ಶಿವರಾಜ್ ಹೊಸಕೆರೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ತಾರೆ' ಚಿತ್ರ ಬಹು ವೇಗವಾಗಿ ಚಿತ್ರೀಕರಣಗೊಳ್ಳುತ್ತಿದೆ. ದಿಗಂತ್ ನಾಯಕನಾಗಿರುವ ಈ ಚಿತ್ರಕ್ಕೆ ಸದ್ಯ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಅಳವಡಿಸುವ ಕಾರ್ಯ ಜಾರಿಯಲ್ಲಿದೆ. ಚಿತ್ರದ ನಿರ್ಮಾಪಕ ಕೆ.ಕೆ. ರವಿ ಸ್ಥಳದಲ್ಲೇ ಇದ್ದು ಎಲ್ಲಾ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದಾರೆ.
ದಾವಣಗೆರೆ, ಮಧುಗಿರಿ, ಚಿಕ್ಕಮಗಳೂರು, ಬೆಂಗಳೂರು, ಕೆಮ್ಮಣ್ಣುಗುಂಡಿ ಮುಂತಾದ ರಮಣೀಯ ತಾಣಗಳಲ್ಲಿ ಚಿತ್ರದ ಶೂಟಿಂಗ್ ನಿರಂತರ 40 ದಿನ ಕಾಲ ನಡೆದಿದೆ.
ದಿಗಂತ್ಗೆ ನಾಯಕಿಯಾಗಿ ಊರ್ವಶಿ ಸಾಥ್ ನೀಡುತ್ತಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಸೋಲಂಕಿ, ಸಂಜನಾ, ಪ್ರೊ. ದೊಡ್ಡರಂಗೇಗೌಡ, ರಾಹುಲ್, ಕರಿಬಸವಯ್ಯ, ಟೆನ್ನಿಸ್ ಕೃಷ್ಣ, ರೇಖಾದಾಸ್ ಮತ್ತಿತರರು ಇದ್ದಾರೆ. ಜಯಂತ್ ಕಾಯ್ಕಿಣಿ, ಹೃದಯಶಿವ, ನಾಗೇಂದ್ರ ಪ್ರಸಾದ್, ಪ್ರೊ. ದೊಡ್ಡರಂಗೇಗೌಡ ಹಾಗೂ ನವೀನ್ ಈ ಚಿತ್ರಕ್ಕೆ ಒಂದೊಂದು ಗೀತೆ ಬರೆದಿದ್ದಾರೆ. ಕೆ.ಕೆ. ರವೀಶ್ ಕಥೆ, ಸಿ.ಆರ್. ಬಾಬಿ ಸಂಗೀತ, ರಮೇಶಪ್ಪಿ ಛಾಯಾಗ್ರಹಣ, ದಾಮೋದರ್ ಸಂಕಲನ ಚಿತ್ರಕ್ಕೆ ಲಭಿಸಿದೆ.