ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಅಳಿಯ ಅನಿರುದ್ಧ್ ಈಗ ನಿರ್ದೇಶಕ (Vishnuvardhan | Aniruddh | Nemichandra)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟ ಅನಿರುದ್ಧ ಕ್ಯಾಮರಾ ಕೈಗೆತ್ತಿಕೊಂಡಿದ್ದಾರೆ. ಇದೇನು ನಟನೆ ಬಿಟ್ಟರಾ ಅಂತ ಅಂದುಕೊಳ್ಳಬೇಡಿ. ನಟನೆಯೇನೂ ಬಿಡಲ್ಲ. ಆದರೆ, ಇವರೀಗ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ನೇಮಿಚಂದ್ರರ ಕಥೆಯೊಂದನ್ನು ಕೈಗೆತ್ತಿಕೊಂಡು ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಭವಿಷ್ಯದ ಕನಸು ಹೊತ್ತಿರುವ ಇವರೀಗ ಮಂಗಳೂರಲ್ಲಿ ಕುಳಿತು ನಿರ್ದೇಶನದ ಸ್ಕೆಚ್ ಹಾಕುತ್ತಿದ್ದಾರೆ.

ಮಾತಿಗಿಳಿದಾಗ ಅವರು ಹೇಳಿದ್ದಿಷ್ಟು, ಕನ್ನಡಕ್ಕೆ ಗರಿಷ್ಠ ಜ್ಞಾನಪೀಠ ಸಂದಿದೆ. ಇದರರ್ಥ ನಮ್ಮಲ್ಲಿ ಸಾಕಷ್ಟು ಉತ್ತಮ ಕಥೆ, ಸಾಹಿತ್ಯದ ಪರಂಪರೆ ಇದೆ. ಆದರೂ ಯಶಸ್ವಿ ಚಿತ್ರ ನೀಡಲಾಗದೆ ಚಿತ್ರರಂಗ ಸಂಕಷ್ಟದಲ್ಲಿದೆ. ಇದನ್ನೆಲ್ಲಾ ಮನಸ್ಸಲ್ಲಿಟ್ಟುಕೊಂಡೇ ನಿರ್ದೇಶನದತ್ತ ಮುಖಮಾಡಿದ್ದೇನೆ. ಕನ್ನಡ ಚಿತ್ರರಂಗ ಅಂತಲೇ ಅಲ್ಲ, ಇತರ ಪ್ರಾದೇಶಿಕ ಚಿತ್ರರಂಗಗಳೂ ಸೊರಗುತ್ತಿವೆ. ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದಾಗಿ ಜಾಗತಿಕ ಗುಣಮಟ್ಟದ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಲಭಿಸಿದೆ. ಸಿನೆಮಾಗಳಲ್ಲೂ ಅಂತಹುದೇ ಗುಣಮಟ್ಟ ನೀರೀಕ್ಷಿಸುತ್ತಾರೆ. ಅದು ತಪ್ಪಲ್ಲ. ಅದನ್ನೇ ನೀಡಲು ನಾನು ಯತ್ನಿಸುತ್ತೇನೆ ಎನ್ನುತ್ತಾರೆ.

ನಮ್ಮಲ್ಲಿರುವ ಉತ್ಕ್ಕಷ್ಟ ಸಾಹಿತ್ಯವನ್ನು ಚಲನಚಿತ್ರದಲ್ಲಿ ಬಳಸಿಕೊಳ್ಳುವ ಮೂಲಕ ಸ್ವಮೇಕ್ ಚಿತ್ರ ತಯಾರಿಸಬೇಕು. ಕತೆಗಾರ್ತಿ ನೇಮಿಚಂದ್ರರ ಕಥೆ ಆಧಾರಿತ ಚಿತ್ರಕಥೆ ಬರೆಯುತ್ತಿದ್ದೇನೆ. ತಿಂಗಳ ಅಂತ್ಯಕ್ಕೆ ರೆಡಿಯಾಗುತ್ತೆ. ನಿರ್ದೇಶಕನ ಜವಾಬ್ದಾರಿ ವಹಿಸಿಕೊಂಡು ಉತ್ತಮ ಚಿತ್ರ ನೀಡಬೇಕೆಂಬ ತುಡಿತವಿದೆ. ಚಿತ್ರಕ್ಕೆ ಇನ್ನೂ ಹೆಸರು ಇಟ್ಟಿಲ್ಲ ಎನ್ನುತ್ತಾರೆ.

ಆರ್ಥಿಕ ಹಿಂಜರಿತದಿಂದಾಗಿ ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದೆ. ಇದು ಚಿತ್ರರಂಗದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಚಿತ್ರ ನಿರ್ಮಾಣಕ್ಕೆ ನಿರ್ಮಾಪಕರು ಮುಂದೆ ಬರುತ್ತಿಲ್ಲ. ಹಾಕಿದ ಬಂಡವಾಳ ವಾಪಸ್ ಬರುತ್ತದೆಂಬ ಗ್ಯಾರಂಟಿ ಇಲ್ಲ. ಚಿತ್ರರಂಗಕ್ಕೆ ನಿಜವಾಗಲೂ ಸಂಕಷ್ಟ ಕಾಲ ಎನ್ನುವುದು ಅವರ ಅಭಿಪ್ರಾಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಅನಿರುದ್ಧ್, ನೇಮಿಚಂದ್ರ