ಹರೀಶ್ ರಾಜ್ ಅವರ ಮಹತ್ವಾಕಾಂಕ್ಷೆಯ ಚಿತ್ರ ಗನ್ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಮುರುಳಿ ಅವರೊಂದಿಗೆ ಸೇರಿ ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ಹರೀಶ್ ಪಾಲಿಗೆ ಇದು ಅತ್ಯಂತ ಮಹತ್ವದ ಚಿತ್ರ.
35 ದಿನ ನಿರಂತರವಾಗಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾದ ಎಲ್ಲಾ ಹಂತ ಮುಗಿದಿದ್ದು ಹಾಡಿನ ಚಿತ್ರೀಕರಣ ಆಗಬೇಕಿರುವುದು ಬಾಕಿ ಇದೆ. ಹಾಡಿನ ಚಿತ್ರೀಕರಣ ಬ್ಯಾಂಕಾಕಿನಲ್ಲಿ ನಡೆಯಬೇಕಿದ್ದು, ಚಿತ್ರ ತಂಡ ಸದ್ಯವೇ ವಿದೇಶ ಪ್ರಯಾಣ ಬೆಳೆಸಲಿದೆ.
MOKSHA
ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದು, ಎಚ್.ಎಂ. ರಾಮಚಂದ್ರ ಛಾಯಾಗ್ರಹಣ ನೀಡಿದ್ದಾರೆ. ಹರೀಶ್ ರಾಜ್‌ಗೆ ನಾಯಕಿಯಾಗಿ ಮಲ್ಲಿಕಾ ಕಪೂರ್ ಇದ್ದಾರೆ. ಇವರ ಜತೆ ರಂಗಾಯಣ ರಘು ನಗಿಸಲು ಬರುತ್ತಿದ್ದಾರೆ. ಇವರಿಗೆ ಸುಂದರಶ್ರೀ, ಸಂಗೀತಾ, ಮೋಹನ್ ಜುನೇಜಾ, ಪಿ.ಎನ್. ಸತ್ಯ, ಬುಲೇಟ್ ಪ್ರಕಾಶ್ ಸಾಥ್ ನೀಡುತ್ತಿದ್ದಾರೆ. ಹರೀಶ್ ರಾಜ್ ಪ್ರೊಡಕ್ಷನ್ ಅಡಿ ಚಿತ್ರ ನಿರ್ಮಾಣ ಆಗುತ್ತಿದೆ.
ಜೀವನದ ಮಹತ್ವದ ತಿರುವನ್ನು ಪಡೆಯಲು ಚಿತ್ರರಂಗಕ್ಕೆ ಕಾಲಿರಿಸಿರುವ ಇವರಿಗೆ ಇದು ನಿಜಕ್ಕೂ ಒಂದು ಬ್ರೇಕ್ ಕೊಡುವ ಚಿತ್ರವಾಗುತ್ತಾ ಅನ್ನುವುದನ್ನು ಕಾದು ನೋಡಬೇಕಾಗಿದೆ.