ರವಿ ಶ್ರೀವತ್ಸ ನಿರ್ದೇಶನದ ಡೆಡ್ಲಿ -2 ಚಿತ್ರದ ಬಿಡುಗಡೆ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಚಿತ್ರದ ನಾಯಕಿ ಮೇಘನಾ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿ ತಮಗೆ ಸಿಕ್ಕ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಇವರು, ಕನ್ನಡದಲ್ಲಿ ಬೆಳೆಯುವ ಸಲುವಾಗಿ ದೂರದ ಅಮೆರಿಕದಿಂದ ಬಂದಿದ್ದೇನೆ. ಇಲ್ಲಿ ನನಗೆ ಒಳ್ಳೊಳ್ಳೆ ಪಾತ್ರಗಳು ಸಿಗಬೇಕಿದೆ. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿ ಕನ್ನಡಾಭಿಮಾನಿಗಳ ಮನಗೆಲ್ಲಬೇಕೆಂಬ ಮಹದಾಸೆ ತಮಗಿದೆ ಎನ್ನುತ್ತಾರೆ.
ಚಿತ್ರರಂಗದಲ್ಲಿ ಒಳ್ಳೆ ನಟಿ ಎನಿಸಿಕೊಂಡರೆ ಅಷ್ಟು ಸಾಕು. ಡೆಡ್ಲಿ ಚಿತ್ರ ಹೇಳಿಕೇಳಿ ಆಕ್ಷನ್ ಕಂ ನಾಯಕ ಪ್ರಧಾನ ಚಿತ್ರ. ಇಲ್ಲಿ ನಿಮಗೆ ಅವಕಾಶ ಇತ್ತೇ? ಅಂತ ಕೇಳಿದರೆ, 'ಏಕಿಲ್ಲ, ನಾನು ಇಡೀ ಚಿತ್ರದಲ್ಲಿ ಮಾತಿಗಿಂತ ಹೆಚ್ಚಾಗಿ ಕಣ್ಣಲ್ಲೇ ಮಾತನಾಡುತ್ತೇನೆ. ನಿಜಕ್ಕೂ ಇದೊಂದು ಭಿನ್ನ ಹಾಗೂ ವಿಶೇಷ ಅನುಭವ' ಎನ್ನುತ್ತಾರೆ.
ಈಗ ಯಾವುದೇ ಚಿತ್ರ ಕೈಯ್ಯಲ್ಲಿ ಇಲ್ಲ. ಡೆಡ್ಲಿ ಬಿಡುಗಡೆ ನಂತರ ಕನ್ನಡದಲ್ಲಿ ಒಂದಿಷ್ಟು ಉತ್ತಮ ಪಾತ್ರಗಳು ತಮ್ಮನ್ನು ಅರಸಿ ಬರಬಹುದು ಎನ್ನುವ ನಿರೀಕ್ಷೆ ಇವರದ್ದು. ಇಲ್ಲಿಯೇ ಏನಾದರೂ ಸಾಧಿಸಬೇಕು ಅನ್ನುವ ಛಲ ನನಗೆ ಇದೆ. ಅದರಿಂದಲೇ ಅಮೆರಿಕದಿಂದ ಬರುವಾಗಲೇ ಕನ್ನಡ ಕಲಿತು ಬಂದಿದ್ದೆನೆ. ಒಂದು ಭಾಷೆ ಗೊತ್ತಿಲ್ಲದೇ ಆ ಭಾಷೆಯ ಚಿತ್ರದಲ್ಲಿ ಅಭಿನಯಿಸುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ.
ಅಂದ ಹಾಗೆ ಡೆಡ್ಲಿ ಸೋಮ 2 ಚಿತ್ರ ಸದ್ಯದಲ್ಲೇ ಬಿಡುಗಡೆ ಕಾಣಲಿದೆ. ಚಿತ್ರದ ಪತ್ರಿಕಾಗೋಷ್ಠಿಯ ಇನ್ನಷ್ಟು ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...