ಅರಮನೆ, ಸರ್ಕಸ್, ಕೃಷ್ಣನ್ ಲವ್ ಸ್ಟೌರಿ, ಪುಂಡ ಮೊದಲಾದ ಚಿತ್ರಗಳಿಗೆ ಕ್ಯಾಮೆರಾಮನ್ ಆಗಿ ದುಡಿದಿರುವ ಚಂದ್ರು, ಜನರಿಗೆ ಕನಸಿನ ಅರಮನೆ ಕಟ್ಟಿಕೊಡುವ ಜತೆಗೆ ತಮ್ಮ ಕನಸಿನ ಸೌಧವನ್ನೂ ನಿರ್ಮಿಸಿಕೊಂಡಿದ್ದಾರೆ.
ಹೌದು, ಛಾಯಾಗ್ರಾಹಕ ಚಂದ್ರು ಮನೆ ಕಟ್ಟಿದ್ದಾರೆ. ಮಾತಿನಲ್ಲಿ ಮಾತ್ರ ತಾವಾಯಿತು, ತಮ್ಮ ಕೆಲಸವಾಯಿತು ಎಂದು ತಮ್ಮ ಪಾಡಿಗಿರುವ ಅದೇ ಚಂದ್ರು ಹೆಗಡೆ ಮಾತಿನ ಮನೆ ಕಟ್ಟದೇ, ಮೌನವಾಗಿಯೇ ಸ್ವಂತಕ್ಕೊಂದು ಸೂರು ಕಟ್ಟಿಕೊಂಡಿದ್ದಾರೆ. ಶಿವರಾಮ ಕಾರಂತ ನಗರದಲ್ಲಿ ಪುಟ್ಟದೊಂದು ಮನೆ ಮಾಡಿದ್ದಾರೆ.
ಹೊಸ ಹೊಸ ಆಯಾಮಗಳಲ್ಲಿ ಕ್ಯಾಮೆರಾ ಇಟ್ಟು, ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡಬೇಕು ಎನ್ನುವುದು ಚಂದ್ರು ಆಶಯ. ಸರ್ಕಸ್ ಚಿತ್ರದಲ್ಲಿ ಅವರಿಗೆ ಬರಬೇಕಿದ್ದ ಆರು ಲಕ್ಷ ರೂಪಾಯಿಗಳು ಕೈಗೆ ಬಂದಿಲ್ಲ ಎಂಬ ನೋವು ಅವರನ್ನು ಇನ್ನೊಂದು ಕಡೆ ಕಾಡುತ್ತಿದೆ. ಹೀಗಿದ್ದೂ ಕೆಲಸದಲ್ಲಿ ತೃಪ್ತಿ ಇದೆ. ಸ್ವಂತ ದುಡ್ಡಿನಲ್ಲಿ ಮನೆ ಕಟ್ಟಿ ನೋಡುವಷ್ಟು ತಾಕತ್ತನ್ನು ಭಗವಂತ ಕೊಟ್ಟಿದ್ದಾನೆ. ಇದಕ್ಕೆ ನಾನು ದೇವರಿಗೆ ಚಿರಋಣಿ ಎನ್ನುತ್ತಾರೆ.
ಸದ್ಯ ಗಣೇಶ್ ಅಭಿನಯದ ಮದುವೆ ಮನೆ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಅವರು, ತೆಲುಗು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ಕೃಷ್ಣನ್ ಲವ್ ಸ್ಟೋರಿ ಭಾಗ ಎರಡಕ್ಕೂ ಅವರೇ ಬುಕ್ ಆಗಿದ್ದಾರೆ. ಹೀಗಾಗಿ