ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಂಡುಗಲಿ ಸೋತರೂ ಗುರು ಪಟ್ಟಾಭಿಯ ಕೈಬಿಡಲಿಲ್ಲ (Gandugali Kumararama | Guru Raghavendra Vaibhava | Patabhiraman)
ಸುದ್ದಿ/ಗಾಸಿಪ್
Bookmark and Share Feedback Print
 
ಪಟ್ಟಾಭಿರಾಮ್ ಸಂತಸದ ನಗು ನಕ್ಕಿದ್ದಾರೆ. ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಬೇಕು, ಇಡೀ ಉದ್ಯಮ ತಿರುಗಿ ನೋಡುವಂತೆ ಸಿನಿಮಾ ಮಾಡಬೇಕು, ಕನ್ನಡ ಪ್ರೇಕ್ಷಕರ ಚಿಂತನಾ ಲಹರಿಯನ್ನು ಚೇಂಜ್ ಮಾಡಬೇಕು, ಐತಿಹಾಸಿಕ ಚಿತ್ರದ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಬೇಕು ಎಂಬಿತ್ಯಾದಿ ಕನಸು ಹೊತ್ತಿದ್ದ ಇವರು ಎಂದುಕೊಂಡಿದ್ದರೋ ಅದೇ ವ್ಯಕ್ತಿ ಪಟ್ಟಾಭಿರಾಮ್ ಗಂಡುಗಲಿ ಕುಮಾರರಾಮ ನೀಡಿದ ಹೊಡೆತದಿಂದ ಚೇತರಿಸಿಕೊಳ್ಳಲು ಚಿತ್ರರಂಗವನ್ನೇ ಬಿಟ್ಟಿದ್ದರು.

ಆದರೆ ಆಸೆ ಮೂಲೆಯಲ್ಲಿ ಹಾಗೆಯೇ ಉಳಿದುಕೊಂಡಿತ್ತು. ಈಡೇರಿಸಿಕೊಳ್ಳಲು ಹುಡುಕಿದ್ದು ಕಿರುತೆಯನ್ನು. ಹೌದು, ಕಿರುತೆರೆ ಮೂಲಕ ತಮ್ಮ ಆಶಯ ಈಡೇರಿಸಿಕೊಳ್ಳಲು `ಗುರು ರಾಘವೇಂದ್ರ ವೈಭವ' ಧಾರಾವಾಹಿ ಮಾಡಿದ್ದಾರೆ. ಧಾರವಾಹಿ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ರಾಯರ ಆಶೀರ್ವಾದದಿಂದ ಯಶಸ್ಸಿನ ನಗೆ ಬೀರಿದ್ದಾರೆ.

ಏನನ್ನಾದರೂ ಹೊಸತನ್ನು ಜನರಿಗೆ ಕೊಡಬೇಕು ಎನ್ನುವುದು ಅವರ ಕನಸಾಗಿತ್ತು. ಅದೇ ಬೆನ್ನಲ್ಲಿ ಅವರು ಕಾಲಿಟ್ಟಿದ್ದು ಚಿತ್ರರಂಗಕ್ಕೆ. ಆದರೆ ಗಾಂಧಿನಗರದ ಮಾತ್ರ ಅತ್ತ ತಿರುಗಿಯೂ ನೋಡದಂತೆ ಅವರಿಗೆ ಗಂಡುಗಲಿಯ ಮೂಲಕ ಹೊಡೆತ ನೀಡಿತ್ತು. ಈಗ ಮತ್ತೆ ಸಾಹಸಕ್ಕೆ ಮುಂದಾಗಿ ಗೆದ್ದಿದ್ದಾರೆ. ಎಲ್ಲವೂ ಜನರ ಕೈಯಲ್ಲಿ ಇದೆ. ಅವರು ಅಲ್ಲಿ ಮಲಗಿಸಿದ್ದರು, ಇಲ್ಲಿ ಗೆಲ್ಲಿಸಿದ್ದಾರೆ. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಅನ್ನುತ್ತಾರೆ ಪಟ್ಟಾಭಿರಾಮ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಂಡುಗಲಿ ಕುಮಾರರಾಮ, ಗುರು ರಾಘವೇಂದ್ರ ವೈಭವ, ಪಟ್ಟಾಭಿರಾಮನ್