇಕಂತೆ.
ಸದ್ಯ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಮುಂದೆ ಶೀಘ್ರವೇ ಸೆನ್ಸಾರ್ ಮುಂದೆ ಬರಲಿದ್ದು, ತಿಂಗಳೊಳಗೆ ಬಿಡುಗಡೆ ಭಾಗ್ಯವನ್ನೂ ಪಡೆಯಲಿದೆ ಎನ್ನಲಾಗುತ್ತಿದೆ. ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೇ ಸಮಾಜ ಘಾತುಕರು ಎಂಬ ಹಣೆಪಟ್ಟಿಯನ್ನೂ ಹೊತ್ತು ಯುವಕರು ಸರ್ವನಾಶವಾಗುತ್ತಾರೆ. ಸಮಾಜದಲ್ಲಿ ಯುವಕರು ಹೇಗಿರಬಾರದು ಎನ್ನುವುದನ್ನು ಅರಿಯಲು ಈ ಚಿತ್ರ ನೋಡಬೇಕು. ಖ್ಯಾತ ನಿರ್ದೇಶಕ ಕೆ.ವಿ. ರಾಜು ತೀರಾ ಮುತುವರ್ಜಿಯಿಂದ ಸಿದ್ಧಪಡಿಸಿದ ಚಿತ್ರ ಇದು.
ಚಿತ್ರಕ್ಕೆ ಎಚ್.ಸಿ. ವೇಣು ಛಾಯಾಗ್ರಹಣ, ಅರ್ಜುನ್ ಸಂಗೀತ, ರವಿವರ್ಮ ಮತ್ತು ಡ್ಯಾನಿ ಸಾಹಸ ಇದೆ. ಚಿತ್ರದ ತಾರಾ ಬಳಗದಲ್ಲಿ ಯಶ್, ಚೇತನ್ ಚಂದ್ರ, ಸತ್ಯ, ಸಂದೀಪ್ ಹಾಗೂ ರವಿತೇಜ ಇದ್ದಾರೆ. ಇವರ ಜತೆ ಶೀನಾ ಶಹಬಾದಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಕಾಶ್ ರೈ ಪೊಲೀಸ್ ಇನ್ಸ್‌ಪೆಕ್ಟರ್ ಕಾಣಿಸಿಕೊಳ್ಳುತ್ತಿದ್ದಾರೆ. ಉಮಾಶ್ರೀ, ರಾಜು ತಾಳಿಕೋಟೆ, ರಮೇಶ್ ಭಟ್ ಮುಂತಾದವರು ಪೋಷಕ ಪಾತ್ರದಲ್ಲಿದ್ದಾರೆ.